ನವದೆಹಲಿ :  ಆಧಾರ್ ಕಾರ್ಡ್ (Aadhaar card) ಬಗ್ಗೆ ವಿಶೇಷ ರೀತಿಯ ಅಪ್ಡೇಟ್ ಬಂದಿದೆ. ಈಗ ನಿಮ್ಮ ಮುಖವನ್ನು ಕ್ಯಾಮೆರಾದ ಮುಂದೆ ಇರಿಸುವ ಮೂಲಕ ಆಧಾರ್ ಕಾರ್ಡ್ ಡೌನ್‌ಲೋಡ್ (Aadhaar download) ಮಾಡಿಕೊಳ್ಳಬಹುದು. ಇದು ಅತ್ಯಂತ ಸರಳ ವಿಧಾನ. ಈ ವಿಧಾನದ ಮೂಲಕ ಆಧಾರ್ ಡೌನ್ಲೋಡ್ ಮಾಡಲು ಈ ಪ್ರಕ್ರಿಯೆಯನ್ನು ಅನುಸರಿಸಬೇಕು. 


COMMERCIAL BREAK
SCROLL TO CONTINUE READING

1- ಮೊದಲನೆಯದಾಗಿ,ಗೂಗಲ್‌ನಲ್ಲಿ (Google) ಯುಐಡಿಎಐ (UIDAI) ಅನ್ನು ಸರ್ಚ್ ಮಾಡಬೇಕು. ನಂತರ್ ಈ ವೆಬ್‌ಸೈಟ್  ಕ್ಲಿಕ್ ಮಾಡಿ. 


2- ಇದಾದ  ನಂತರ ಹೊಸ ಪುಟ ತೆರೆಯುತ್ತದೆ. ಇದರಲ್ಲಿ ಆಧಾರ್ ಡೌನ್ಲೋಡ್ (Download) ಮಾಡಲು ಬೇಕಾಗಿರುವ ಎಲ್ಲಾ ಆಯ್ಕೆಗಳಿರುತ್ತವೆ. ಇಲ್ಲಿಆಧಾರ್ ಅಪ್ಡೇಟ್ (Aadhaar Update) ಮಾಡಲು ಬೇಕಾಗಿರುವ ಆಯ್ಕೆಗಳು ಸಿಗುತ್ತವೆ. 


ಇದನ್ನೂ ಓದಿ : ಆದಾಯ ತೆರಿಗೆ ಪಾವತಿದಾರರಿಗೊಂದು ಸಂತಸದ ಸುದ್ದಿ...!


3- ಇಲ್ಲಿ get adhaar card  ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಅದರ ನಂತರ ಮತ್ತೊಂದು ಆಯ್ಕೆಯನ್ನು ನೀಡಲಾಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಈ ಪೇಜ್ ನಲ್ಲಿ ಮುಖದ ಆಯ್ಕೆಯನ್ನು ಪಡೆಯುತ್ತೀರಿ.


4- Face ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಮೊಬೈಲ್ (Mobile) ಸಂಖ್ಯೆಯನ್ನು ಅಪ್ಡೇಟ್ ಮಾಡಬೇಕು. ಅದರ ನಂತರ ಕ್ಯಾಪ್ಚಾ  ಭರ್ತಿ ಮಾಡಬೇಕು. ಇದರ ನಂತರ  ಫೇಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಈ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಇಲ್ಲವಾದರೆ ಈ ಪೇಜ್ disappear ಆಗುತ್ತದೆ.   ಇದರಲ್ಲಿ, ನಿಮ್ಮ ಮುಖವನ್ನು ಕ್ಯಾಮೆರಾದ (Camera) ಮುಂದೆ ತರಬೇಕು. ನಿಮ್ಮ ಮುಖವನ್ನು ಕ್ಯಾಮೆರಾಗೆ ಸರಿಯಾಗಿ ಸೆಟ್ ಮಾಡಿಕೊಳ್ಳಬೇಕು. ನಂತರ ಓಕೆ ಬಟನ್ ಒತ್ತಿ. 


5-  ಕ್ಯಾಮೆರಾ ಓಪನ್ ಆಗುತ್ತದೆ. ನಂತರ, ನಿಮ್ಮ ಮುಖವನ್ನು ಕ್ಯಾಮೆರಾದ ಮುಂದೆ ತಂದಾಗ,  ಕ್ಲಿಕ್ ಆಗುತ್ತದೆ.  ಫೋಟೋ ಕ್ಲಿಕ್ ಆದ  ತಕ್ಷಣ ನಿಮ್ಮ ಆಧಾರ್ ಕಾರ್ಡ್ (Aadhaar ) ಡೌನ್‌ಲೋಡ್ ಆಗುತ್ತದೆ.


ಇದನ್ನೂ ಓದಿ : PAN- Aadhaar Link Today : ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಲಿಂಕ್ ಆಗಿದೆಯಾ ಹೀಗೆ ಚೆಕ್ ಮಾಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.