Bank ಗ್ರಾಹಕರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ, WhatsApp ಮೂಲಕ ಮನೆಬಾಗಿಲಿಗೆ ಬರಲಿದೆ ಈ ಸೇವೆ
ಇದೀಗ ಖುದ್ದು ATM ಯಂತ್ರಗಳೇ ಹಣ ನೀಡಲು ನಿಮ್ಮ ಮನೆ ಬಾಗಿಲಿಗೆ ಬರಲಿವೆಯೇಎಂದರೆ ನಂಬುತ್ತೀರಾ...? ಹೌದು, ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಈ ಸೇವೆ ಒದಗಿಸಲಿದೆ. ಕೇವಲ ಒಂದು ವಾಟ್ಸ್ ಆಪ್ (WhatsApp) ಸಂದೇಶದ ಸಹಾಯದ ಮೂಲಕ ನೀವು ATM ಯಂತ್ರವನ್ನು ನಿಮ್ಮ ಮನೆಬಾಗಿಲಿಗೆ ಕರೆಯಿಸಿಕೊಳ್ಳಬಹುದು.
ನವದೆಹಲಿ: ಬಾಯಾರಿದವರು ಬಾವಿಯ ಬಳಿ ಹೋಗಬೇಕು ಎಂದು ಹೇಳಲಾಗುತ್ತದೆ. ಆದರೆ ಎಟಿಎಂ ಯಂತ್ರಗಳ ವಿಷಯದಲ್ಲಿ ಇದು ಹಾಗಿಲ್ಲ. ಇದೀಗ ನೀವು ನಿಮ್ಮ ಹಣವನ್ನು ಪಡೆಯಲು ಎಟಿಎಂ ಬಳಿಗೆ ಹೋಗಬೇಕಾಗಿಲ್ಲ. ಬದಲಿಗೆ ಎಟಿಎಂ ಯಂತ್ರವು ನಿಮ್ಮ ಮನೆಗೆ ಹಣ ಪಾವತಿಸಲು ಬರಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗಾಗಿ ಈ ನೂತನ ಸೇವೆ ಆರಂಭಿಸಿದೆ. ಕೇವಲ ಒಂದು ವಾಟ್ಸ್ ಆಪ್ (WhatsApp) ಸಂದೇಶದ ಸಹಾಯದ ಮೂಲಕ ನೀವು ATM ಯಂತ್ರವನ್ನು ನಿಮ್ಮ ಮನೆಬಾಗಿಲಿಗೆ ಕರೆಯಿಸಿಕೊಳ್ಳಬಹುದು.
SBI ಆರಂಭಿಸಿದೆ ಈ ಸೇವೆ
SBI(ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಇದೀಗ ತನ್ನ ಮೊಬೈಲ್ ಎಟಿಎಂ ಯಂತ್ರಗಳನ್ನು ಮನೆ ಮನೆಗೆ ಕಳುಹಿಸಲುನಿರ್ಧರಿಸಿದೆ. ಇದಕ್ಕಾಗಿ, ಎಸ್‌ಬಿಐ 'ನಿಮ್ಮ ಬೇಡಿಕೆಯ ಮೇರೆಗೆ, ನಿಮ್ಮ ಮನೆ ಬಾಗಿಲಲ್ಲಿ ಎಟಿಎಂ' ಸೇವೆಯನ್ನು ಪ್ರಾರಂಭಿಸಿದೆ. ನೀವು ನಮಗೆ ವಾಟ್ಸಾಪ್ ನೀಡಿ ಮತ್ತು ನಾವು ಎಟಿಎಂ ಯಂತ್ರವನ್ನು ನಿಮ್ಮ ಮನೆಯ ಮುಂದೆ ತರುತ್ತೇವೆ ಎಂದು ಬ್ಯಾಂಕ್ ಗ್ರಾಹಕರಿಗೆ ತಿಳಿಸಿದೆ. ಮೊಬೈಲ್ ಎಟಿಎಂ ಮನೆಗೆ ಕರೆಯಿಸಿಕೊಳ್ಳಲು ನೀವು ಬ್ಯಾಂಕಿಗೆ ಕರೆ ಮಾಡಬಹುದು ಎಂದು ಗ್ರಾಹಕರಿಗೆ ತಿಳಿಸಲಾಗಿದೆ. ಎಸ್‌ಬಿಐ ಈ ನೂತನ ಸೇವೆಯನ್ನು ಲಖನೌನಲ್ಲಿ ಪ್ರಾರಂಭಿಸಿದೆ.
ಇನ್ಮುಂದೆ ಮಿನಿಮಮ್ ಬ್ಯಾಲೆನ್ಸ್ ಹಾಗೂ SMS ಚಾರ್ಜ್ ಗಳೂ ಸಹ ನಿಮಗೆ ಬೀಳುವುದಿಲ್ಲ
ಇತ್ತೀಚೆಗಷ್ಟೇ ತನ್ನ ನಿಯಮಗಳಲ್ಲಿ ಬದಲಾವಣೆ ಮಾಡಿರುವ ಭಾರತೀಯ ಸ್ಟೇಟ್ ಬ್ಯಾಂಕ್, ತನ್ನ ಗ್ರಾಹಕರಿಗೆ ವಿಧಿಸುತಿದ್ದ SMS ಶುಲ್ಕ ಹಾಗೂ ಮಿನಿಮಮ್ ಬ್ಯಾಲೆನ್ಸ್ ಶುಲ್ಕವನ್ನು ತೆಗೆದು ಹಾಕಿದೆ. ಇತ್ತೀಚೆಗಷ್ಟೇ ಭಾರತೀಯ ಸ್ಟೇಟ್ ಬ್ಯಾಂಕ್ ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದೆ. ಬ್ಯಾಂಕ್ ನ ಸುಮಾರು 44 ಕೋಟಿಗಿಂತ ಅಧಿಕ ಉಳಿತಾಯ ಖಾತೆದಾರರಿಗೆ ಈ ಸೌಲಭ್ಯ ಸಿಗಲಿದೆ.