Will ಬರೆಯುವಾಗ ತಂದೆ ಯಾರ ಹೆಸರನ್ನು ಉಲ್ಲೆಖಿಸದಿದ್ದರೆ, ಆಸ್ತಿಯ ಮೇಲೆ ಮೊದಲ ಹಕ್ಕು ಮಗಳದ್ದು: Supreme Court
Daughters Inherit Fathers Property - ಸುಪ್ರೀಂ ಕೋರ್ಟ್‌ನ (Supreme Court) ಪ್ರಕಾರ, ಒಬ್ಬ ಹಿಂದೂ ವ್ಯಕ್ತಿ ಮೃತಪಟ್ಟರೆ, ಅವನ ಆಸ್ತಿಯ ಮೇಲೆ ಇತರ ಸಂಬಂಧಿಕರಿಗಿಂತ ಆ ವ್ಯಕ್ತಿಯ ಮಗಳ ಹಕ್ಕು ಮೊದಲು ಇರಲಿದೆ ಎನ್ನಲಾಗಿದೆ.
ನವದೆಹಲಿ: No Will Case - ಗುರುವಾರ ನೀಡಿದ ಮಹತ್ವದ ತೀರ್ಪಿನಲ್ಲಿ, ಹಿಂದೂ ತಂದೆ ಉಯಿಲು ಇಲ್ಲದೆ ಮರಣಹೊಂದಿದರೆ, ಅವರ ಆಸ್ತಿಗೆ ಹೆಣ್ಣುಮಕ್ಕಳು ಮೊದಲು ಅರ್ಹರಾಗುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಸ್ವತ್ತುಗಳು ತಂದೆಯಿಂದ ಸ್ವಯಂ-ಸ್ವಾಧೀನಪಡಿಸಿಕೊಂಡ ಮತ್ತು ಪೂರ್ವಜರ ಆಸ್ತಿಯನ್ನು ಒಳಗೊಂಡಿರುತ್ತದೆ ಎಂದು ನ್ಯಾಯಪೀಠ ಹೇಳಿದೆ. ಮದ್ರಾಸ್ ಹೈಕೋರ್ಟಿನ (Madras High Court) ತೀರ್ಪಿನ ವಿರುದ್ಧ ಮಾಡಿದ ಮೇಲ್ಮನವಿಯ ಮೇಲೆ ಈ ತೀರ್ಪು ಬಂದಿದೆ. ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪು ಹಿಂದೂ ಮಹಿಳೆಯರು ಮತ್ತು ವಿಧವೆಯರ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದೆ.
ಹೆಣ್ಣು ಮಕ್ಕಳಿಗೆ ಸಂಪೂರ್ಣ ಹಕ್ಕುಗಳಿವೆ
ದೇಶದ ಸರ್ವೋಚ್ಚ ನ್ಯಾಯಾಲಯದ (Supreme Court Of India) ಪ್ರಕಾರ, ಒಬ್ಬ ಹಿಂದೂ ವ್ಯಕ್ತಿ ಮೃತಪಟ್ಟರೆ, ಅವನ ಆಸ್ತಿಯ ಮೇಲೆ ಅವನ ಮಗಳ ಹಕ್ಕು ಇತರ ಯಾವುದೇ ಸಂಬಂಧಿಗಳಿಗಿಂತ ಮೊದಲು ಇರಲಿದೆ ಎನ್ನಲಾಗಿದೆ. ಈ ಸಂಬಂಧಿಕರಲ್ಲಿ ಮೃತರ ಸಹೋದರನ ಮಕ್ಕಳು ಸೇರಿದ್ದಾರೆ. ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠ ಈ ತೀರ್ಪು ನೀಡಿದೆ. ಈ ಕುರಿತು ಒಟ್ಟು 51 ಪುಟಗಳ ತೀರ್ಪು ಬರೆದ ನ್ಯಾಯಮೂರ್ತಿ ಮುರಾರಿ, ಉಯಿಲು ಇಲ್ಲದೆ ಮರಣಿಸಿದ ನಂತರ ತಂದೆಯ ಆಸ್ತಿ ಪಿತ್ರಾರ್ಜಿತ (Ancestors Property) ಆಧಾರದ ಮೇಲೆ ಮಗಳ ಹೆಸರಲ್ಲಿರುತ್ತದೆಯೇ ಹೊರತು ತಂದೆಯ ಸಹೋದರನ ಪುತ್ರರಲ್ಲ ಎಂದು ಸ್ಪಷ್ಟಪಡಿಸಿದೆ.
