ಅಗರ್ತಲಾ: ಇತ್ತೀಚಿಗೆ  ಮಾಜಿ ವಿಶ್ವ ಸುಂದರಿ ಡಯಾನಾ ಹೇಡನ್ ಅವರ ಸೌಂದರ್ಯದ ಬಗ್ಗೆ ಟೀಕೆ ಮಾಡಿ ವಿವಾದ ಸೃಷ್ಟಿಸಿದ್ದ ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಈಗ ಮತ್ತೆ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ. 


COMMERCIAL BREAK
SCROLL TO CONTINUE READING

ಭಾನುವಾರದಂದು ಅಗರ್ತಲಾದ ತ್ರಿಪುರಾ ಪಶು ಪರಿಷತ್ ನಲ್ಲಿ ಆಯೋಜಿಸಿದ್ದ ಸೆಮಿನಾರ್ ನಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದ ಯುವಕರನ್ನು, ಅದರಲ್ಲೂ ವಿಶೇಷವಾಗಿ ವಿದ್ಯಾವಂತರು ಸರ್ಕಾರದ ಕೆಲಸಗಳಿಗಾಗಿ ರಾಜಕಾರಣಿಗಳ ಹಿಂದೆ ಓಡುವ ಬದಲಿಗೆ ದನ ಸಾಕಿ ಸ್ವಯಂ ಉದ್ಯೋಗಿಗಳಾಗಬೇಕೆಂದರು.


ಪ್ರತಿ ಮನೆಯಲ್ಲಿ ಒಂದು ದನ ಇರಬೇಕು, ಸರ್ಕಾರಿ ಉದ್ಯೋಗಕ್ಕಾಗಿ ರಾಜಕಾರಣಿಗಳ ಹಿಂದೇಕೆ ತಿರುಗಬೇಕು?  ಈಗ ಒಂದು ಲಿಟರ್ ಹಾಲು 50 ರೂ.ಗೆ ಮಾರಾಟವಾಗುತ್ತಿದೆ ಆದ್ದರಿಂದ ಪದವೀಧರರು ಹಸುಗಳನ್ನು ಸಾಕಿ 10 ವರ್ಷಗಳಲ್ಲಿ 10 ಲಕ್ಷ ರೂಪಾಯಿಗಳನ್ನು ಸಂಪಾಧಿಸಬಹುದು ಎಂದು ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್  ಹೇಳಿದರು.