GST ರಿಟರ್ನ್ ಪಾವತಿಸುವವರಿಗೊಂದು ನೆಮ್ಮದಿಯ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ
ಜಿಎಸ್ಟಿ ಪರಿಷತ್ತಿನ 40 ನೇ ಸಭೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕರೋನಾ ಸಾಂಕ್ರಾಮಿಕದ ದೃಷ್ಟಿಯಿಂದ, ಈ ಸಭೆಯನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗಿದೆ.
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಇಂದು GST ಪರಿಷತ್ತಿನ 40ನೇ ಸಭೆ ಇಂದು ನಡೆದಿದೆ. ಈ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಕೊರೊನಾ ಪ್ರಕೋಪದ ಹಿನ್ನೆಲೆ ಈ ಸಭೆಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗಿದೆ. ಇದೆ ಮಾಧ್ಯಮದ ಮೂಲಕ GST ಕೌನ್ಸಿಲ್ ನ ಎಲ್ಲ ಸದಸ್ಯರು ಚರ್ಚೆ ನಡೆಸಿದ್ದಾರೆ.
ಈ ಸಭೆಯಲ್ಲಿ ಜುಲೈ 2017 ರಂದ ಜನವರಿ 202೦ ರವರೆಗೆ ಸಾಕಷ್ಟು GST ರಿಟರ್ನ್ ಫೈಲಿಂಗ್ ಬಾಕಿ ಉಳಿದಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಹಿತಿ ನೀಡಿದ್ದಾರೆ. ಈ ಎಲ್ಲ ರಿಟರ್ನ್ ಗಳಿಗೆ ಯಾವುದೇ ರೀತಿಯ ತೆರಿಗೆ ಹೊಣೆಗಾರಿಕೆ ಇಲ್ಲ ಮತ್ತು ಜುಲೈ 2017 ರಿಂದ ಜನವರಿ 2020ರ ಅವಧಿಯಲ್ಲಿ ರಿಟರ್ನ್ಸ್ ಸಲ್ಲಿಸದ ಯಾರಿಗೂ ಕೂಡ ಲೇಟ್ ಶುಲ್ಕ ವಿಧಿಸಲಾಗುವುದಿಲ್ಲ ಎಂದು ವಿತ್ತ ಸಚಿವೆ ಹೇಳಿದ್ದಾರೆ.
ಪ್ರಸ್ತುತ ದಿನಕ್ಕೆ ರೂ.50 ಅಥವಾ ಕಳೆದ 6 ತಿಂಗಳಿನಿಂದ GST ರಿಟರ್ನ್ ಫೈಲ್ ಮಾಡದೆ ಇರುವವರಿಗೆ ರೂ.10000 ದಂಡ ವಿಧಿಸಲಾಗುತ್ತಿತ್ತು. GST ರಿಟರ್ನ್ ಫೈಲ್ ಫೈಲ್ ಮಾಡದೆ ಇರುವವರ ಮೇಲೆ ವಿಧಿಸಲಾಗುವ ಈ ದಂಡದಿಂದ ವ್ಯಾಪಾರಿಗಳ ಮೇಲೆ ತೀವ್ರ ಒತ್ತಡವಿತ್ತು. ಸರ್ಕಾರದ ಈ ಹೆಜ್ಜೆಯಿಂದ ಅವರಿಗೆ ಭಾರಿ ನೆಮ್ಮದಿ ಸಿಗುವ ನಿರೀಕ್ಷೆ ಇದೆ.
ಅಂತೆಯೇ, ಜುಲೈ 2017 ರಿಂದ ಜನವರಿ 2020 ರವರೆಗೆ ಜಿಎಸ್‌ಟಿಆರ್ -3 ಬಿ ರಿಟರ್ನ್ಸ್ ಸಲ್ಲಿಸದವರಿಗೆ ಗರಿಷ್ಠ ವಿಳಂಬ ಶುಲ್ಕವನ್ನು 500 ರೂ.ಗೆ ಇಳಿಸಲಾಗಿದೆ. 1 ಜುಲೈ 2020 ರಿಂದ ಸೆಪ್ಟೆಂಬರ್ 30 ರವರೆಗೆ ಫೈಲ್ ಮಾಡಲಾಗುವ ರಿಟರ್ನ್ ಗಳ ಮೇಲೆ ಈ ನಿಯಮ ಅನ್ವಹಿಸಲಿದೆ. ಈಗಾಗಲೇ ಸರ್ಕಾರ ಫೆಬ್ರವರಿ 2020 ರಿಂದ ಮೇ 2020 ರವರೆಗೆ GSTR-3ಬಿ ರಿಟರ್ನ್ ಫೈಲ್ ಮಾಡಲು ವಿಧಿಸಲಾಗುತ್ತಿರುವ ಲೇಟ್ ಫಿ ಅನ್ನು ಮನ್ನಾ ಮಾಡಿದೆ ಎಂಬುದು ಇಲ್ಲಿ ಉಲ್ಲೇಖನೀಯ.