ನವದೆಹಲಿ: ಬಿಜೆಪಿ ಅಭ್ಯರ್ಥಿ ಪ್ರಗ್ಯಾ ಸಿಂಗ್ ಠಾಕೂರ್ ವಿರುದ್ದ ಕಿಡಿ ಕಾರಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ " ಒಂದು ವೇಳೆ ಸಾಧ್ವಿ ಪಾಕ್ ಮೂಲದ ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರ ಮಸೂದ್ ಅಜರ್ ಗೆ ಶಾಪ ಹಾಕಿದ್ದರೆ ಯಾವ ಸರ್ಜಿಕಲ್ ಸ್ಟ್ರೈಕ್ ಅಗತ್ಯವಿರಲಿಲ್ಲ ಎಂದು ಹೇಳಿದರು.


COMMERCIAL BREAK
SCROLL TO CONTINUE READING

ಭೂಪಾಲ್ ನಲ್ಲಿ ಅಶೋಕ್ ಗಾರ್ಡನ್ಸ್ ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಸಿಂಗ್ " ಠಾಕೂರ್ ಅವರು ದೇಶಕ್ಕಾಗಿ ತ್ಯಾಗ ಮಾಡಿರುವ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆಗೆ ಶಾಪ ಹಾಕಿರುವುದಾಗಿ ಹೇಳುತ್ತಾರೆ. ಹಾಗಾದರೆ ಅವರು ಪಾಕ್ ಮೂಲದ ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರ ಮಸೂದ್ ಅಜರ್ ಗೆ ಶಾಪ ಹಾಕಿದ್ದರೆ ಯಾವ ಸರ್ಜಿಕಲ್ ಸ್ಟ್ರೈಕ್ ಅಗತ್ಯವಿರಲಿಲ್ಲ" ಎಂದರು.   


ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ ದಿಗ್ವಿಜಯ್ ಸಿಂಗ್ "ಪ್ರಧಾನಿ ಮೋದಿ ಉಗ್ರರು ನರಕದಲ್ಲಿ ಅಡಗಿದ್ದಾಗಲೂ ಕೂಡ ಬೇಟೆಯಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಈಗ ನಾನು ಅವರಿಗೆ ಕೇಳುವುದಿಷ್ಟೇ, ಪುಲ್ವಾಮಾ ಪಠಾನ್ ಕೋಟ ಮತ್ತು ಉರಿ ದಾಳಿ ಸಂಭವಿಸಿದಾಗ ಎಲ್ಲಿದ್ದರು? ನಮಗೇಕೆ ಅಂತಹ ದಾಳಿಯನ್ನು ತಡೆಯಲು ಸಾಧ್ಯವಿಲ್ಲ" ಎಂದು ಪ್ರಶ್ನಿಸಿದರು.


ಹಿಂದೂ-ಮುಸ್ಲಿಂ-ಸಿಖ್-ಕ್ರಿಶ್ಚಿಯನ್ನರು ಸಹೋದರರ ಹಾಗೆ ಬದುಕುತ್ತಿದ್ದಾರೆ. ಕೆಲವರು ಹಿಂದೂಗಳು ಅಪಾಯದಲ್ಲಿರುವುದರಿಂದ ಒಗ್ಗೂಡಿಸಬೇಕೆಂದು ಹೇಳುತ್ತಿದ್ದಾರೆ.ಆದರೆ ಈ ದೇಶವನ್ನು 500 ವರ್ಷಗಳಿಂದ ಮುಸ್ಲಿಮರು ಆಳಿದ್ದಾರೆ. ಆದರೆ ಆಗ ಯಾವುದೇ ಧರ್ಮಕ್ಕೆ ಹಾನಿಯಾಗಿರಲಿಲ್ಲ. ಆದರಿಂದ ಧರ್ಮವನ್ನು ಮಾರುವ ಜನರಿಗೆ ಜಾಗರೂಕರಾಗಿರಿ." ಸಿಂಗ್ ಹೇಳಿದರು.