protection no needed for wildlidfe : ಕೇಂದ್ರ ಪರಿಸರ ಅರಣ್ಯ ಮತ್ತು ವಾಯುಗುಣ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಗುರುವಾರ  ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 11 ಅಡಿ ಕಾಡು ಹಂದಿಗಳನ್ನು ಉಪದ್ರವಿಪ್ರಾಣಿ ಎಂದು ಘೋಷಿಸಲು ಮುಖ್ಯ ವನ್ಯಜೀವಿ ರಕ್ಷಕರಿಗೆ ಅಧಿಕಾರವಿದೆ ಮತ್ತು ಅದರಲ್ಲಿ ಯಾವುದೇ ತಿದ್ದುಪಡಿ ತರುವ ಅಗತ್ಯ ಇಲ್ಲ ಎಂದು ಹೇಳಿದರು. 


COMMERCIAL BREAK
SCROLL TO CONTINUE READING

ಕೇರಳದಲ್ಲಿ ಜನರ ಮೇಲೆ ವನ್ಯಜೀವಿಗಳು ದಾಳಿ ನಡೆಸುತ್ತಿತು ಅದರ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಭೂಪೇಂದ್ರಯಾದವ್ ಅವರು ವಯನಾಡಿಗೆ ಭೇಟಿ ನೀಡಿದ್ದರು. ಮತ್ತು ಸ್ಥಳೀಯ ಆಡಳಿತ ಮತ್ತು ಅರಣ್ಯಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮಗಳ ಎದುರಿಗೆ ಈ ರೀತಿ ಹೇಳಿಕೆ ನೀಡಿದ್ದಾರೆ. 


ಇದನ್ನು ಓದಿ :Female Fertility: ಈ ಮೂರು ಗಿಡಮೂಲಿಕೆಗಳು ಮಹಿಳೆಯರಿಗೆ ಗರ್ಭಧರಿಸಲು ಸಹಾಯ ಮಾಡುತ್ತವೆ!


ಸಮಸ್ಯೆ ಉಂಟು ಮಾಡುವ ಪ್ರಾಣಿಗಳನ್ನು ಬಲೆಗೆ ಬೀಳಿಸಲು ಸೆರೆ ಹಿಡಿಯಲು ಮತ್ತು ಕೊಲ್ಲಲು ವನ್ಯಜೀವಿ ರಕ್ಷಕರಿಗೆ ಅಧಿಕಾರವಿದೆ ಮತ್ತು ನಾನು ಕೇರಳ ಸರ್ಕಾರವನ್ನು ಅವರ ಬೆಳೆಗಳನ್ನು ಮತ್ತು ಕೃಷಿ ಸಮುದಾಯವನ್ನು ರಕ್ಷಿಸುವಂತೆ ಒತ್ತಾಯಿಸುತ್ತಿದ್ದೇನೆ ಎಂದರು. 


ಇದನ್ನು ಓದಿ :ರಾಜ್ಯದ ಉದ್ಯೋಗಾಕಾಂಕ್ಷಿ ಯುವಜನತೆಗೆ ಇಲ್ಲೊಂದು ಸುವರ್ಣಾವಕಾಶ..!


ಕೇರಳ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಆನೆಗಳ ಓಡಾಟಕ್ಕೆ ಅನುಕೂಲವಾಗುವಂತ ಕಾರಿಡಾರ್ ನಿರ್ಮಾಣ ಯೋಜನೆಗೆ ಭಾರತೀಯ ವನ್ಯ ಜೀವಿ ಸಂಸ್ಥೆಯು ಸಹಕಾರ ನೀಡಲಿದೆ ಎಂದರು


ವನ್ಯಜೀವಿ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷದಿಂದ 10 ಲಕ್ಷಕ್ಕೆ ಪರಿಹಾರವನ್ನು ಏರಿಸಲಾಗಿದೆ ಮತ್ತು ಸಂತ್ರಸ್ಥರ ಕುಟುಂಬಗಳಿಗೆ ರಾಜ್ಯವು ಕೂಡಲೇ ಪರಿಹಾರ ಮೊತ್ತವನ್ನು ನೀಡಬೇಕು ಮತ್ತು ಇದು ಪಾರದರ್ಶಕವಾಗಿ ನಡೆಯಬೇಕು ಎಂದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.