ನವದೆಹಲಿ: ದಂತೇವಾಡಾ ನಕ್ಸಲ್ ದಾಳಿ ವಿಚಾರವಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಮಾವೋವಾದಿ ಕಮ್ಯುನಿಸ್ಟ್ ಪಾರ್ಟಿ  ತಮ್ಮ ಉದ್ದೇಶ ಮಾಧ್ಯಮದವರನ್ನು ಕೊಲ್ಲುವುದಾಗಿರಲಿಲ್ಲ ಎಂದು ಎರಡು ಪುಟಗಳ ಕೈ ಪತ್ರದಲ್ಲಿ ತಿಳಿಸಿದೆ. 



COMMERCIAL BREAK
SCROLL TO CONTINUE READING

ಛತ್ತೀಸ್ಗಢದ ದಾಂತೇವಾಡಾ ಜಿಲ್ಲೆಯ ಮಂಗಳವಾರ ನಡೆದ ನಕಲಿ ಎನ್ಕೌಂಟರ್ನಲ್ಲಿ ಇಬ್ಬರು ಪೊಲೀಸರು ಮತ್ತು ಡಿಡಿ ಛಾಯಾಗ್ರಾಹಕ ಅಚ್ಯುತಿಯಾನ್ ಮೃತಪಟ್ಟಿದ್ದರು. ಇಬ್ಬರು ಗಾಯಗೊಂಡಿದ್ದರು. ಈಗ ಈ ದಾಳಿಯ ವಿಚಾರವಾಗಿ ಸ್ಪಷ್ಟನೆ ನೀಡಿರುವ ಮಾವೋವಾದಿ ಕಮ್ಯುನಿಸ್ಟ್ ಪಾರ್ಟಿ ದರ್ಭಾ ವಿಭಾಗ ಸಮಿತಿಯ ಮುಖ್ಯಸ್ಥ ಸಾಯಿನಾಥ್  "ಪ್ರತಿದಿನ, ನಮ್ಮ ಹಳ್ಳಿಗಳ ಮೇಲೆ ದಾಳಿ ಮಾಡಲಾಗಿದೆ, ನಕಲಿ ಎನ್ಕೌಂಟರ್ಗಳಲ್ಲಿ ಸ್ಥಳೀಯರು ಹೊಡೆದು ಕೊಲ್ಲಲ್ಪಡಲಾಗಿದೆ , ನಕಲಿ ಪ್ರಕರಣಗಳ ಮೇಲೆ ಅವರನ್ನು ಜೈಲಿಗೆ ತಳ್ಳಲಾಗಿದೆ. ಕೆಲವರನ್ನು ಬಂಧಿಸಿ ಮಾಧ್ಯಮಗಳ ಎದುರು ನಕ್ಸಲರು ಎಂದು ಬಿಂಬಿಸಲಾಗುತ್ತಿದೆ. ಇದೀಗ ಇದೆಲ್ಲವೂ ಕೂಡ ಸಾಮಾನ್ಯ ಎನ್ನುವಂತಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಆ ಮೂಲಕ ರಾಜಕೀಯ ಪಕ್ಷಗಳು ಮಾಧ್ಯಮಗಳನ್ನು ತಪ್ಪು ದಾರಿಗೆಳೆಯುತ್ತಿವೆ ಎಂದು ನಕ್ಸಲರು ಆರೋಪಿಸಿದ್ದಾರೆ.


ಅಕ್ಟೋಬರ್ 30 ರಂದು ಎನ್ಕೌಂಟರ್ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ, ಪ್ರತಿ ದಿನವೂ ಪೋಲೀಸರು ಒಂದಿಲ್ಲ ಒಂದು ದಿನ ಹೊಂಚು ಹಾಕುತ್ತಲೇ ಇರುತ್ತಾರೆ. ದಾಳಿಯ ವೇಳೆ ದೂರದರ್ಶನ ತಂಡವೂ ಸಹ ಅಸ್ತಿತ್ವದಲ್ಲಿದೆ ಎಂದು ನಮಗೆ ತಿಳಿದಿಲ್ಲ. ನಮ್ಮ ಮೇಲೆ ಬಲವಂತವಾಗಿ ಗುಂಡಿನ ದಾಳಿ ನಡೆದು ಸಾಹು ಸಾವಿಗೆ ಕಾರಣವಾಯಿತು. ನಮ್ಮ  ಉದ್ದೇಶ ಪತ್ರಕರ್ತರನ್ನು ಕೊಲ್ಲುವುದಿಲ್ಲ "ಎಂದು ಪತ್ರದಲ್ಲಿ  ತಿಳಿಸಿದೆ.


ಇದೇ ಸಂದರ್ಭದಲ್ಲಿ ಪತ್ರಕರ್ತರು ಚುನಾವಣಾ ಕರ್ತ್ಯವ್ಯದಲ್ಲಿರುವ ಪೋಲೀಸರ ಜೊತೆ  ಅದರಲ್ಲಿ ಸಂಘರ್ಷದ ವಲಯಗಳಲ್ಲಿ ಸೇರಬಾರದು ಎಂದು ನಕ್ಸಲರು ಪತ್ರಕರ್ತರಿಗೆ ಸಲಹೆ ನೀಡಿದ್ದಾರೆ.