ನವದೆಹಲಿ: ನೀವು ಹೊಸ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಜುಲೈ ಅಂತ್ಯದರವರೆಗೆ ಕಾಯಿರಿ ಏಕೆಂದರೆ ನಿಯಮಗಳು ಆಗಸ್ಟ್ 1 ರಿಂದ ಬದಲಾಗಲಿವೆ. ಹೊಸ ನಿಯಮದ ಪ್ರಕಾರ, ಈ ಸಮಯದಲ್ಲಿ ವಾಹನದ ವಿಮೆಗಾಗಿ ಖರ್ಚು ಮಾಡಿದ ದೊಡ್ಡ ಮೊತ್ತದಿಂದ ನಿಮಗೆ ಪರಿಹಾರ ಸಿಗಲಿದೆ. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಈ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸಿದೆ.


COMMERCIAL BREAK
SCROLL TO CONTINUE READING

3-5 ವರ್ಷಗಳ ದೀರ್ಘಾವಧಿ ವಿಮೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ
ಇದಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿರುವ IRDAI, 1 ಆಗಸ್ಟ್ 2020 ರಿಂದ ಖರೀದಿಸಲಾಗುವ ಹೊಸ ವಾಹನ (ದ್ವಿಚಕ್ರ ಹಾಗೂ ನಾಲ್ಕು ಚಕ್ರ)ಗಳಿಗಾಗಿ 3-5 ವರ್ಷಗಳಿಗೆ ಪಡೆಯಲಾಗುವ ಥರ್ಡ್ ಪಾರ್ಟಿ ಹಾಗೂ Own Damage ವಿಮೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಅದರ ಯಾವುದೇ ಅವಶ್ಯಕತೆ ಇಲ್ಲ ಎಂದು ಪ್ರಾಧಿಕಾರ ಹೇಳಿದೆ.


2018 ರಲ್ಲಿ ಈ ನಿಯಮ ಜಾರಿಗೆ ಬಂದಿತ್ತು
ಸುಪ್ರೀಂ ಕೋರ್ಟ್ ಆದೇಶದ ಬಳಿಕ IRDAI 28 ಆಗಸ್ಟ್ 2018 ರಂದು IRDAI/NL/CIR/MOT/13708/2018 ಅಧಿಸೂಚನೆ ಜಾರಿಗೊಳಿಸಿ ಕಾರ್ ಗಳಿಗಾಗಿ ಮೂರು ವರ್ಷಗಳ ಥರ್ಡ್ ಪಾರ್ಟಿ ವಿಮೆ ಹಾಗೂ ಬೈಕ್ ಗಳಿಗಾಗಿ 5 ವರ್ಷಗಳ ವಿಮೆ ತೆಗೆದುಕೊಳ್ಳುವುದನ್ನು ಅನಿವಾರ್ಯಗೊಳಿಸಿತ್ತು. ಈ ನಿಯಮ ಸೆಪ್ಟೆಂಬರ್ 1,2018 ರಿಂದ ಜಾರಿಗೆ ಬಂದಿತ್ತು.


ದೀರ್ಘಾವಧಿ ಪಾಲಸಿಗಳ ಪರ್ಫಾರ್ಮೆನ್ಸ್ ಅನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಣಯ ಕೈಗೊಳ್ಳಲಾಗಿದ್ದು, ಆಗಸ್ಟ್ 1 ರಿಂದ ಇಂತಹ ಪಾಲಸಿ ಪಡೆಯುವುದು ಅನಿವಾರ್ಯವಾಗಿಲ್ಲ ಎಂದು ಹೇಳಿದೆ.