ಬೆಂಗಳೂರು: ಮಹದಾಯಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಆದಷ್ಟು ಬೇಗ ವಿಚಾರಣೆ ಮುಗಿಸಲು ಸಹಕರಿಸುವಂತೆ ಸೂಚನೆ ನೀಡಿ ಮಹದಾಯಿ ನ್ಯಾಯಾಧೀಕರಣದಿಂದ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ನೋಟೀಸ್ ಮಾಡಿದೆ.


COMMERCIAL BREAK
SCROLL TO CONTINUE READING

2018 ರ ಅಕ್ಟೋಬರ್ 20 ರೊಳಗೆ ಮಹಾದಾಯಿ ನ್ಯಾಯಾಧಿಕರಣದ ಅವಧಿ ಮುಕ್ತಾಯಗೊಳ್ಳಲಿದ್ದು, ಅಷ್ಟರೊಳಗೆ ತೀರ್ಪು ಪ್ರಕತಿಸಬೀಕಿದೆ. ಈಗಾಗಲೇ ಎರಡು ಬಾರಿ ಅವಧಿ ವಿಸ್ತರಣೆಯಾಗಿರುವುದರಿಂದ ರಾಜ್ಯಗಳಿಗೆ ನೋಟಿಸ್ ನೀಡಲಾಗಿದೆ.  


ಮಹದಾಯಿ ಜಲವಿವಾದಕ್ಕೆ ಸಂಬಂಧಿಸಿದಂತೆ ಗೋವಾ-ಮಹಾರಾಷ್ಟ್ರ ಸರ್ಕಾರಗಳು ಈಗಾಗಲೇ ಸಾಕ್ಷ್ಯ ನುಡಿದಿದ್ದು, ಕರ್ನಾಟಕದ ನಾಲ್ಕು ಮಂದಿ ಪೈಕಿ ಇಬ್ಬರಷ್ಟೇ ಸಾಕ್ಷ್ಯ ನುಡಿದಿದ್ದಾರೆ. ಉಳಿದ ಇಬ್ಬರು ಹಾಜರಾಗಲು ಮುಂದಿನ ತಿಂಗಳು ಸಮಯ ನಿಗದಿಯಾಗಿದೆ. ಸಾಕ್ಸ್ಯಗಳನ್ನು ಕಡಿಮೆ ಮಾಡುವಂತೆ ಮತ್ತು ಪ್ರಶ್ನೆಗಳನ್ನು 25ಕ್ಕೆ ಸೀಮಿತಗೊಳಿಸುವಂತೆಯೂ ನ್ಯಾಯಾಧಿಕರಣ ನೋಟಿಸ್ ನಲ್ಲಿ ಸಲಹೆ ನೀಡಿದೆ.