ಹಿಂದೂ ಮಹಿಳೆಯರ ಹಕ್ಕುಗಳ ವಿಸ್ತರಣೆ
ಹಿಂದೂ ಮಹಿಳೆಯರ ಹಕ್ಕುಗಳ ಮಿತಿಯನ್ನು ವಿಸ್ತರಿಸುವುದು ನ್ಯಾಯಾಂಗದ ಉದ್ದೇಶವಾಗಿದೆ ಎಂದು ಒತ್ತಿ ಹೇಳಿರುವ ನ್ಯಾಯಮೂರ್ತಿಗಳು, ಇದಕ್ಕೂ ಮೊದಲು ಹೆಣ್ಣು ಮಕ್ಕಳು ತಂದೆಯ ಆಸ್ತಿಯ ಮೇಲೆ ಪೂರ್ಣ ಹಕ್ಕುಗಳನ್ನು ಹೊಂದಲು ಸಾಧ್ಯವಾಗುತ್ತಿರಲಿಲ್ಲ. ಸೆಕ್ಷನ್ 14 (I) ಮಹಿಳೆಯರ ಸೀಮಿತ ಹಕ್ಕುಗಳನ್ನು ಸಂಪೂರ್ಣ ಹಕ್ಕುಗಳಾಗಿ ಪರಿವರ್ತಿಸುತ್ತದೆ ಮತ್ತು Hindu Succession Act, 1956 ರ ಸೆಕ್ಷನ್ 15 ಕ್ಕೆ ಅನುಗುಣವಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-ಒತ್ತಾಯಪೂರ್ವಕವಾಗಿ ಯಾರಿಗೂ ಲಸಿಕೆ ನೀಡುವುದಿಲ್ಲ: ಸುಪ್ರೀಂಕೋರ್ಟ್ ಗೆ ಕೇಂದ್ರದ ಸ್ಪಷ್ಟನೆ
ಹಿಂದೂ ಮಹಿಳೆ ಯಾವುದೇ ಮಕ್ಕಳಿಲ್ಲದೆ ಮರಣಹೊಂದಿದರೆ, ತಂದೆ ಅಥವಾ ತಾಯಿಯಿಂದ ಸಂಪಾದಿಸಿದ ಆಸ್ತಿ ಅವಳ ತಂದೆಯ ವಾರಸುದಾರರಿಗೆ ಹೋಗುತ್ತದೆ. ಇನ್ನೊಂದೆಡೆ, ಪತಿ ಅಥವಾ ಮಾವನಿಂದ ಪಡೆದ ಆಸ್ತಿಯು ಗಂಡನ ವಾರಸುದಾರರಿಗೆ ಹೋಗುತ್ತದೆ. ಆಸ್ತಿಯನ್ನು ಅದರ ಮೂಲಕ್ಕೆ ಹಿಂದಿರುಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಸುಪ್ರೀಂ ಕೋರ್ಟ್‌ನ ಈ ನಿರ್ಧಾರವು ಮಾರ್ಚ್ 1994 ರಲ್ಲಿ ವಿಚಾರಣಾ ನ್ಯಾಯಾಲಯವು ಅಂಗೀಕರಿಸಿದ ತೀರ್ಪನ್ನು ರದ್ದುಗೊಳಿಸಿದೆ ಮತ್ತು ಜನವರಿ 2009 ರಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
ಇದನ್ನೂ ಓದಿ-ಪಂಜಾಬ್ನಲ್ಲಿ ಪಿಎಂ ಮೋದಿ ಭದ್ರತಾ ಲೋಪ: ಸುಪ್ರೀಂ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.