ನವದೆಹಲಿ: ಭಾರತೀಯ ರೈಲ್ವೇ ಇಲಾಖೆಯ ಮೆಗಾ ರಾಷ್ಟ್ರೀಯ ರೈಲು ಯೋಜನೆ (ಎನ್​ಆರ್​ಪಿ) 2030 ಜಾರಿಗೆ ಬಂದ ಬಳಿಕ ಪ್ರಯಾಣಿಕರು ದೃಢೀಕರಣಗೊಂಡ ರೈಲ್ವೇ ಟಿಕೆಟ್​ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಭಾರತೀಯ ರೈಲ್ವೆ ಇಲಾಖೆ ಹೇಳಿದೆ.


COMMERCIAL BREAK
SCROLL TO CONTINUE READING

ಭಾರತೀಯ ರೈಲ್ವೆ(Indian Railway) ಇಲಾಖೆ ರಾಷ್ಟ್ರೀಯ ರೈಲು ಯೋಜನೆ 2030ಯನ್ನು ಸಿದ್ಧಪಡಿಸುತ್ತಿದೆ. ಹಾಗೂ ಈ ಯೋಜನೆ ಸಂಬಂಧ ಸಾರ್ವಜನಿಕರಿಂದ ಮತ್ತು ವಿವಿಧ ಸಚಿವಾಲಯಗಳಿಂದ ಮಾಹಿತಿ ಸಂಗ್ರಹಿಸುತ್ತಿದೆ. ಎನ್​ಆರ್​ಪಿ 2030 ಪ್ರಕಾರ ಪ್ರತಿ ಪ್ರಯಾಣಿಕರಿಗೆ ದೃಢಪಡಿಸಿದ ಟಿಕೆಟ್​​ಗಳು ಲಭ್ಯವಾಗಲಿದ್ದು, ಯಾವುದೇ ವೇಟ್ ಲಿಸ್ಟ್ ಗಳು ಇರೋದಿಲ್ಲ ಎಂದು ಹೇಳಿದೆ.


ಕಾಂಗ್ರೆಸ್ 'ಬಂಡಾಯ ಬಣ'ದ ಭೇಟಿಗೆ ಒಪ್ಪಿದ ಸೋನಿಯಾ ಗಾಂಧಿ


ಅಲ್ಲದೇ ರಾಷ್ಟ್ರೀಯ ರೈಲು ಯೋಜನೆ 2030 ಮೂಲಕ ಭಾರತೀಯ ರೈಲ್ವೆ ಇಲಾಖೆ ಹೆಚ್ಚಿನ ಆದಾಯ ಗಳಿಸುವತ್ತಲೂ ಗಮನ ನೆಟ್ಟಿದೆ ಎನ್ನಲಾಗಿದೆ. ದೇಶದ ಒಟ್ಟು ಸರಕು ಸಾಗಣೆಯ 47 ಶೇಕಡಾದಷ್ಟು ಸಾಗಣೆ ಪೂರೈಸುವ ಗುರಿಯನ್ನ ಭಾರತೀಯ ರೈಲ್ವೆ ಇಲಾಖೆ ಹೊಂದಿದೆ.


2021 ರಲ್ಲಿ ಈ ಆಂಡ್ರಾಯ್ಡ್ ಮತ್ತು ಐಒಎಸ್ ಫೋನ್‌ಗಳಲ್ಲಿ ಸ್ಥಗಿತಗೊಳ್ಳಲಿದೆ WhatsApp