ನವದೆಹಲಿ:  ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ತನ್ನ ತೀರ್ಪಿನಲ್ಲಿ ರಾಷ್ಟ್ರಗೀತೆಗಾಗಿ ಎದ್ದು ನಿಂತು ಗೌರವ ಸೂಚಿಸದೆ ಇರುವುದು ರಾಷ್ಟ್ರಗೀತೆಗೆ ಅಗೌರವ ಎಂದು ಪರಿಗಣಿಸಬಹುದಾದರೂ, ಇದು 'ರಾಷ್ಟ್ರೀಯ ಗೌರವ ಅವಮಾನ ತಡೆ ಕಾಯ್ದೆ 1971' ರ ಅಡಿಯಲ್ಲಿ ಅಪರಾಧವಲ್ಲ ಎಂದು ತೀರ್ಪು ನೀಡಿದೆ.


COMMERCIAL BREAK
SCROLL TO CONTINUE READING

ಈ ತೀರ್ಪು ವಿವಿಧ ರಾಜ್ಯಗಳಲ್ಲಿನ ಜನರ ವಿರುದ್ಧ  ರಾಷ್ಟ್ರಗೀತೆ ಹಾಡಲಿಲ್ಲ ಅಥವಾ ಎದ್ದು ನಿಂತು ಗೌರವ ಸೂಚಿಸಲಿಲ್ಲ ಎಂದು ದಾಖಲಿಸಿರುವ ಹಲವಾರು ಪ್ರಕರಣಗಳ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.


ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ಶಿಬಿರಗಳ ಮೇಲೆ ಭಾರತೀಯ ಸೇನೆಯ 'ಸರ್ಜಿಕಲ್ ಸ್ಟ್ರೈಕ್' ನ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲು 2018 ರಲ್ಲಿ ನಡೆದ ಕಾಲೇಜು ಸಮಾರಂಭವೊಂದರಲ್ಲಿ ರಾಷ್ಟ್ರಗೀತೆ ಹಾಡಲು ಎದ್ದು ನಿಂತಿಲ್ಲ ಎಂಬ ಆರೋಪ ಹೊತ್ತಿದ್ದ ಜಮ್ಮು ಪ್ರಾಂತ್ಯದ ಉಪನ್ಯಾಸಕರ ವಿರುದ್ಧ ದಾಖಲಾದ ಎಫ್‌ಐಆರ್ ನ್ನು ನ್ಯಾಯಾಲಯ ರದ್ದುಪಡಿಸಿದೆ. 


ಇದನ್ನೂ ಓದಿ: UP Population Bill: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆತ್ತರೆ ಸರ್ಕಾರಿ ಕೆಲಸವಿಲ್ಲ..!


ನ್ಯಾಯಮೂರ್ತಿ ಸಂಜೀವ್ ಕುಮಾರ್ ಅವರ ಏಕ ಸದಸ್ಯ ನ್ಯಾಯಪೀಠವು ರಾಷ್ಟ್ರಗೀತೆ (National Anthem) ಗಾಗಿ ಎದ್ದು ನಿಲ್ಲದಿರುವುದು ರಾಷ್ಟ್ರೀಯ ಗೌರವ ಅವಮಾನ ತಡೆ ಕಾಯ್ದೆಯಡಿ ಅಪರಾಧವಲ್ಲ ಎಂದು ಅಭಿಪ್ರಾಯಪಟ್ಟಿದೆ.ಕಾಯಿದೆಯ ಸೆಕ್ಷನ್ 3 ಅನ್ನು ಉಲ್ಲೇಖಿಸಿ ನ್ಯಾಯಾಧೀಶರು, ರಾಷ್ಟ್ರಗೀತೆ ಹಾಡುವುದನ್ನು ತಡೆಯುವ ಅಥವಾ ಅಂತಹ ಗಾಯನದಲ್ಲಿ ತೊಡಗಿರುವ ಯಾವುದೇ ಗುಂಪಿಗೆ ತೊಂದರೆ ಉಂಟುಮಾಡುವ ವ್ಯಕ್ತಿಯ ವರ್ತನೆಗೆ ಮಾತ್ರ ಕಾನೂನು ದಂಡ ವಿಧಿಸುತ್ತದೆ ಎಂದು ಹೇಳಿದ್ದಾರೆ.


