ನವದೆಹಲಿ: ಭಾರತದಲ್ಲಿ ವಾಯುಯಾನ ಕ್ಷೇತ್ರ ವೇಗವಾಗಿ ಬೆಳೆಯುತ್ತಿದ್ದರೂ, ರೈಲ್ವೆ ಸಂಚಾರದ ಪ್ರಮುಖ ಸಾಧನವಾಗಿದೆ. ಆನ್‌ಲೈನ್ ಟಿಕೆಟ್ ಬುಕಿಂಗ್ ನಿಯಮಗಳ ಬಗ್ಗೆ ನೀವು ತಿಳಿದಿರಬೇಕು. ಜನರಲ್ ಬುಕಿಂಗ್‌ಗಾಗಿ ಐಆರ್‌ಸಿಟಿಸಿ ವೆಬ್‌ಸೈಟ್ ಬೆಳಿಗ್ಗೆ 8.00 ಕ್ಕೆ ತೆರೆಯುತ್ತದೆ. ತತ್ಕಾಲ್ ನಲ್ಲಿ ಎಸಿ ಟಿಕೆಟ್ ಬುಕಿಂಗ್ ಮಾಡಲು ಬೆಳಿಗ್ಗೆ 10 ಗಂಟೆಗೆ ಮತ್ತು ತತ್ಕಾಲ್ ನಲ್ಲಿ ನಾನ್ ಎಸಿ ಟಿಕೆಟ್‌ ಬುಕ್ ಮಾಡಲು ವೆಬ್‌ಸೈಟ್ 11 ಗಂಟೆಗೆ ತೆರೆಯುತ್ತದೆ. 120 ದಿನಗಳ ಮೊದಲು ಯಾವುದೇ ಟಿಕೆಟ್‌ಗಳನ್ನು ಕಾಯ್ದಿರಿಸಲಾಗುವುದಿಲ್ಲ.


COMMERCIAL BREAK
SCROLL TO CONTINUE READING

ಟಿಕೆಟ್ ಬುಕಿಂಗ್ ವೇಳೆ ದಲ್ಲಾಳಿ ತಡೆಗಟ್ಟುವ ಸಲುವಾಗಿ IRCTC ನಿರಂತರವಾಗಿ ನಿಯಮಗಳನ್ನು ಬದಲಾಯಿಸುತ್ತಿದೆ. ಬಳಕೆದಾರರು ತಮ್ಮ ಲಾಗಿನ್‌ನಿಂದ ಬೆಳಿಗ್ಗೆ 8.00 ರಿಂದ 12.00 ರವರೆಗೆ ಕೇವಲ ಒಂದೇ ಬುಕಿಂಗ್ ಮಾಡಬಹುದು. ಎರಡನೆಯ ಬುಕಿಂಗ್ಗಾಗಿ, ನೀವು ಮೊದಲು ಲಾಗ್ ಔಟ್ ಮಾಡಬೇಕು. ಮತ್ತೆ ಲಾಗಿನ್ ಮಾಡುವ ಮೂಲಕ ಟಿಕೆಟ್ ಬುಕಿಂಗ್ ಮಾಡಬಹುದು.


ಹೊಸ ನಿಯಮಗಳ ಪ್ರಕಾರ,
1. ಬಳಕೆದಾರರ ID ಯೊಂದಿಗೆ ಬೆಳಿಗ್ಗೆ 8 ರಿಂದ 10 ರವರೆಗೆ ಎರಡು ಟಿಕೆಟ್‌ಗಳನ್ನು ಮಾತ್ರ ಕಾಯ್ದಿರಿಸಬಹುದು. 
2. ಎರಡು ತತ್ಕಾಲ್ ಟಿಕೆಟ್‌ಗಳನ್ನು ಬೆಳಿಗ್ಗೆ 10 ರಿಂದ 12 ರವರೆಗೆ ಕಾಯ್ದಿರಿಸಬಹುದು.
3. ಬಳಕೆದಾರರ ಐಡಿಯನ್ನು ಬಳಸಿ ತಿಂಗಳಿಗೆ 6 ಟಿಕೆಟ್‌ಗಳವರೆಗೆ ಕಾಯ್ದಿರಿಸಬಹುದು.
4. ಆರಂಭದಿಂದ 30 ನಿಮಿಷಗಳವರೆಗೆ ಏಜೆಂಟ್ಗಳು ಟಿಕೆಟ್ ಬುಕಿಂಗ್ ಮಾಡಬಹುದು.