ನವದೆಹಲಿ: ಇನ್ಮುಂದೆ ದ್ವಿಚಕ್ರ ವಾಹನ ಸವಾರರಿಗೆ ಬಿಐಎಸ್ (Bureau of Indian Standards) ಸ್ಟ್ಯಾಂಡರ್ಡ್ ಸರ್ಟಿಫೈಡ್ ಹೆಲ್ಮೆಟ್ ಧರಿಸಲು ಮಾತ್ರ ಅವಕಾಶವಿದೆ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ. ಈ ರೀತಿಯ ಹೆಲ್ಮೆಟ್‌ ಗಳ ಣಮಟ್ಟವನ್ನು ಮೊದಲೇ ನಿರ್ಧರಿತವಾಗಿರುತ್ತದೆ. ಆದ್ದರಿಂದ ದ್ವಿಚಕ್ರ ವಾಹನ ಚಾಲಕರಿಗೆ ಸಾಮಾನ್ಯ ಗುಣಮಟ್ಟದ ಹೆಲ್ಮೆಟ್ ಧರಿಸುವುದು ದುಬಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ರಸ್ತೆ ಅಪಘಾತಗಳಲ್ಲಾಗುತ್ತಿರುವ ಸಾವುಗಳ ಸಂಖ್ಯೆ ಕಡಿಮೆ ಮಾಡಲು ಒತ್ತು
ರಸ್ತೆ ಅಪಘಾತಗಳಲ್ಲಾಗುತ್ತಿರುವ ಸಾವು-ನೋವುಗಳನ್ನು ತಡೆಗಟ್ಟುವ ಪ್ರಯತ್ನ ಇದಾಗಿದೆ ಎಂದು ಭಾರತ ಸರ್ಕಾರದ ಸಾರಿಗೆ ಮತ್ತು ಹೆಚ್ಚಾರಿ ಸಚಿವಾಲಯ ಹೇಳಿಕೆ ನೀಡಿದೆ. ಸರ್ಕಾರದ ಈ ನಿರ್ಧಾರವು ಕೆಳಮಟ್ಟದ ಗುಣಮಟ್ಟದ ಹೆಲ್ಮೆಟ್ ತಯಾರಿಕೆ ಮತ್ತು ಅವುಗಳ ಸಂಪೂರ್ಣ ನಿಷೇಧಕ್ಕೆ ನಾಂದಿ ಹಾಡಲಿದೆ. ಇದಕ್ಕಾಗಿ, 'ದ್ವಿಚಕ್ರ ವಾಹನ ಮೋಟಾರು ವಾಹನ (ಗುಣಮಟ್ಟದ ನಿಯಂತ್ರಣ) ಆದೇಶದ ಸವಾರರಿಗೆ ಹೆಲ್ಮೆಟ್, 2020' (ದ್ವಿಚಕ್ರ ವಾಹನಗಳ ವಾಹನ ಚಾಲಕರಿಗೆ ಹೆಲ್ಮೆಟ್ (ಗುಣಮಟ್ಟ ನಿಯಂತ್ರಣ) ಆದೇಶ, 2020 ') ಅಂಗೀಕರಿಸಲಾಗಿದೆ. ಈ ಆದೇಶದ ನಂತರ, ಬಿಐಎಸ್ ಸ್ಟ್ಯಾಂಡರ್ಡ್ ಸರ್ಟಿಫೈಡ್ ಹೆಲ್ಮೆಟ್ ಅನ್ನು ಮಾತ್ರ ತಯಾರಿಸಬಹುದು ಮತ್ತು ಮಾರಾಟ ಮಾಡಬಹುದು.


ಇದನ್ನು ಓದಿ- Gold ಹಾಲ್‌ಮಾರ್ಕಿಂಗ್ ನಿಯಮ ಕಡ್ಡಾಯಕ್ಕೆ ಗಡುವು ವಿಸ್ತರಣೆ, ಇಲ್ಲಿದೆ ಕಾರಣ


ಸುಪ್ರೀಂ ಕೋರ್ಟ್ ಸಮೀತಿ ನೀಡಿದ ನಿರ್ದೇಶನದ ಹಿನ್ನೆಲೆ ಆದೇಶ
ಸುಪ್ರೀಂ ಕೋರ್ಟ್ ಸಮಿತಿ ನಿರ್ದೇಶನದ ಹಿನ್ನೆಲೆ ಭಾರತ ಸರ್ಕಾರದ ಸಾರಿಗೆ ಸಚಿವಾಲಯ ಈ ಆದೇಶ ನೀಡಿದೆ. ಈ ಸಮಿತಿಯಲ್ಲಿ ಬಿಐಎಸ್ ಮತ್ತು ಏಮ್ಸ್ ತಜ್ಞರು ಶಾಮೀಲಾಗಿದ್ದಾರೆ. ಈ ಸಮಿತಿಯು ಈ ನಿಟ್ಟಿನಲ್ಲಿ ಮಾರ್ಚ್ 2018 ರಲ್ಲಿ ಮಾರ್ಗಸೂಚಿಗಳನ್ನು ನೀಡಿತ್ತು. ಇದರಲ್ಲಿ ಹಗುರವಾದ ಮತ್ತು ಬಲವಾದ ಹೆಲ್ಮೆಟ್‌ಗಳನ್ನು ಬಳಸಲು ಸೂಚಿಸಲಾಗಿತ್ತು.


ತನ್ನ ನಿಯಮದಲ್ಲಿ ಬದಲಾವಣೆ ತಂಡ BIS
ಸಮಿತಿಯ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಬಿಐಎಸ್ ಕೂಡ ತನ್ನ  ನಿಯಮಗಳನ್ನು ಬದಲಾಯಿಸಿದೆ. ಆದ್ದರಿಂದ ಕಡಿಮೆ ತೂಕದ ಮತ್ತು ಗಟ್ಟಿಯಾಗಿರುವ  ಹೆಲ್ಮೆಟ್ ಉತ್ಪಾದಿಸಬಹುದು. ಪ್ರತಿ ವರ್ಷ ಭಾರತದಲ್ಲಿ 17 ಮಿಲಿಯನ್ ಹೆಲ್ಮೆಟ್‌ಗಳನ್ನು ತಯಾರಿಸಲಾಗುತ್ತದೆ.


ಇದನ್ನು ಓದಿ- ಗ್ರಾಹಕರಲ್ಲಿ ಹೆಚ್ಚಿದ ಶಕ್ತಿ: ಇದೀಗ ಅಸಲಿ ಮತ್ತು ನಕಲಿ ಉತ್ಪನ್ನಗಳ ಪತ್ತೆ ಮತ್ತಷ್ಟು ಸುಲಭವಾಗಿದೆ


ಸರ್ಕಾರದ ನಿರ್ಣಯವನ್ನು ಸ್ವಾಗತಿಸಿದ ಇಂಟರ್ನ್ಯಾಷನಲ್ ರೋಡ್ ಫೆಡರೇಶನ್
ಜಿನೀವಾ ಮೂಲದ ಅಂತರರಾಷ್ಟ್ರೀಯ ರಸ್ತೆ ಒಕ್ಕೂಟವು ಭಾರತ ಸರ್ಕಾರದ ಈ ಪ್ರಯತ್ನವನ್ನು ಸ್ವಾಗತಿಸಿದೆ. ಸರ್ಕಾರದ ಈ ಕ್ರಮವು ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯನ್ನು ಕಡಿಮೆ ಮಾಡಲಿದೆ ಎಂದು ಸಂಸ್ಥೆ ಹೇಳಿದೆ.