"ಆದ್ದರಿಂದ, ರಾಷ್ಟ್ರಗೀತೆ ನುಡಿಸುವಾಗ ಅಥವಾ ರಾಷ್ಟ್ರಗೀತೆ ಹಾಡುವಲ್ಲಿ ತೊಡಗಿರುವ ಗುಂಪಿನಲ್ಲಿ ಶಾಂತವಾಗಿ ನಿಲ್ಲುವಾಗ ವ್ಯಕ್ತಿಗಳ ಕೆಲವು ನಡವಳಿಕೆಯು ರಾಷ್ಟ್ರಗೀತೆಯ ಬಗ್ಗೆ ಅಗೌರವವನ್ನು ತೋರಿಸುತ್ತದೆ, ಆದರೆ ಕಾಯಿದೆಯ ಸೆಕ್ಷನ್ 3 ರ ಅಡಿಯಲ್ಲಿ ಅದು ಅಪರಾಧವಾಗುವುದಿಲ್ಲ, ”ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: 7th Pay Commission Update : ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಈ 5 ಪ್ರಮುಖ ಬದಲಾವಣೆಗಳು!


ರಾಷ್ಟ್ರಗೀತೆಯನ್ನು ಗೌರವಿಸುವುದು ಭಾರತದ ಸಂವಿಧಾನದಡಿಯಲ್ಲಿ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ ಎಂದು ಹೈಕೋರ್ಟ್ ಹೇಳಿದೆ. ಆದರೆ ಈ ಕರ್ತವ್ಯಗಳನ್ನು ಕಾನೂನಿನಿಂದ ಜಾರಿಗೊಳಿಸಲಾಗುವುದಿಲ್ಲ ಅಥವಾ ಅಂತಹ ಕರ್ತವ್ಯಗಳನ್ನು ಉಲ್ಲಂಘಿಸುವುದು ರಾಜ್ಯದ ಯಾವುದೇ ದಂಡದ ಕಾನೂನಿನಡಿಯಲ್ಲಿ ಅಪರಾಧವಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.


ಇದನ್ನೂ ಓದಿ: ವಂದೇ ಮಾತರಂ, ರಾಷ್ಟ್ರಗೀತೆಗೆ ಸಮಾನ ಸ್ಥಾನಮಾನ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ


ನ್ಯಾಯಾಲಯವು ತನ್ನ ಆದೇಶದಲ್ಲಿ, ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರು 2019 ರಲ್ಲಿ ತಂದ ಖಾಸಗಿ ಸದಸ್ಯರ ಮಸೂದೆಯನ್ನು ಉಲ್ಲೇಖಿಸಿ, ಈ ಕಾಯಿದೆಯ ಸೆಕ್ಷನ್ 3 ಪ್ರಸ್ತುತ ಇರುವಂತೆ, ಭಾರತೀಯ ರಾಷ್ಟ್ರಗೀತೆಗೆ ಅಗೌರವ ಮಾಡುವುದಿಲ್ಲ ಎಂಬ ಅಂಶವನ್ನು ಒತ್ತಿಹೇಳುತ್ತದೆ.ರಾಷ್ಟ್ರಗೀತೆ ಹಾಡುತ್ತಿರುವ ಗುಂಪಿಗೆ ಯಾವುದೇ ರೀತಿ ತೊಂದರೆಯನ್ನುಂಟು ಮಾಡಿದ್ದಲ್ಲಿ ಅದು ಅಪರಾಧವಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.


2018 ರಲ್ಲಿ ಕಾಯಿದೆಯ ಸೆಕ್ಷನ್ 3 ರ ಅಡಿಯಲ್ಲಿ ದಾಖಲಾದ ತವ್ಸೀಫ್ ಅಹ್ಮದ್ ಭಟ್ ವಿರುದ್ಧ ದಾಖಲಾದ ಎಫ್ಐಆರ್ ಅನ್ನು ನ್ಯಾಯಾಲಯ ರದ್ದುಪಡಿಸಿತು, "ತನಿಖಾ ಸಂಸ್ಥೆಗಳು ಈ ವಿಷಯದಲ್ಲಿ ಮುಂದುವರಿಸಲು ಅನುಮತಿಸುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಿದೆ" ಎಂದು ಹೇಳಿದೆ.


