`ರಾಷ್ಟ್ರೀಯ ಪಕ್ಷದ ಜೊತೆಗೆ ಮೈತ್ರಿಯ ಅವಶ್ಯಕತೆ ಇಲ್ಲ`- ಬಿಜೆಪಿಗೆ ಎಐಎಡಿಎಂಕೆ ಸ್ಪಷ್ಟ ಸಂದೇಶ
ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಪಕ್ಷವು ತನಗೆ ನಿರ್ದೇಶನ ನೀಡಲು ಬರುವ ರಾಷ್ಟ್ರೀಯ ಪಕ್ಷದ ಅಗತ್ಯವಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಬಿಜೆಪಿಗೆ ರವಾನಿಸಿದೆ.
ನವದೆಹಲಿ: ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಪಕ್ಷವು ತನಗೆ ನಿರ್ದೇಶನ ನೀಡಲು ಬರುವ ರಾಷ್ಟ್ರೀಯ ಪಕ್ಷದ ಅಗತ್ಯವಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಬಿಜೆಪಿಗೆ ರವಾನಿಸಿದೆ.
ಚುನಾವಣೆಯಲ್ಲಿ ಗೆದ್ದರೆ ಬಡವರಿಗೆ ಪ್ರತಿ ತಿಂಗಳು 1,500 ರೂ. ನೀಡುತ್ತಂತೆ ಈ ಪಕ್ಷ!
ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಎಐಎಡಿಎಂಕೆ ಅವರ ಮುಖವಾಗಲಿದ್ದು, ಕೆಲವೇ ತಿಂಗಳುಗಳಲ್ಲಿ ಚುನಾವಣೆ ಇರುವ ಹಿನ್ನಲೆಯಲ್ಲಿ ಪಕ್ಷವು ಭಾನುವಾರ ಪುನರುಚ್ಚರಿಸಿತು, ಬಿಜೆಪಿಯ ಪ್ರಕಾಶ್ ಜಾವಡೇಕರ್ ಅವರು ಪಳನಿಸ್ವಾಮಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರತಿಕ್ರಿಯಿಸಲು ನಿರಾಕರಿಸಿದ ಕೆಲ ದಿನಗಳ ನಂತರ ಈ ಹೇಳಿಕೆ ಬಂದಿದೆ.
ವಿಧಾನಸಭೆಯಲ್ಲೂ ಬಿಜೆಪಿ ಜೊತೆಗಿನ ಎಐಎಡಿಎಂಕೆ ಮೈತ್ರಿ ಮುಂದುವರೆಯಲಿದೆ- ತಮಿಳುನಾಡು ಸಿಎಂ ಪಳನಿಸ್ವಾಮಿ
ರಾಜ್ಯ ಚುನಾವಣೆಗಳ ಉಪ ಸಂಯೋಜಕರಾಗಿರುವ ಎಐಎಡಿಎಂಕೆ ಸಂಸದ ಕೆಪಿ ಮುನುಸಾಮಿ ಭಾನುವಾರ ತಮ್ಮ ಪಕ್ಷ ಮತದಾನ ಮೈತ್ರಿಕೂಟವನ್ನು ಮುನ್ನಡೆಸಲಿದೆ ಎಂದು ಹೇಳಿದರು.ಯಾವುದೇ ರಾಷ್ಟ್ರೀಯ ಪಕ್ಷವು ನಿರ್ದೇಶಿಸಲು ಬಯಸಿದರೆ, ಅಂತಹ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಗೆ ರಾಜ್ಯದಲ್ಲಿ ಶಾಸಕ ಅಥವಾ ಸಂಸದರಿಲ್ಲದಿರುವುದು, ಎಐಎಡಿಎಂಕೆಗೆ ಕಠಿಣ ಸಂದೇಶವನ್ನು ರವಾನಿಸಲು ಪ್ರೇರೇಪಿಸಿದೆ ಎನ್ನಲಾಗಿದೆ.ಒಂಬತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಎಐಎಡಿಎಂಕೆ ಸರ್ಕಾರವು ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ, ಮತ್ತು ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಹಿನ್ನಡೆ ಅನುಭವಿಸಿತ್ತು.
ಚುನಾವಣಾ ವೈಫಲ್ಯ: ಸಿಎಂ ಸ್ಥಾನಕ್ಕೆ ಪಳನಿಸ್ವಾಮಿ ರಾಜೀನಾಮೆಗೆ ಡಿಎಂಕೆ ಆಗ್ರಹ
ವೈದ್ಯಕೀಯ ಪ್ರವೇಶಕ್ಕಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇಕಡಾ 7.5 ರಷ್ಟು ಮೀಸಲಾತಿ, ರಾಜ್ಯದಾದ್ಯಂತ 2,000 ಅಮ್ಮಾ ಮಿನಿ ಚಿಕಿತ್ಸಾಲಯಗಳು ತಮಗೆ ವರವಾಗಲಿದೆ ಎಂದು ಪಳನಿಸ್ವಾಮಿ ಹೇಳಿದ್ದಾರೆ.