1984 ರಿಂದ ಗುಜರಾತ್ನಲ್ಲಿ ಓರ್ವ ಮುಸ್ಲಿಂ ಸಂಸದರೂ ಇಲ್ಲ; ಕಾರಣ ಏನ್ ಗೊತ್ತಾ!
ಅಹ್ಮದ್ ಪಟೇಲ್ ಅವರು ರಾಜ್ಯಸಭೆ ಸದಸ್ಯರಾಗಿದ್ದಾರೆ, ಅವರು 1977 ಮತ್ತು 1980 ರಲ್ಲಿ ಭರೂಚ್ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ.
ಅಹ್ಮದಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್ ನಲ್ಲಿ ಬಿಜೆಪಿ ಪ್ರಬಲ ಪಕ್ಷವಾಗಿದೆ. ಈ ರಾಜ್ಯದಲ್ಲಿ 1984 ರ ನಂತರ ಯಾವುದೇ ಮುಸ್ಲಿಂ ಅಭ್ಯರ್ಥಿ ಸಂಸದರಾಗಿ ಆಯ್ಕೆಯಾಗಿಲ್ಲ. 1984 ರ ಸಾರ್ವತ್ರಿಕ ಚುನಾವಣೆಯಲ್ಲಿ, ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರು ಭರೂಚ್ನಿಂದ ಚುನಾವಣೆಗಳನ್ನು ಗೆದ್ದರು. ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಂ ಪಾಲು ಸುಮಾರು ಒಂಬತ್ತು ಪ್ರತಿಶತದಷ್ಟಿತ್ತು ಮತ್ತು ಅವರು ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಬೆಂಬಲಿಗರಾಗಿದ್ದರು. ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ 1984 ರಲ್ಲಿ ಚಂದುಭಾಯಿ ದೇಶ್ಮುಖ್ ಅವರನ್ನು ಸೋಲಿಸಿ ಚುನಾವಣೆಯಲ್ಲಿ ಜಯಗಳಿಸಿದರು. ಆದಾಗ್ಯೂ, ಅವರು 1989 ರಲ್ಲಿ ದೇಶ್ಮುಖ್ ಎದುರೇ ಸೋಲನುಭವಿಸಿದರು.
ರಾಜ್ಯಸಭಾ ಸಂಸದರಾಗಿರುವ ಅಹ್ಮದ್ ಪಟೇಲ್:
ಅಹ್ಮದ್ ಪಟೇಲ್ ಅವರು ರಾಜ್ಯಸಭೆ ಸದಸ್ಯರಾಗಿದ್ದಾರೆ, ಅವರು 1977 ಮತ್ತು 1980 ರಲ್ಲಿ ಭರೂಚ್ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ. ಉತ್ತರ ಪ್ರದೇಶದ ಸೋಮನಾಥ್ ನಿಂದ ಅಯೋಧ್ಯಾಕ್ಕೆ ರಥ ಯಾತ್ರೆಯ ನಂತರ 1990 ರಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರ ಹಿಂದೂತ್ವವು ಹೊರಹೊಮ್ಮಿದೆ. ಇದರ ಪರಿಣಾಮವಾಗಿ ಮುಸ್ಲಿಂ ಅಭ್ಯರ್ಥಿಗಳು ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಾರೆ ಎಂದು ಚುನಾವಣಾ ವಿಶ್ಲೇಷಕರು ನಂಬಿದ್ದಾರೆ.
1990 ರ ರಥ ಯಾತ್ರೆಯ ನಂತರ ಧ್ರುವೀಕರಣ:
ಆದರೆ, ಪ್ರತಿ ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷ ಒಂದು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ. ಆದರೆ ಆಡಳಿತಾರೂಢ ಬಿಜೆಪಿ ಈ ನಿಟ್ಟಿನಲ್ಲಿ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಿಂದೆ, ಬನಸ್ಕಾಂತದಲ್ಲಿ ಮುಸ್ಲಿಂ ಅಭ್ಯರ್ಥಿಗಳು ಸಂಸದರಾಗಿ ಆಯ್ಕೆಯಾಗಿದ್ದರು. ಅಲ್ಲದೆ ಹಿಂದೂಗಳು ಹೆಚ್ಚಾಗಿದ್ದ ಭರೂಚ್ ಕ್ಶೆತ್ರ್ದಲ್ಲಿಯೋಒ ಕೂಡ ಮುಸ್ಲಿಂ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದರು. ಆದರೆ 1990ರ ರಥ ಯಾತ್ರೆ ಬಳಿಕ ಇಲ್ಲಿ ಮುಸ್ಲಿಂ ಅಭ್ಯರ್ಥಿಗಳು ಗೆಲ್ಲುವುದು ಕಷ್ಟಕರವಾಗಿದೆ ಎಂದು ರಾಜಕೀಯ ವಿಶ್ಲೇಷಕ ಡಾ. ಹರಿ ದೇಸಾಯಿ ಹೇಳಿದ್ದಾರೆ.