ನವದೆಹಲಿ: ರೈತ ಹೊಲಗಳಲ್ಲಿ ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡಿ ಬೆಳೆ ಸಿದ್ಧಪಡಿಸುತ್ತಾನೆ. ಆದರೆ ಅವನು ಕಷ್ಟಪಟ್ಟು ಸಂಪಾದಿಸಿದ ಸರಕನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದಾಗ ಅವನ ಕಠಿಣ ಪರಿಶ್ರಮಕ್ಕೆ ಸರಿಯಾದ ಬೆಲೆ ಸಿಗದೇ ಹೋದಲ್ಲಿ ಅವನು ನಿರಾಶೆಗೊಳ್ಳುತ್ತಾನೆ. ಏಕೆಂದರೆ ರೈತನ ಎಲ್ಲಾ ಯೋಜನೆಗಳು ಆತನು ಬೆಳೆದ ಬೆಳೆಯ ಮಾರಾಟದ ಮೇಲೆ ಅವಲಂಭಿಸಿರುವುದರಿಂದ, ಅದಕ್ಕೆ ಸರಿಯಾದ ಬೆಲೆ ಸಿಗದಿದ್ದಾಗ, ಆತ ನಿರಾಶೆ ಅನುಭವಿಸುತ್ತಾನೆ. ರೈತರಿಗೆ ಈ ರೀತಿಯ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಸರ್ಕಾರ ಕಾಲ-ಕಾಲಕ್ಕೆ ಹೊಸ-ಹೊಸ ಯೋಜನೆ ಹಾಗೂ ಪರಿಹಾರಗಳನ್ನು ಘೋಷಿಸುತ್ತಲೇ ಇರುತ್ತದೆ.


COMMERCIAL BREAK
SCROLL TO CONTINUE READING

ಸದ್ಯ ಕೇಂದ್ರ ಸರ್ಕಾರ 'ಆತ್ಮ ನಿರ್ಭರ್ ಭಾರತ್' ಯೋಜನೆಯ ಅಡಿ ರೈತರಿಗೆ ಸಾಲ ನೀಡಲು 30 ಸಾವಿರ ಕೋಟಿ ರೂ. ಆರ್ಥಿಕ ಅನುದಾನವನ್ನು ಕಾಯ್ದಿರಿಸಿದೆ. ಇದಲ್ಲದೆ ರಾಜ್ಯ ಸರ್ಕಾರಗಳು ಕೂಡ ತಮ್ಮ ತಮ್ಮ ರಾಜ್ಯದ ರೈತರಿಗಾಗಿ ಹಲವು ಯೋಜನೆಗಳನ್ನು ಕೈಗೊಳ್ಳುತ್ತವೆ. ಉದಾಹರಣೆಗಾಗಿ ರಾಜಸ್ಥಾನ ಸರ್ಕಾರ ತನ್ನ ರಾಜ್ಯದ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಯೋಜನೆಯೊಂದನ್ನು ಜಾರಿಗೊಳಿಸಿದೆ. ಜೊತೆಗೆ ಸರ್ಕಾರ ರೈತರು ಬೆಳೆದ ಬೆಳೆಗೆ ಸರಿಯಾದ ಮೌಲ್ಯ ದೊರಕಿಸಲು, ಖರೀದಿಗಾಗಿ ಸುಲಭ ಹಾಗೂ ಕೇಂದ್ರೀಕೃತ ಸಿಸ್ಟಮ್ ಅನ್ನು ಕೂಡ ಜಾರಿಗೊಳಿಸಿದೆ. ಅಲ್ಲಿನ ಸರ್ಕಾರ ಕೃಷಿ ಕಲ್ಯಾಣ ಯೋಜನೆಯ ಅಡಿ ಪ್ರತಿ ವರ್ಷ 50 ಕೋಟಿ ರೂ. ಅನುದಾನ ನೀಡುವ ಮಹತ್ವದ ನಿರ್ಣಯ ಕೈಗೊಂಡಿದೆ. ಇದರಿಂದ ರಾಜ್ಯದ ರೈತರಿಗೆ ಕೇವಲ ಶೇ.3 ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗಲಿದೆ.


ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಲೆ ಬರುವ ವೇಳೆ ಸಿರಿ ಧಾನ್ಯಗಳ ಬೆಲೆ ಕಡಿಮೆ ಇರುತ್ತದೆ. ಆದರೆ, ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲವನ್ನು ಮರುಪಾವತಿಸುವ ಒತ್ತಡದಿಂದ ರೈತರು ಕಡಿಮೆ ಬೆಲೆಗೆ ತಮ್ಮ ಸರಕುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಹೀಗೆ ಮಾಡದೆ ಹೋದಲ್ಲಿ ರೈತರಿಗೆ ಊರಿನ ಸಾಹುಕಾರ ಅಥವಾ ಮಧ್ಯವರ್ತಿಯ ಬಳಿ ತಮ್ಮ ಬೆಳೆಯನ್ನು  ಅಡವು ಇಟ್ಟು ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆಯಬೇಕಾಗುತ್ತದೆ. ರೈತರ ಈ ಅವಶ್ಯಕತೆಯನ್ನು ಪರಿಗಣಿಸಿ ರಾಜಸ್ಥಾನ ಸರ್ಕಾರ ಈ ಸಾಲ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿ ಸಣ್ಣ ರೈತರಿಗೆ 1.5 ಲಕ್ಷ ರೂ. ಹಾಗೂ ದೊಡ್ಡ ರೈತರಿಗೆ 3 ಲಕ್ಷ ರೂ. ವರೆಗೆ ಸಾಲವನ್ನು ಕೇವಲ ಶೇ.3 ರ ಬಡ್ಡಿದರದಲ್ಲಿ ಒದಗಿಸಲಾಗುತ್ತಿದೆ. ಈ ಯೋಜನೆ ರೈತರಿಗೆ ಭಾರಿ ನೆರವು ನೀಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.


ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸಿದರೆ ಸಿಗಲಿದೆ ರಿಯಾಯಿತಿ 
ಒಂದು ವೇಳೆ ಈ ಯೋಜನೆಯ ಅಡಿ ರೈತ ತನ್ನ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿಸಿದರೆ ಬಡ್ಡಿ ಪಾವತಿಸುವ ವೇಳೆ ಆತನಿಗೆ ರಿಯಾಯಿತಿ ಕೂಡ ಸಿಗಲಿದೆ. ರೈತರ ಬೆಳೆಯನ್ನು ಸುರಕ್ಷಿತವಾಗಿರಿಸಲು ಯೋಜನೆಯನ್ನು ನಿಯಮಿತವಾಗಿ ಆಡಿಟ್ ಮಾಡಲಾಗುವ 'ಎ' ಮತ್ತು 'ಬಿ' ಶ್ರೇಣಿಯ ಗ್ರಾಮಸೇವಾ ಸಮೀತಿಗಳಲ್ಲಿ ವಿಂಗಡಿಸಲಾಗಿದೆ.