ಇನ್ಮುಂದೆ ವಾರದಲ್ಲಿ 5 ದಿನ ಮಾತ್ರ ಬ್ಯಾಂಕಿಂಗ್ ಸೇವೆ!
ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೀರ್ಘಕಾಲದಿಂದ ಕೆಲಸದ ದಿನವನ್ನು ವಾರಕ್ಕೆ 5 ದಿನ ಮಾಡುವ ಬಗ್ಗೆ ಬೇಡಿಕೆ ಇದೆ. ಪ್ರಸ್ತಾವನೆಯ ಪ್ರಕಾರ, ಈಗ ಎಲ್ಲಾ ಶನಿವಾರ ಮತ್ತು ಭಾನುವಾರಗಳು ಬ್ಯಾಂಕುಗಳಿಗೆ ರಜೆ ಘೋಷಿಸುವ ಸಾಧ್ಯತೆಯಿದೆ.
ನವದೆಹಲಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೀರ್ಘಕಾಲದಿಂದ ಕೆಲಸದ ದಿನವನ್ನು ವಾರಕ್ಕೆ 5 ದಿನ ಮಾಡುವ ಬಗ್ಗೆ ಬೇಡಿಕೆ ಇದೆ. ಈ ಬೇಡಿಕೆಗೆ ಶೀಘ್ರದಲ್ಲೇ ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ. ಪ್ರಸ್ತಾವನೆಯ ಪ್ರಕಾರ, ಈಗ ಎಲ್ಲಾ ಶನಿವಾರ ಮತ್ತು ಭಾನುವಾರಗಳು ಬ್ಯಾಂಕುಗಳಿಗೆ ರಜೆ ಘೋಷಿಸುವ ಸಾಧ್ಯತೆಯಿದೆ. ಆದಾಗ್ಯೂ, ಇದೀಗ ಅದು ಕೇವಲ ಪ್ರಸ್ತಾಪವಾಗಿದೆ. ಒಂದೊಮ್ಮೆ ಸರ್ಕಾರ ಇದಕ್ಕೆ ಅಸ್ತು ಎಂದರೆ ಬ್ಯಾಂಕ್ ನೌಕರರಿಗೆ ಶುಭ ಸುದ್ದಿ ದೊರೆತಂತಾಗುತ್ತದೆ.
ವಾರಕ್ಕೆ ಐದು ದಿನ ಕೆಲಸ 2 ದಿನಗಳ ರಜೆ ನಿಯಮ ಬ್ಯಾಂಕುಗಳಿಗೂ ಅನ್ವಯವಾಗಬಹುದು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಪ್ರಸ್ತುತ, ತಿಂಗಳ ಎಲ್ಲಾ ಭಾನುವಾರಗಳು ಹಾಗೂ ಹೆಚ್ಚುವರಿಯಾಗಿ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕುಗಳಿಗೆ ರಜೆ ನೀಡಲಾಗುತ್ತಿದೆ.
ಇದಲ್ಲದೆ, ಸದ್ಯದಲ್ಲೇ ಬ್ಯಾಂಕ್ ನೌಕರರ ವೇತನವನ್ನು ಕೂಡ ಶೀಘ್ರದಲ್ಲೇ ಹೆಚ್ಚಿಸಬಹುದು ಎನ್ನಲಾಗಿದೆ. ಸಹಾಯಕ ವೆಬ್‌ಸೈಟ್ ಜೀ ಬಿಸಿನೆಸ್‌ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಹಣಕಾಸು ಸಚಿವಾಲಯವು ಬ್ಯಾಂಕುಗಳಲ್ಲಿ ಐದು ದಿನ ಕೆಲಸ, ಎರಡು ದಿನ ರಜೆ ನಿಯಮವನ್ನು ಜಾರಿಗೆ ತರುವ ಉದ್ದೇಶ ಹೊಂದಿದೆ.
