ಕರೋನಾಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ, ದೆಹಲಿಯಲ್ಲಿ ನೈಟ್ ಕರ್ಫ್ಯೂ ಮತ್ತು ಮಾಸ್ಕ್ ಕುರಿತು ಬದಲಾಯಿತು ನಿಯಮ
ದೆಹಲಿಯಲ್ಲಿ ಕೊರೊನಾ ವೈರಸ್‌ನ ಪಾಸಿಟಿವ್ ದರವು ಶೇಕಡಾ ಒಂದಕ್ಕಿಂತ ಕಡಿಮೆಯಿರುವ ಕಾರಣ, ಸೋಮವಾರದಿಂದ ದೆಹಲಿಯಲ್ಲಿ ರಾತ್ರಿ ಕರ್ಫ್ಯೂ ಕೊನೆಗೊಳ್ಳಲಿದೆ.
ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾವೈರಸ್ (Coronavirus)ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದ ಹಿನ್ನಲೆಯಲ್ಲಿ, ಈ ಹಿಂದೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ (Corona guidelines). ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು (Delhi Disaster Management Authority)ಈ ಬಗ್ಗೆ ದೊಡ್ಡ ಮಟ್ಟದ ರಿಲೀಫ್ ನೀಡಿದೆ. ಸೋಂಕನ್ನು ತಡೆಗಟ್ಟುವ ಉದ್ದೇಶದಿಂದ ಈ ಹಿಂದೆ ವಿಧಿಸಲಾಗಿದ್ದ ಹಲವು ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಡಿಡಿಎಂಎ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸೋಮವಾರದಿಂದ ರಾತ್ರಿ ಕರ್ಫ್ಯೂ ಇಲ್ಲ :
ದೆಹಲಿಯಲ್ಲಿ ಕೊರೊನಾ ವೈರಸ್‌ನ (Coronavirus) ಪಾಸಿಟಿವ್ ದರವು (Positivity Rate) ಶೇಕಡಾ ಒಂದಕ್ಕಿಂತ ಕಡಿಮೆಯಿರುವ ಕಾರಣ, ಸೋಮವಾರದಿಂದ ದೆಹಲಿಯಲ್ಲಿ ರಾತ್ರಿ ಕರ್ಫ್ಯೂ (Night Curfew) ಕೊನೆಗೊಳ್ಳಲಿದೆ. ಪ್ರಸ್ತುತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 6 ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ.
ಇದನ್ನೂ ಓದಿ : ವೈದ್ಯಕೀಯ ಶಿಕ್ಷಣಕ್ಕಾಗಿ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ನ್ನು ಆಯ್ಕೆ ಮಾಡುತ್ತಿರುವುದೇಕೆ?
ಮಾಸ್ಕ್ ಧರಿಸದೇ ಇದ್ದರೆ 500 ರೂಪಾಯಿ ದಂಡ :
ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (Delhi Disaster Management Authority) ಸಭೆಯ ನಂತರ, ದೆಹಲಿಯಲ್ಲಿ ಮಾಸ್ಕ್ ಧರಿಸದಿದ್ದಕ್ಕಾಗಿ ವಿಧಿಸ್ಲಾಗುತ್ತಿರುವ ದಂಡವನ್ನು ಕಡಿಮೆ ಮಾಡಲಾಗಿದೆ. ಇಲ್ಲಿಯವರೆಗೆ ಮಾಸ್ಕ್ (Mask)ಧರಿಸದಿದ್ದರೆ, 2000 ರೂಪಾಯಿ ದಂಡವನ್ನು ವಿಧಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಇದನ್ನೂ 500 ರೂಪಾಯಿಗೆ ಇಳಿಸಲಾಗಿದೆ.
ಬಸ್ಸುಗಳು ಮತ್ತು ಮೆಟ್ರೋದಲ್ಲಿ ನಿಲ್ಲಲು ಅನುಮತಿ :
ದೆಹಲಿಯಲ್ಲಿ ಬಸ್ ಮತ್ತು ಮೆಟ್ರೋದಲ್ಲಿ (Delhi Metro) ನಿಂತು ಪ್ರಯಾಣಿಸಲು ಡಿಡಿಎಂಎ (DDMA)ಅನುಮತಿ ನೀಡಿದೆ. ಇದರೊಂದಿಗೆ ಅಂಗಡಿಗಳನ್ನು ತೆರೆಯುವ ಮತ್ತು ಮುಚ್ಚುವ ಸಮಯದಲ್ಲಿನ ಮಿತಿಯೂ ಕೊನೆಗೊಳ್ಳಲಿದೆ. ಇದಲ್ಲದೆ, ರೆಸ್ಟೋರೆಂಟ್‌ಗಳನ್ನು ತೆರೆಯಲು ಯಾವುದೇ ಸಮಯ ಮಿತಿ ಇರುವುದಿಲ್ಲ ಮತ್ತು ರೆಸ್ಟೋರೆಂಟ್‌ಗಳು ತಡರಾತ್ರಿಯವರೆಗೆ ತೆರೆದಿರುತ್ತವೆ.
ಇದನ್ನೂ ಓದಿ : Aadhaar Card ಬಳಕೆದಾರರ ಗಮನಕ್ಕೆ : ಆಧಾರ್ ಅಪ್‌ಡೇಟ್‌ಗೆ ಹೊಸ ಸೇವೆ ಆರಂಭ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.