ನವದೆಹಲಿ: 370 ನೇ ವಿಧಿಯನ್ನು ಜಮ್ಮು ಮತ್ತು ಕಾಶ್ಮೀರದಿಂದ ರದ್ದುಪಡಿಸಿದ ರೀತಿಯಲ್ಲಿಯೇ ಅಯೋಧ್ಯೆಯಲ್ಲಿ ರಾಮ್ ದೇವಾಲಯವನ್ನು ನಿರ್ಮಿಸಲಾಗುವುದು ಎಂದು ಭೋಪಾಲ್‌ನ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ವಿವಾದಾತ್ಮಕ ಹೇಳಿಕೆಗಳನ್ನು ನೀಡುವಲ್ಲಿ ಹೆಸರುವಾಸಿಯಾದ ಠಾಕೂರ್,'ರಾಮ್ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಿಸಲಾಗುವುದು, 370 ನೇ ವಿಧಿಯನ್ನು ಜಮ್ಮು ಮತ್ತು ಕಾಶ್ಮೀರದಿಂದ ತೆಗೆದುಹಾಕಲಾಗಿದೆ. ಅಯೋಧ್ಯೆಯಲ್ಲಿ ದೇವಾಲಯವನ್ನು ನಿರ್ಮಿಸುವವರೆಗೆ ನನಗೆ ಏನೂ ಆಗುವುದಿಲ್ಲ' ಎಂದು ಹೇಳಿದರು.


"370 ನೇ ವಿಧಿಯನ್ನು ತೆಗೆದುಹಾಕುವಿಕೆಯು ದೇಶವನ್ನು ಒಂದುಗೂಡಿಸಿದೆ ಎಂದು ಎಲ್ಲರೂ ಈಗ ನಂಬಿದ್ದಾರೆ. ಈಗ ಭವ್ಯವಾದ ರಾಮ್ ದೇವಾಲಯವನ್ನು ನಿರ್ಮಿಸಲಾಗುವುದು ಮತ್ತು ನಾವೆಲ್ಲರೂ ಶೀಘ್ರದಲ್ಲೇ ಇದಕ್ಕೆ ಸಾಕ್ಷಿಯಾಗುತ್ತೇವೆ" ಎಂದು ಅವರು ಇಂದೋರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.


ಇತ್ತೀಚೆಗೆ ಉತ್ತರ ಪ್ರದೇಶ ಸಚಿವ ಸುನೀಲ್ ಭಾರಲಾ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಅವರು ಎಎನ್‌ಐಗೆ ಪ್ರತಿಕ್ರಿಯಿಸಿ, 'ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅವಧಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗುವುದು. ಅವರು ನಿರ್ಣಾಯಕ ವ್ಯಕ್ತಿ, ಅವರು ತಮ್ಮ ಕೈಗಳಿಂದ ದೇವಾಲಯವನ್ನು ನಿರ್ಮಿಸುವವರು, ಅವರಲ್ಲಿ 'ಅಪಾರ್ ಶಕ್ತಿ' ಇದೆ ಎಂದು ಹೇಳಿದ್ದರು.


'ಅಯೋಧ್ಯೆ ವಿಷಯದ ಬಗ್ಗೆ ಪ್ರತಿದಿನದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ ಮತ್ತು ರಾಮ್ ದೇವಾಲಯ ನಿರ್ಮಾಣದ ಪರವಾಗಿ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಮುಸ್ಲಿಂ ಸಮುದಾಯ ಕೂಡ ಇದನ್ನು ಬೆಂಬಲಿಸುತ್ತದೆ' ಎಂದು ಅವರು ಹೇಳಿದ್ದರು.