NO WAITING LIST: ಮುಂದಿನ 5 ವರ್ಷಗಳಲ್ಲಿ ಕೇವಲ ಕನ್ಫರ್ಮ್ ಟಿಕೆಟ್!
ನಮ್ಮ ದೇಶದಲ್ಲಿ ರೈಲಿನಲ್ಲಿ ಪ್ರಯಾಣ ಬೆಳೆಸುವುದು ಯುದ್ಧ ಗೆಲ್ಲುವುದಕ್ಕೆ ಸಮ ಎನ್ನಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ನೀವು ರೈಲಿನಲ್ಲಿ ಪ್ರಯಾಣ ಬೆಳೆಸಲು ಮುಂದಾದಾಗ ಟಿಕೆಟ್ ಸಿಗುವುದು ಯಾವುದೇ ಒಂದು ಚಾಲೆಂಜ್ ಗಿಂತ ಕಮ್ಮಿ ಇಲ್ಲ. ಆದರೆ, ಇದೀಗ ಶೀಘ್ರವೇ ಕನ್ಫರ್ಮ್ ಟಿಕೆಟ್ ಸಿಗುವುದು ಸಾಧ್ಯವಾಗಲಿದೆ.
ನವದೆಹಲಿ: ನಮ್ಮ ದೇಶದಲ್ಲಿ ರೈಲಿನಲ್ಲಿ ಪ್ರಯಾಣ ಬೆಳೆಸುವುದು ಯುದ್ಧ ಗೆಲ್ಲುವುದಕ್ಕೆ ಸಮ ಎನ್ನಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ನೀವು ರೈಲಿನಲ್ಲಿ ಪ್ರಯಾಣ ಬೆಳೆಸಲು ಮುಂದಾದಾಗ ಟಿಕೆಟ್ ಸಿಗುವುದು ಯಾವುದೇ ಒಂದು ಚಾಲೆಂಜ್ ಗಿಂತ ಕಮ್ಮಿ ಇಲ್ಲ. ಆದರೆ, ಇದೀಗ ಶೀಘ್ರವೇ ಕನ್ಫರ್ಮ್ ಟಿಕೆಟ್ ಸಿಗುವುದು ಸಾಧ್ಯವಾಗಲಿದೆ. ಭಾರತೀಯ ರೈಲು ಇಲಾಖೆ ಮುಂದಿನ ಐದು ವರ್ಷಗಳಲ್ಲಿ ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರುತ್ತಿದ್ದು, ಈ ವ್ಯವಸ್ಥೆ ಅಡಿ ಒಂದು ವೇಳೆ ನೀವು ಟಿಕೆಟ್ ಬುಕ್ ಮಾಡಿದರೆ ನಿಮಗೆ ಕನ್ಫರ್ಮ್ ಟಿಕೆಟ್ ಸಿಗಲಿದೆ. ಅಂದರೆ, NO WAITING LIST.
ಅತ್ಯಂತ ವ್ಯಸ್ತವಾದ ರೂಟ್ ನಲ್ಲಿ ಸಿಗಲಿದೆ ಕನ್ಫರ್ಮ್ ಟಿಕೆಟ್
ಈ ಕುರಿತು ಝೀ ನ್ಯೂಸ್ ಜೊತೆ ಮಾತನಾಡಿರುವ ರೇಲ್ವೆ ಬೋರ್ಡ್ ನ ಅಧ್ಯಕ್ಷ ವಿನೋದ್ ಯಾದವ್, ಕಳೆದ ಹಲವು ವರ್ಷಗಳಿಂದ ಕನ್ಫರ್ಮ್ ಟಿಕೆಟ್ ಪಡೆಯುವ ಸಮಸ್ಯೆಯ ಮೇಲೆ ಕೆಲಸ ಆರಂಭಗೊಂಡಿದ್ದು, ತತ್ಕಾಲ್ ಸೇವೆಯಿಂದ ಇದು ಸ್ವಲ್ಪ ಮಟ್ಟಿಗೆ ಸಾಧ್ಯವಾದಂತಾಗಿದೆ. ಆದರೆ, ಬಹುತೇಕ ಕಡೆಗಳಲ್ಲಿ ಈ ಸಮಸ್ಯೆ ಇದ್ದೇ ಇದೆ. ಮುಂದಿನ ಐದು ವರ್ಷಗಳಲ್ಲಿ ಭಾರತೀಯ ರೈಲು ಕನ್ಫರ್ಮ್ ಟಿಕೆಟ್ ಸಿಗುವ ಗ್ರಾಹಕರ ಕನಸು ನನಸಾಗಿಸಲಿದ್ದು, ಅತ್ಯಂತ ವ್ಯಸ್ತವಾದ ರೂಟ್ ನಲ್ಲಿ ಈ ಯೋಜನೆ ಮೊದಲು ಆರಂಭಗೊಳ್ಳಲಿದೆ ಎಂದು ವಿನೋದ್ ಯಾದವ್ ಹೇಳಿದ್ದಾರೆ.
