ನವದೆಹಲಿ: ಸೆಪ್ಟೆಂಬರ್ 1 ರಿಂದ ಆನ್‌ಲೈನ್ ರೈಲು ಟಿಕೆಟ್‌ಗಳು ದುಬಾರಿಯಾಗಿದೆ. ವಾಸ್ತವವಾಗಿ, ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ಭೇಟಿ ನೀಡಿ ಟಿಕೆಟ್ ಕಾಯ್ದಿರಿಸಲು ಸೇವಾ ಶುಲ್ಕವಾಗಿ 20-40 ರೂ. ಪಾವತಿಸಬೇಕಿತ್ತು. ಆದರೆ, ಈ ಶುಲ್ಕವನ್ನು ಕಡಿಮೆ ಮಾಡಲು ಐಆರ್‌ಸಿಟಿಸಿ ನಿರ್ಧರಿಸಿದೆ.


COMMERCIAL BREAK
SCROLL TO CONTINUE READING

ಈಗ ಎಸಿ ರಹಿತ ಕೋಚ್ ನಲ್ಲಿ ಟಿಕೆಟ್ ಕಾಯ್ದಿರಿಸಲು 15 ರೂ. ಮತ್ತು ಎಸಿ ವರ್ಗಕ್ಕೆ 30 ರೂ. ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ. ಈ ಹಿಂದೆ ಅದು 20 ರೂಪಾಯಿ ಮತ್ತು 40 ರೂಪಾಯಿ ಆಗಿತ್ತು. ಈ ರೀತಿಯಾಗಿ, ಐಆರ್‌ಸಿಟಿಸಿ ಸೇವಾ ಶುಲ್ಕವನ್ನು ಶೇಕಡಾ 25 ರಷ್ಟು ಕಡಿಮೆ ಮಾಡಲು ಮುಂದಾಗಿದೆ.


ಅದೇ ಸಮಯದಲ್ಲಿ, BHIM UPI ಸಹಾಯದಿಂದ ಪಾವತಿಸುವವರಿಗೆ ಎಸಿ ರಹಿತ ಕೋಚ್ ಗೆ 10 ರೂಪಾಯಿ ಮತ್ತು ಎಸಿ ವರ್ಗಕ್ಕೆ 20 ರೂಪಾಯಿ ಸೇವಾ ಶುಲ್ಕ ಇರಲಿದೆ. ಆದಾಗ್ಯೂ, ಈ ನಿಯಮವು 1 ನವೆಂಬರ್ 2019 ರಿಂದ ಜಾರಿಗೆ ಬರುತ್ತಿದೆ. ಈ ಮೊದಲು, ಐಆರ್‌ಸಿಟಿಸಿ ಸೇವಾ ಶುಲ್ಕವಾಗಿ ವಿಧಿಸುತ್ತಿತ್ತು. ಆದರೆ, 8 ನವೆಂಬರ್ 2016 ರಂದು ಮೋದಿ ಸರ್ಕಾರ ನೋಟು ರದ್ಧತಿ ಘೋಷಿಸಿತು. ಅದರ ನಂತರ ಡಿಜಿಟಲ್ ವಹಿವಾಟನ್ನು ಉತ್ತೇಜಿಸುವ ಉದ್ದೇಶದಿಂದ ಆನ್‌ಲೈನ್ ಟಿಕೆಟ್‌ನಲ್ಲಿನ ಸೇವಾ ಶುಲ್ಕವನ್ನು ಹಿಂಪಡೆಯಲಾಯಿತು. ಆದರೆ ಇದೀಗ ಈ ನಿಯಮವನ್ನು ಈಗ ಮತ್ತೆ ಜಾರಿಗೆ ತರಲಾಗಿದೆ.


ರೈಲ್ವೆ ಇಲಾಖೆಯ ಅಧಿಕಾರಿಗಳ ಪ್ರಕಾರ, ರೈಲ್ವೆ ಟಿಕೆಟ್ ಬುಕಿಂಗ್‌ನಲ್ಲಿ ಆನ್‌ಲೈನ್ ಟಿಕೆಟ್‌ನ ಪಾಲು 55-60ರಷ್ಟಿದೆ. ಅಂತಹ ಪರಿಸ್ಥಿತಿಯಲ್ಲಿ ಸೇವಾ ಶುಲ್ಕದಿಂದ ರೈಲ್ವೆಯ ಆದಾಯ ಹೆಚ್ಚಾಗುತ್ತದೆ. ಪ್ರಸ್ತುತ, ಆನ್‌ಲೈನ್ ನಲ್ಲಿ ಪ್ರತಿದಿನ 11-12 ಲಕ್ಷ ಟಿಕೆಟ್ ಕಾಯ್ದಿರಿಸಲಾಗುತ್ತಿದೆ.