ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣದ ಆರೋಪಿಗಳನ್ನು ಭಾರತಕ್ಕೆ ಗಡಿಪಾರು ಮಾಡುವಲ್ಲಿ ಯಶಸ್ವಿಯಾದ ಕೇಂದ್ರ ಸರ್ಕಾರವನ್ನು ಶ್ಲಾಘಿಸಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾರತಕ್ಕೆ ಮೋಸ ಮಾಡಿದವರು ಎಂದಿಗೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಜೇಟ್ಲಿ, ಭಾರತಕ್ಕೆ ವಂಚಿಸಿದ ಯಾರೇ ಆಗಿರಲಿ ವಿಶ್ವದಲ್ಲಿ ಎಲ್ಲೇ ಅಡಗಿದ್ದರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭಾರತದ ರಾಜತಾಂತ್ರಿಕ ಶಕ್ತಿ ಮತ್ತು ಹೆಚ್ಚು ನಾಗರಿಕ ಅಂತರರಾಷ್ಟ್ರೀಯ ಕಾರ್ಯವಿಧಾನಗಳು ಅವರನ್ನು ಪತ್ತೆಹಚ್ಚುತ್ತವೆ" ಎಂದಿದ್ದಾರೆ.



ಮುಂದುವರೆದು, "ಯುಪಿಎ ಅಸ್ಥಿಪಂಜರ ಈಗ ಉರುಳಾಡುತ್ತಿದೆ. ಎಲ್ಲ ರಕ್ಷಣಾ ಖರೀದಿಗಳಿಗೂ ಮಧ್ಯವರ್ತಿಗಳು ಏಕೆ ಬೇಕು?' ಎಂದು ಅವರು ಪ್ರಶ್ನಿಸಿರುವ ಜೇಟ್ಲಿ, ದೇಶದ ಪ್ರಧಾನಿ ಪ್ರಾಮಾಣಿಕವಾಗಿದ್ದರೆ, ರಾಷ್ಟ್ರದ ಆಡಳಿತದಲ್ಲಿ ಪ್ರಾಮಾಣಿಕತೆಯನ್ನು ಅಳವಡಿಸಿದ್ದರೆ ಭಾರತವನ್ನು ವಂಚಿಸಿದ ಯಾವ ವ್ಯಕ್ತಿಯೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಜೇಟ್ಲಿ ಟ್ವೀಟ್ ಮಾಡಿದ್ದಾರೆ.




ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಕ್ಯಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ರಾಜೀವ್ ಸಕ್ಸೇನಾ ಮತ್ತು ದೀಪಕ್ ತಲ್ವಾರ್ ಅವರನ್ನು ದುಬೈನಿಂದ ಬುಧವಾರ ಭಾರತಕ್ಕೆ ಕರೆತರಲಾಗಿತ್ತು.