ಪೋಸ್ಟ್ ಇರಲಿ, ಇಲ್ಲದಿರಲಿ, ರಾಹುಲ್ ಗಾಂಧಿ,ಪ್ರಿಯಾಂಕಾ ಪರವಾಗಿ ನಿಲ್ಲುವೆ-ನವಜೋತ್ ಸಿಂಗ್ ಸಿಧು
ಮಾಜಿ ಸಿಎಂ ಅಮರಿಂದರ್ ಸಿಂಗ್ ಜೊತೆಗಿನ ಜಟಾಪಟಿಯಲ್ಲಿ ಗಾಂಧಿ ಕುಟುಂಬದ ಬೆಂಬಲ ಪಡೆದಿದ್ದ ನವಜೋತ್ ಸಿದ್ದು, ಈಗ ತಮಗೆ ಪೋಸ್ಟ್ ಇರಲಿ ಅಥವಾ ಇಲ್ಲದಿರಲಿ ರಾಹುಲ್ ಗಾಂಧೀ ಮತ್ತು ಪ್ರಿಯಾಂಕಾ ಗಾಂಧೀ ಪರವಾಗಿ ನಿಲ್ಲುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ನವದೆಹಲಿ: ಮಾಜಿ ಸಿಎಂ ಅಮರಿಂದರ್ ಸಿಂಗ್ ಜೊತೆಗಿನ ಜಟಾಪಟಿಯಲ್ಲಿ ಗಾಂಧಿ ಕುಟುಂಬದ ಬೆಂಬಲ ಪಡೆದಿದ್ದ ನವಜೋತ್ ಸಿದ್ದು, ಈಗ ತಮಗೆ ಪೋಸ್ಟ್ ಇರಲಿ ಅಥವಾ ಇಲ್ಲದಿರಲಿ ರಾಹುಲ್ ಗಾಂಧೀ ಮತ್ತು ಪ್ರಿಯಾಂಕಾ ಗಾಂಧೀ ಪರವಾಗಿ ನಿಲ್ಲುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಗಾಂಧೀ ಜಯಂತಿ ಹಾಗೂ ಲಾಲ್ ಬಹದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಸಿದ್ದು "ಪೋಸ್ಟ್ ಇರಲಿ ಅಥವಾ ಇಲ್ಲದಿರಲಿ...ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಪರವಾಗಿ ನಾನು ನಿಲ್ಲುತ್ತೇನೆ'ಎಂದು ಘೋಷಿಸಿದರು.
ಇದನ್ನೂ ಓದಿ: ಯಾರಾಗ್ತಾರೆ ಪಂಜಾಬ್ ನೂತನ ಮುಖ್ಯಮಂತ್ರಿ? ರೇಸ್ನಲ್ಲಿ ಇರುವ ಹೆಸರುಗಳಿವು..
ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ರಾಜೀನಾಮೆ ಕಳೆದ ತಿಂಗಳು ರಾಜ್ಯದಲ್ಲಿ ನಾಯಕತ್ವ ಬಿಕ್ಕಟ್ಟಿಗೆ ಕಾರಣವಾಯಿತು. ಅವರೊಂದಿಗಿನ ಹಗೆತನದಲ್ಲಿ ಗಾಂಧಿ ಕುಟುಂಬದ ಬೆಂಬಲ ಪಡೆದ ಸಿದ್ದು (Navjot Singh Sidhu) ಕೂಡ 'ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ತತ್ವಗಳನ್ನು ಎತ್ತಿಹಿಡಿಯುವುದಾಗಿ"ಪ್ರತಿಜ್ಞೆ ಮಾಡಿದರು.ಅಷ್ಟೇ ಅಲ್ಲದೆ 'ಎಲ್ಲಾ ನಕಾರಾತ್ಮಕ ಶಕ್ತಿಗಳು ನನ್ನನ್ನು ಸೋಲಿಸಲು ಪ್ರಯತ್ನಿಸಲಿ,ಆದರೆ ಪ್ರತಿ ಔನ್ಸ್ ಪಾಸಿಟಿವ್ ಎನರ್ಜಿಯಿಂದ ಪಂಜಾಬ್ ಗೆಲ್ಲುತ್ತದೆ, ಪಂಜಾಬಿಯತ್ ಗೆಲ್ಲುತ್ತದೆ ಮತ್ತು ಪ್ರತಿ ಪಂಜಾಬಿ ಗೆಲ್ಲುತ್ತಾನೆ !! ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು : ನವಜೋತ್ ಸಿಂಗ್ ಸಿಧು ಮನವೊಲಿಕೆಯ ಜವಾಬ್ದಾರಿ ಸಿಎಂ ಚರಣ್ ಜೀತ್ ಹೆಗಲಿಗೆ
ಪಕ್ಷದ ಮೂಲಗಳ ಪ್ರಕಾರ ಸಿಧು ಅವರು ಕಾಂಗ್ರೆಸ್ ನ ಪಂಜಾಬ್ ಘಟಕದ ಅಧ್ಯಕ್ಷರಾಗಿ ಉಳಿಯುತ್ತಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರು ಮಾಡಿದ ಪಂಜಾಬ್ ಪೊಲೀಸ್ ಮುಖ್ಯಸ್ಥ ಮತ್ತು ಅಡ್ವೊಕೇಟ್-ಜನರಲ್ ಹುದ್ದೆಗಳನ್ನು ಒಳಗೊಂಡಂತೆ ಕೆಲವು ನೇಮಕಾತಿಗಳಿಂದ ಅವರು ಕೋಪಗೊಂಡಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ : Amazon ನಲ್ಲಿ ಆಫರ್ ಗಳ ಸುರಿಮಳೆ, ಸ್ಯಾಮ್ ಸಂಗ್ ನ ಈ ಫೋನ್ ಮೇಲೆ ಸಿಗಲಿದೆ 30 ಸಾವಿರಕ್ಕಿಂತ ಅಧಿಕ ರಿಯಾಯಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.