ನವದೆಹಲಿ: WhatsApp ಇನ್ನು ಮುಂದೆ ತನ್ನ ಬಳಕೆದಾರರ ಚಾಟ್ಗಳನ್ನು ಇತರರು ನೋಡದಂತೆ ರಕ್ಷಿಸಲು ಫಿಂಗರ್ ಪ್ರಿಂಟ್ ದೃಢೀಕರಣ ವೈಶಿಷ್ಟ್ಯವನ್ನು ತರಲು ಕಾರ್ಯನಿರ್ವಹಿಸುತ್ತದೆ.


COMMERCIAL BREAK
SCROLL TO CONTINUE READING

ಈ ವೈಶಿಷ್ಟ್ಯವು ಆಂಡ್ರಾಯ್ಡ್ 2.19.3 ಆವೃತ್ತಿಯ ಬೀಟಾದಲ್ಲಿ ಅಭಿವೃದ್ಧಿಯ ಹಂತದಲ್ಲಿದೆ ಎಂದು WhatsApp ವೈಶಿಷ್ಟ್ಯಗಳನ್ನು ಪರೀಕ್ಷಿಸುವ WABetaInfo ಸೈಟ್ ಹೇಳಿದೆ.


"ಐಒಎಸ್ನಲ್ಲಿ ಫೇಸ್ ಐಡಿ ಮತ್ತು ಟಚ್ ಐಡಿ ವೈಶಿಷ್ಟ್ಯಗಳನ್ನು ಕಾರ್ಯನಿರ್ವಹಿಸುವಂತೆ ಮಾಡಿದ ನಂತರ (ಅಭಿವೃದ್ಧಿಯ ಕಾರಣಗಳಿಗಾಗಿ ಇನ್ನೂ ಲಭ್ಯವಿಲ್ಲ), ನಿಮ್ಮ ಫಿಂಗರ್ಪ್ರಿಂಟ್ ಅನ್ನು ಬಳಸಿಕೊಂಡು ಆಂಡ್ರಾಯ್ಡ್ ನಲ್ಲಿ ದೃಢೀಕರಣ ವೈಶಿಷ್ಟ್ಯವನ್ನು ಅಂತಿಮವಾಗಿ WhatsApp ನಲ್ಲಿ  ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ!" ಎಂದು  WABetaInfo ತಿಳಿಸಿದೆ.


ಒಂದು ಸಾರಿ ಫಿಂಗರ್ ಪ್ರಿಂಟ್ ನ ಈ ವೈಶಿಷ್ಟ್ಯ ಲಭ್ಯವಾದ ನಂತರ ನಿಮ್ಮ ವಾಟ್ಸಪ್ ಸಂಪೂರ್ಣವಾಗಿ ಇತರರು ನೋಡುವುದರಿಂದ ರಕ್ಷಣೆಯಾಗಲಿದೆ.ಇದಕ್ಕೆ ವಿಶೇಷವಾದ ಯಾವುದೇ ಲಾಕ್ ನ್ನು ನೀವು ಅನ್ವಯಗೊಳಿಸುವ ಅಗತ್ಯತೆ ಇರುವುದಿಲ್ಲ.


ಈ ವೈಶಿಷ್ಟ್ಯವು ಆಂಡ್ರಾಯ್ಡ್ ಮಾರ್ಷ್ಮ್ಯಾಲೋ ಮತ್ತು ಹೊಸ ಕಾರ್ಯಾಚರಣಾ ವ್ಯವಸ್ಥೆಗಳು ಮತ್ತು ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿರುವ ಯಾವುದೇ ಆಂಡ್ರಾಯ್ಡ್ ಬಳಕೆದಾರರಿಗೆ (ಮತ್ತು ನಂತರ ಐಒಎಸ್ ಬಳಕೆದಾರರಿಗೆ ಕೂಡಾ) ಭವಿಷ್ಯದಲ್ಲಿ ಈ ವೈಶಿಷ್ಟ್ಯವು ಲಭ್ಯವಿದೆ, ಎಂದು WABetaInfo ಹೇಳಿದೆ.


ಫೇಸ್ಬುಕ್ ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ಕಳೆದ ತಿಂಗಳು ಆಂಡ್ರಾಯ್ಡ್ ಬಳಕೆದಾರರಿಗೆ ಪಿಕ್ಚರ್ ಇನ್ ಪಿಕ್ಚರ್ (ಪಿಪಿಪಿ) ಮೋಡ್ ಸೌಲಭ್ಯವನ್ನು ಒದಗಿಸಿತ್ತು.