ಕಾಲೇಜಿನ ವಿದ್ಯಾರ್ಥಿಗಳ ಲಿಖಿತ ದೂರಿನ ಆಧಾರದ ಮೇಲೆ ಎಫ್‌ಐಆರ್‌ನ ಪರಿಶೀಲನೆಯಿಂದ, ಭಟ್ ಅವರು ರಾಷ್ಟ್ರಗೀತೆ ಹಾಡುವುದನ್ನು ತಡೆಯುವ ಅಥವಾ ಗುಂಪಿಗೆ ಯಾವುದೇ ತೊಂದರೆ ಉಂಟುಮಾಡುವ ರೀತಿಯಲ್ಲಿ ವರ್ತಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.


ಇದನ್ನೂ ಓದಿ: ADR Report: ಕೇಂದ್ರದ ನೂತನ ಸಚಿವ ಸಂಪುಟದಲ್ಲಿ ಶೇ 42 ರಷ್ಟು ಸಚಿವರಿಗೆ ಕ್ರಿಮಿನಲ್ ಹಿನ್ನಲೆ


ಭಟ್ ಅವರ ನಡವಳಿಕೆಯು ಉದ್ದೇಶಪೂರ್ವಕವಾಗಿದ್ದರೆ, ರಾಷ್ಟ್ರಗೀತೆಗೆ ಅಗೌರವ ತೋರಿಸುವುದು ಮತ್ತು ಸಂವಿಧಾನದ 51 ಎ ವಿಧಿ ಪ್ರಕಾರ ಭಾರತೀಯ ನಾಗರಿಕರಿಗೆ ವಿಧಿಸಲಾದ ಮೂಲಭೂತ ಕರ್ತವ್ಯಗಳ ಉಲ್ಲಂಘನೆ ಎಂದು ಅವರು ಹೇಳಿದೆ. "ಅರ್ಜಿದಾರನು ತನ್ನ ಒಪ್ಪಂದದ ಕೆಲಸವನ್ನು ಕಳೆದುಕೊಳ್ಳುವ ಮೂಲಕ ಈಗಾಗಲೇ ಬೆಲೆ ತೆತ್ತಿದ್ದಾರೆ" ಎಂದು ನ್ಯಾಯಾಲಯ ಹೇಳಿದೆ.


ಕಳೆದ ಕೆಲವು ವರ್ಷಗಳಿಂದ, ರಾಷ್ಟ್ರಗೀತೆ ನುಡಿಸುವಾಗ ಎದ್ದು ನಿಲ್ಲದ ಕಾರಣಕ್ಕಾಗಿ ವಿವಿಧ ರಾಜ್ಯಗಳಲ್ಲಿ ಮತ್ತು  ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಲವಾರು ಜನರ ವಿರುದ್ಧ ಪ್ರಕರಣಗಳು ದಾಖಲಾಗಿವೆ.2016 ರ ನವೆಂಬರ್‌ನಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸುವ ಮೊದಲು ಸಿನೆಮಾ ಹಾಲ್‌ಗಳು ರಾಷ್ಟ್ರಗೀತೆ ನುಡಿಸುವುದನ್ನು ಕಡ್ಡಾಯಗೊಳಿಸಿದ ಕೂಡಲೇ ಕೇರಳ ಮತ್ತು ಚೆನ್ನೈನಲ್ಲಿ ಹಲವಾರು ಜನರನ್ನು ಬಂಧಿಸಲಾಯಿತು.


ಆದರೆ ಮುಂದೆ 2016 ರಲ್ಲಿ ನೀಡಿದ ತೀರ್ಪಿಗಿಂತಲೂ ಭಿನ್ನವಾಗಿ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್, ಚಲನಚಿತ್ರಗಳನ್ನು ಪ್ರದರ್ಶಿಸುವ ಮೊದಲು ಸಿನೆಮಾ ಹಾಲ್‌ಗಳಲ್ಲಿ ರಾಷ್ಟ್ರಗೀತೆ ನುಡಿಸುವುದು ಇನ್ನು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ 2018 ರ ಜನವರಿಯಲ್ಲಿ ನೀಡಿದ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.ಈ ಸೂಕ್ಷ್ಮ ವಿಷಯದಲ್ಲಿ ಮಾರ್ಗಸೂಚಿಗಳನ್ನು ರೂಪಿಸಲು ಅದನ್ನು ಸರ್ಕಾರಿ ಸಮಿತಿಗೆ ಬಿಟ್ಟಿದೆ ಎಂದು ಅದು ಹೇಳಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