ನವದೆಹಲಿ: ನಾರ್ತ್ ವೆಸ್ಟರ್ನ್ ರೈಲ್ವೇಯಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಉದ್ಯೋಗಾವಕಾಶ ಲಭ್ಯವಿದ್ದು, ನೀವು ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡಲು ಬಯಸಿದರೆ, ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸಿ. 


COMMERCIAL BREAK
SCROLL TO CONTINUE READING

ನಾರ್ತ್ ವೆಸ್ಟರ್ನ್ ರೈಲ್ವೆ ಇಲಾಖೆ 2090 ಹುದ್ದೆಗಳಿಗಾಗಿ ಪ್ರೆಂಟಿಸ್ ಆಕ್ಟ್ 1961 ರ ಅಡಿಯಲ್ಲಿ ಅಪ್ರೆಂಟಿಸ್ ಟ್ರೈನಿಂಗ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಡಿಸೆಂಬರ್ 30 ರೊಳಗೆ www.rrcjaipur.in ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.


ಪೋಸ್ಟ್ಗಳ ವಿವರಗಳು:
ಒಟ್ಟು ಪೋಸ್ಟ್ಗಳು- 2090


ವಿಭಾಗ ಪೋಸ್ಟ್ಗಳ ವಿವರ ಈ ಕೆಳಕಂಡಂತಿವೆ:


  • ಅಜ್ಮೇರ್ ವಿಭಾಗ - 420

  • ಬಿಕಾನೆರ್ ವಿಭಾಗ 412

  • ಜೈಪುರ ವಿಭಾಗ - 503

  • ಜೋಧ್ಪುರ ವಿಭಾಗ- 410

  • ಬಿಟಿಸಿ ಕ್ಯಾರೇಜ್ (ಅಜ್ಮೀರ್) - 166

  • ಬಿಟಿಸಿ ಲೊಕೊ (ಅಜ್ಮೀರ್) - 57

  • ಕ್ಯಾರೇಜ್ ಕಾರ್ಯಾಗಾರ (ಬಿಕಾನೆರ್) - 37

  • ಕ್ಯಾರೇಜ್ ವರ್ಕ್ಷಾಪ್ (ಜೋಧ್ಪುರ) - 85


ಅರ್ಹತೆ: 
ಅಭ್ಯರ್ಥಿಗಳು 50% ಅಂಕಗಳನ್ನು ಹೊಂದಿರಬೇಕು ಅಥವಾ ಹತ್ತನೆ ತರಗತಿ ಪಾಸ್ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇದರ ಜೊತೆಗೆ, ಅಭ್ಯರ್ಥಿಯು NCVT/SCVT ಯಿಂದ ನೀಡುವ ಐಟಿಐ ಅಥವಾ ಅದರ ಸಮಾನತೆಯ ರಾಷ್ಟ್ರೀಯ ವಾಣಿಜ್ಯೋದ್ಯಮ ಪ್ರಮಾಣಪತ್ರದಲ್ಲಿ ಹೊಂದಿರಬೇಕು.


ವಯೋಮಿತಿ: 
ಅಭ್ಯರ್ಥಿಯ ವಯಸ್ಸು ಡಿಸೆಂಬರ್ 30, 2018ರ ಒಳಗೆ 15 ವರ್ಷ ತುಂಬಿರಬೇಕು 24 ವರ್ಷ ಮೀರಿರಬಾರದು. ಮೀಸಲಾತಿ ವಿಭಾಗದ ಅಭ್ಯರ್ಥಿಗಳು ಸರ್ಕಾರದ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯಲ್ಲಿ ವಿಶ್ರಾಂತಿ ಪಡೆಯುತ್ತಾರೆ.


ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಒಬಿಸಿ ವರ್ಗದವರಿಗೆ ಅರ್ಜಿ ಶುಲ್ಕ 100 ರೂ.  SC / ST/ದಿವ್ಯಾಂಗರು/ ಮಹಿಳೆಯರಿಗೆ ಯಾವುದೇ ಶುಲ್ಕವಿಲ್ಲ.


ಆಯ್ಕೆ ಪ್ರಕ್ರಿಯೆ:
10ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ(ಮೆರಿಟ್ ಮೇರೆಗೆ) ಡಾಕ್ಯುಮೆಂಟ್ ಪರಿಶೀಲನೆಯ ನಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.


ಹೀಗೆ ಅರ್ಜಿ ಸಲ್ಲಿಸಿ: 
ಆಸಕ್ತ ಅಭ್ಯರ್ಥಿಗಳು  ನಾರ್ಥ್ ವೆಸ್ಟರ್ನ್ ರೈಲ್ವೆಯ ಅಧಿಕೃತ www.rrcjaipur.in ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಡಿಸೆಂಬರ್ 30, ಸಂಜೆ 5 ಗಂಟೆವರೆಗೆ ಅರ್ಜಿ ಸಲ್ಲಿಸಬಹುದು.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 30, 2018