ನವದೆಹಲಿ: ಎಪ್ರಿಲ್ 1 ರಿಂದ ಜಾರಿಗೆ ಬರುವಂತೆ 14.2 ಕೆ.ಜಿ. ಸಬ್ಸಿಡಿ ರಹಿತ ಸಿಲಿಂಡರ್‌ಗೆ 5 ರೂ. ಹೆಚ್ಚಳವಾಗಿದ್ದು, ಪ್ರತಿ ಸಿಲಿಂಡರ್ ದರ 706.50 ರೂ. ತಲುಪಿದೆ. ಒಂದು ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಕಂಡಿದೆ. 


COMMERCIAL BREAK
SCROLL TO CONTINUE READING

ಮಾರ್ಚ್ 1ರಂದು ಸಬ್ಸಿಡಿ ಹೊಂದಿರುವ ಗೃಹಬಳಕೆಯ ಅಡುಗೆ ಅನಿಲ ದರದಲ್ಲಿ 2.08ರೂ. ಮತ್ತು ಸಬ್ಸಿಡಿ ರಹಿತ ಎಲ್‌ಪಿಜಿ ದರದಲ್ಲಿ 42.50ರೂ. ಏರಿಕೆ ಮಾಡಿರುವುದಾಗಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ) ತಿಳಿಸಿತ್ತು.


ಗ್ರಾಹಕರು ಒಂದು ವರ್ಷದಲ್ಲಿ ಸಬ್ಸಿಡಿ ಸಹಿತ 12 ಸಿಲಿಂಡರ್ ಪಡೆಯಬಹುದು. ಅವರಿಗೆ ಹೆಚ್ಚಿನ ಸಿಲಿಂಡರ್ಗಳು ಅಗತ್ಯವಿದ್ದರೆ, ಅವರು ಸಬ್ಸಿಡಿ ರಹಿತವಾಗಿ ಸಿಲಿಂಡರ್ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸಬ್ಸಿಡಿ ಸಹಿತ ಎಲ್​ಪಿಜಿ ಸಿಲಿಂಡರ್ 495.86 ರೂ. ಇದ್ದು, ಇದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.