ನವದೆಹಲಿ: ಒಡಿಶಾದ ಜಗತ್ ಸಿಂಗಪುರ್ ಜಿಲ್ಲೆಯ 1000 ವರ್ಷ ಹಳೆಯ ದೇವಾಲಯದ ಪೂಜಾರಿಗಳು ಬೈಕ್ ಸವಾರರು ಹೆಲ್ಮೆಟ್ ಗಳನ್ನ ಹೊಂದಿರದಿದ್ದರೆ ಅವರ ಪೂಜಾ ಕಾರ್ಯವನ್ನೇ ನೀರಾಕರಿಸುವ ವಿಶಿಷ್ಟ ನಿಯಮಕ್ಕೆ ದೇವಸ್ತಾನ ಚಾಲನೆ ನೀಡಿದೆ.


COMMERCIAL BREAK
SCROLL TO CONTINUE READING

 ಸರಲಾ ಮಾ ದೇವಸ್ತಾನದ ಆಡಳಿತವು ಒಂದು ತಿಂಗಳು ಹಿಂದೆ ಹೆಲ್ಮೆಟ್-ಪೂಜೆಯ ಪಾಲಿಸಿಯನ್ನು ಪೊಲೀಸ್ ಸೂಚನೆಯನ್ವಯ ಜಾರಿಗೆ ತಂದಿದೆ. ಹೆಲ್ಮೆಟ್ ಇಲ್ಲದೆ ದೇವಸ್ತಾನಕ್ಕೆ ಬರುವ ಸವಾರರ ವಾಹನಗಳ ಪೂಜೆಯನ್ನು ತಿರಸ್ಕರಿಸುವ ನಿಯಮವನ್ನು ಈ ಯೋಜನೆಯಲ್ಲಿ  ಅಳವಡಿಸಿಕೊಂಡಿದೆ 


ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಸವಾರಿ ಮಾಡುವುದರ ಪರಿಣಾಮವಾಗಿ ರಸ್ತೆ ಅಪಘಾತಗಳ ಸಂಖ್ಯೆ ಅಧಿಕ ಪ್ರಮಾಣದಲ್ಲಿ ಏರಿಕೆಯಾಗಿತ್ತು.ಆದ್ದರಿಂದ  ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು  ಕಾರ್ಯತಂತ್ರವನ್ನು ರೂಪಿಸಿದ್ದರು. ಅದರ  ಭಾಗವಾಗಿ ಜಿಲ್ಲೆಯ ದೇವಾಲಯದ ಸಹಾಯದೊಂದಿದೆ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಜಗತ್ ಸಿಂಗಪುರ್ ಜಿಲ್ಲೆಯ  ಪೊಲೀಸ್ ಅಧೀಕ್ಷಕ ಜೈ ನಾರಾಯಣ್ ಪಂಕಜ್ ತಿಳಿಸಿದ್ದಾರೆ.