ದೆಹಲಿ, ಮುಂಬೈ, ಕೊಲ್ಕತ್ತಾ ಮತ್ತು ಚೆನ್ನೈ ರೂಟ್ ಗಳಲ್ಲಿ ಮೊದಲು ಆರಂಭಗೊಳ್ಳಲಿದೆ ಈ ಸೇವೆ
ರೇಲ್ವೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಕನ್ಫರ್ಮ್ ಟಿಕೆಟ್ ನೀಡುವ ಸೇವೆ ಮೊದಲು ದೆಹಲಿ, ಮುಂಬೈ, ಕೊಲ್ಕತ್ತಾ ಹಾಗೂ ಚೆನ್ನೈ ರೂಟ್ ಗಳಲ್ಲಿ ಮೊದಲು ಕಾರ್ಯಗತಗೊಳಿಸಲಾಗುವುದು ಎನ್ನಲಾಗಿದೆ. ಎಲ್ಲಕ್ಕಿಂತ ಹೆಚ್ಚು ಪ್ರಯಾಣಿಕರು ಈ ರೂಟ್ ಗಳಿಂದ ಪ್ರವಾಸ ಕೈಗೊಳ್ಳುತ್ತಾರೆ. ಈ ರೂಟ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳನ್ನು ನಿಯೋಜಿಸುವ ಮೂಲಕ ಕನ್ಫರ್ಮ್ ಟಿಕೆಟ್ ನೀಡುವಿಕೆಯನ್ನು ರೇಲ್ವೆ ಸಚಿವಾಲಯ ಸಂಭವಗೊಳಿಸಲಿದೆ ಎನ್ನಲಾಗಿದೆ.
ದೆಹಲಿ-ಮುಂಬೈ, ದೆಹಲಿ-ಕೊಲ್ಕತ್ತಾ, ದೆಹಲಿ-ಚೆನ್ನೈ ರೂಟ್ ಗಳಲ್ಲಿ ಕನ್ಫರ್ಮ್ ಟಿಕೆಟ್ ಸುಲಭವಾಗಿ ಸಿಗುವುದಿಲ್ಲ ಎನ್ನಲಾಗಿದೆ. ಹೀಗಾಗಿ ಹೆಚ್ಚಿನ ಪ್ರಯಾಣಿಕರು ಟ್ರೈನ್ ಗಳ ಬದಲಾಗಿ ವಿಮಾನಯಾನದ ಮೂಲಕ ಪ್ರವಾಸ ಬೆಳೆಸಲು ಮುಂದಾಗುತ್ತಾರೆ. ಇದರಿಂದ ರೇಲ್ವೆ ಆದಾಯದಲ್ಲಿ ಇಳಿಕೆಯಾಗುತ್ತಿದೆ ಎನ್ನಲಾಗಿದೆ. ಆದರೆ, ಕೆಲ ಸಂದರ್ಭಗಳಲ್ಲಿ ದೆಹಲಿ-ಮುಂಬೈ ಮಧ್ಯೆ ರಾಜಧಾನಿ ರೈಲುಗಳಲ್ಲಿ ಟಿಕೆಟ್ ಸಿಗುವುದು ಸುಲಭವಾಗಿತ್ತು. ಆದರೆ, ಇತರೆ ರೈಲುಗಳಲ್ಲಿ ವೇಟಿಂಗ್ ಲಿಸ್ಟ್ ಟಿಕೆಟ್ ಮಾತ್ರ ಸಿಗುತ್ತಿದ್ದವು. ಇಂತಹುದರಲ್ಲಿ ಸರ್ಕಾರ ಕೈಗೊಂಡಿರುವ ಈ ಯೋಜನೆಯಿಂದ ಪ್ರಯಾಣಿಕರಿಗೆ ಲಾಭ ಸಿಗುವ ನಿರೀಕ್ಷೆ ಇದೆ.