ನೀವು ಬಳಸುವ ನೋಟು ನಿಮ್ಮ ಪ್ರಾಣಕ್ಕೆ ಕುತ್ತು ತರುತ್ತದೆ ಗೊತ್ತಾ!
ಹೌದು,ಈಗ ಇಂತಹ ಸುದ್ದಿಯೊಂದು ಈಗ ಸಂಶೋಧನೆಯ ಮೂಲಕ ಧೃಡಪಟ್ಟಿದೆ.
ನವದೆಹಲಿ: ಹೌದು,ಈಗ ಇಂತಹ ಸುದ್ದಿಯೊಂದು ಈಗ ಸಂಶೋಧನೆಯ ಮೂಲಕ ಧೃಡಪಟ್ಟಿದೆ.
ಈ ಸಂಶೋಧನೆಯ ಪ್ರಕಾರ ನೋಟುಗಳ ಮೂಲಕ ಹಲವು ರೀತಿಯ ಸೋಂಕು ರೋಗಗಳು ಹರಡುತ್ತವೆ,ಈ ರೋಗಗಳು ಮಾರಣಾಂತಿಕ ರೋಗಗಳಿಗೂ ಕಾರಣವಾಗುತ್ತವೆ ಎನ್ನುವುದನ್ನು ಹಲವು ಸಂಶೋಧನಾ ಸಂಸ್ಥೆಗಳು ಧೃಡಪಡಿಸಿವೆ.ಅವುಗಳಲ್ಲಿ ಪ್ರಮುಖವಾಗಿ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್ತಿನ ಅಧೀನದಲ್ಲಿರುವ ಭಾರತದ ಇನ್ಸ್ಟಿಟ್ಯೂಟ್ ಆಫ್ ಜಿನಾಮಿಕ್ಸ್ ಎಂಡ್ ಇಂಟಿಗ್ರೆಟಿವ್ ಬಯೋಲಜಿ ಸಂಸ್ಥೆ ಅಧ್ಯಯನ ನಡೆಸಿ ಅಂತರಾಷ್ಟ್ರೀಯ ನಿಯತಕಾಲಿಕೆಯೊಂದರಲ್ಲಿ ಪ್ರಕಟಿಸಿದೆ.
ಈ ವರದಿ ಹೇಳುವಂತೆ ಸುಮಾರು 78 ರೀತಿಯ ರೋಗಗಳು ಈ ನೋಟಿನ ಮೂಲಕವೇ ಹರಡಲಿವೆ ಎಂದು ಹೇಳಲಾಗಿದೆ.ಇವುಗಳಲ್ಲಿ ಸಾಮಾನ್ಯವಾಗಿ ಜ್ವರ,ಹೊಟ್ಟೆ ನೋವು ಶ್ವಾಸಕೋಶದ ಸೋಂಕು,ಗಂಟಲು ಸೋಂಕು, ಕ್ಷಯ ಮಿದುಳಿನ ಉರಿಯೂತ,ರಕ್ತ ನಂಜು ಹೀಗೆ ಹಲವು ರೀತಿಯ ರೋಗಗಳು ನೋಟಿನ ಮೂಲಕ ಹರಡಲಿವೆ ಎಂದು ತಿಳಿದು ಬಂದಿದೆ.
ಈ ಅಪಾಯದ ಬಗ್ಗೆ ಅರಿತಿರುವ ಅಖಿಲ ಭಾರತ ವರ್ತಕರ ಒಕ್ಕೂಟವು ಈ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಬೇಕು ಮತ್ತು ಅದಕ್ಕೆ ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಹಣಕಾಸು ಸಚಿವ ಅರುಣ್ ಜೈಟ್ಲಿಯವರಿಗೆ ಮನವಿ ಸಲ್ಲಿಸಿದೆ.