ಶಿಮ್ಲಾ: ಹಿಮಾಚಲ ಪ್ರದೇಶದ ಲಹರಾ ಟಿಕಾ ಗ್ರಾಮದ ನಿವಾಸಿ 83 ರ ಹರೆಯದ ಕೌಶಲ್ಯ ದೇವಿ ಅವರಿಗೆ ಇತ್ತೀಚಿಗೆ ಕಾಲಿನ ಆಪರೇಶನ್ ಮಾಡಿಸಬೇಕಾಯಿತು. ಗ್ರಾಮದಲ್ಲಿ ಯಾವುದೇ ರಸ್ತೆ ಅನುಕೂಲಗಳಿಲ್ಲದ ಕಾರಣ ಗ್ರಾಮಸ್ಥರು ಆಕೆಯನ್ನು ಮಂಚದ ಮೇಲೆ ಹೊತ್ತು ಆಸ್ಪತ್ರೆಗೆ ಕರೆದೊಯ್ದರು. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಟಿಕಾ ಗ್ರಾಮದ ನಿವಾಸಿಗಳು ಕಳೆದ ಹಲವು ದಶಕಗಳಿಂದ ರಸ್ತೆ ಇಲ್ಲದೆ ಜೀವನ ನಡೆಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಗ್ರಾಮಸ್ಥರು ರಸ್ತೆಗೆ ತಲುಪಲು ಸುಮಾರು 200 ಮೀಟರ್ಗಳಷ್ಟು ಕಚ್ಚಾ ರಸ್ತೆಯಲ್ಲಿ ನಡೆದು ಬರಬೇಕಾಗುತ್ತದೆ. ಈ ಕಚ್ಚಾ ರಸ್ತೆ ಕೇವಲ ಮೂರು ಅಡಿ ಅಗಲವಿದೆ. ಲೆಹ್ರಾ ಟಿಕ್ಕಾರ್ನ 300 ನಿವಾಸಿಗಳು ಎರಡು ದಶಕಗಳಿಗೂ ಹೆಚ್ಚು ಕಾಲ ಸರಿಯಾದ ದಾರಿಗಾಗಿ ತಮ್ಮ ಬೇಡಿಕೆಯನ್ನು ಇರಿಸಿದ್ದಾರೆ ಆದರೆ ಇದುವರೆಗೂ ಅವರ ಬೇಡಿಕೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಕೌಶಲ್ಯ ದೇವಿ ಸಂಬಂಧಿ ವಿಪಿನ್ ಕುಮಾರ್ ಆರೋಪಿಸಿದ್ದಾರೆ.


ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷದಿಂದ ತೊಂದರೆಗೀಡಾಗಿರುವ ಗ್ರಾಮಸ್ಥರು ಇದೀಗ ಚುನಾವಣೆಯಲ್ಲಿ ಮತಚಲಾಯಿಸದಿರಲು ನಿರ್ಧರಿಸಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವಂತೆ ಬೆದರಿಕೆ ಹಾಕಿದ್ದಾರೆ. ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವಂತೆ ಗ್ರಾಮದ ಸುತ್ತಲೂ ಬ್ಯಾನರ್ ಗಳನ್ನೂ ಹಾಕಲಾಗಿದೆ. ಅದರಲ್ಲಿ "ರಸ್ತೆ ಇಲ್ಲದಿದ್ದರೆ-ಮತವೂ ಇಲ್ಲ" ಎಂಬ ಘೋಷಣೆಗಳನ್ನೂ ಬರೆಯಲಾಗಿದೆ.


ಲಹರಾ ಟಿಕಾ ಗ್ರಾಮವು ಕಂಗಡ ಸಂಸದೀಯ ಕ್ಷೇತ್ರದ ಸುಲ್ಲಾಹ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಕಂಗಡ, ಬಿಜೆಪಿ ಅಭ್ಯರ್ಥಿ ಕಿಶನ್ ಕಪೂರ್ ಮತ್ತು ಎಂಎಲ್ಎ ವಿಪಿನ್ ಸಿಂಗ್ ಪರ್ಮಾರ್ ಅವರ ಸಲಹಾಕಾರರು ಅವರ ಬೆಂಬಲಿಗರೊಂದಿಗೆ ಏಪ್ರಿಲ್ 2 ರಂದು ಈ ಗ್ರಾಮದ ಮೂಲಕ ಹಾದುಹೋಗುವ ಸಂದರ್ಭದಲ್ಲಿ ಗ್ರಾಮಸ್ಥರು "ರಸ್ತೆ ಇಲ್ಲದಿದ್ದರೆ-ಮತವೂ ಇಲ್ಲ" ಎಂಬ ಘೋಷಣೆ ಕೂಗಿದರು.


ಕುಮಾರ್ ಎಂಬಾತ ಗ್ರಾಮದ ಪರಿಸ್ಥಿತಿ ಬಗ್ಗೆ ಮಾತನಾಡುತ್ತಾ, "ಪ್ರಧಾನಮಂತ್ರಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡುತ್ತಾರೆ. ಆದರೆ ನಾವು 21 ನೇ ಶತಮಾನದಲ್ಲಿದ್ದಾಗ್ಯೂ ನಮ್ಮ ಗ್ರಾಮ ರಸ್ತೆ ಸಂಪರ್ಕವನ್ನೇ ಹೊಂದಿಲ್ಲ. ಹೀಗಿರುವಾಗ ಡಿಜಿಟಲ್ ಇಂಡಿಯಾವನ್ನು ಹೇಗೆ ಕಂಡುಹಿಡಿಯಬಹುದು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ, ಎಂಎಲ್ಎ ಪರ್ಮಾರ್, "ವಾಸ್ತವವಾಗಿ ಸರ್ಕಾರವು ರಸ್ತೆ ನಿರ್ಮಾಣಕ್ಕೆ ಯಾವುದೇ ಭೂಮಿಯನ್ನು ಹೊಂದಿಲ್ಲ ಮತ್ತು ಖಾಸಗಿ ಭೂಮಿ ಮಾಲೀಕರು ತಮ್ಮ ಭೂಮಿ ನೀಡಲು ಸಿದ್ಧವಾಗಿಲ್ಲ" ಎಂದಿದ್ದಾರೆ.