ಬ್ಯಾಂಕುಗಳ ಬೇಡಿಕೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದರ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಲು ಭಾರತೀಯ ಬ್ಯಾಂಕುಗಳ ಸಂಘಕ್ಕೆ (ಐಬಿಎ) ಸಚಿವಾಲಯ ಕೇಳಿದೆ. ಮೂಲಗಳ ಪ್ರಕಾರ, ಈ ಸಭೆ ನವೆಂಬರ್‌ನಲ್ಲಿ ನಡೆಯಲಿದೆ.
ಬ್ಯಾಂಕರ್‌ಗಳ ಬೇಡಿಕೆ:
1. ಸಂಬಳ ಪರಿಷ್ಕರಣೆಗಾಗಿ ಬೇಡಿಕೆ:
ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ 7ನೇ ವೇತನ ಆಯೋಗದ ನಿಯಮವನ್ನು ಬ್ಯಾಂಕ್ ನೌಕರರಿಗೂ ಅನ್ವಯಿಸುವಂತೆ ಅವರು ಬೇಡಿಕೆ ಇಟ್ಟಿದ್ದಾರೆ. ನೌಕರರು ತಮ್ಮ ಸಂಬಳದಲ್ಲಿ 14% ಹೆಚ್ಚಳವನ್ನು ಬಯಸುತ್ತಾರೆ.
2. ಜಿಎಸ್ಟಿ ತೆಗೆದುಹಾಕಲು ಬೇಡಿಕೆ:
ಹಿರಿಯ ನಾಗರಿಕರ ಗುಂಪು ಆರೋಗ್ಯ ವಿಮಾ ಪ್ರೀಮಿಯಂ ಮೇಲಿನ ಜಿಎಸ್ಟಿ ತೆಗೆದುಹಾಕಲಾಗಿದೆ. ಸುಮಾರು 1.5 ಲಕ್ಷ ನಿವೃತ್ತ ಬ್ಯಾಂಕರ್‌ಗಳು ಇದರ ಲಾಭ ಪಡೆಯುತ್ತಿದ್ದಾರೆ.
3. ಪಿಂಚಣಿ ಹೆಚ್ಚಿಸಲು ಒತ್ತು:
ಪಿಎಸ್‌ಯು ಬ್ಯಾಂಕಿನ ನೌಕರರು ಪಿಂಚಣಿ ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. 1996 ರಿಂದ ನೌಕರರ ಪಿಂಚಣಿ ಹೆಚ್ಚಿಸಿಲ್ಲ ಎಂದು ಆರೋಪಿಸಲಾಗಿದೆ.
4. ವಿಲೀನವನ್ನು ವಿರೋಧ:
ಸಣ್ಣ ಬ್ಯಾಂಕುಗಳನ್ನು ದೊಡ್ಡ ಬ್ಯಾಂಕುಗಳಲ್ಲಿ ವಿಲೀನಗೊಳಿಸುವುದನ್ನು ಬ್ಯಾಂಕ್ ಒಕ್ಕೂಟಗಳು ವಿರೋಧಿಸುತ್ತಿವೆ. ಕೇಂದ್ರದಲ್ಲಿ 7 ನೇ ವೇತನ ಆಯೋಗ ಹೇರಿದಾಗಿನಿಂದ ಬ್ಯಾಂಕ್ ನೌಕರರು ವೇತನ ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದಾರೆ. ಐಬಿಎ 2% ವೇತನ ಹೆಚ್ಚಳವನ್ನು ಕೇಳಿದೆ, ಅದನ್ನು ಬ್ಯಾಂಕ್ ಯೂನಿಯನ್ ತಿರಸ್ಕರಿಸಿತು. ಅವರು 25% ವೇತನ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದರು, ಆದರೆ ಈಗ 14% ಹೆಚ್ಚಳಕ್ಕೆ ಒತ್ತಾಯಿಸಿದ್ದಾರೆ.