ನವದೆಹಲಿ: ಲಡಾಖ್ ಗಡಿ ವಿವಾದದ ಬಳಿಕ ಭಾರತ (India)ದಲ್ಲಿ ಚೀನಾ (China) ಸರಕುಗಳನ್ನು ಬಹಿಷ್ಕರಿಸಲಾಗುತ್ತಿದೆ, ಜನರು ಚೀನಾದ ವಸ್ತುಗಳನ್ನು ಖರೀದಿಸುವುದನ್ನು ನಿಲ್ಲಿಸುತ್ತಿದ್ದಾರೆ. ಆದರೆ ಚೀನಾಗೆ ಯಾಕೋ ಗೊತ್ತಿಲ್ಲ ಭಾರತದ ವಿಷಯಗಳೇ ಇಷ್ಟವಾಗುತ್ತಿವೆ. ಚೀನಾದ ಸೆಂಟ್ರಲ್ ಬ್ಯಾಂಕ್ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಭಾರತದ ಖಾಸಗಿ ವಲಯದ ದೈತ್ಯ ಐಸಿಐಸಿಐ ಬ್ಯಾಂಕಿ(ICICI Bank)ನಲ್ಲಿ ಹೂಡಿಕೆ ಮಾಡಿರುವ ಕುರಿತು ವರದಿಯಾಗಿದೆ. ಚೀನಾದ ಈ ಸೆಂಟ್ರಲ್ ಬ್ಯಾಂಕ್ ಭಾರತದ ಯಾವುದೇ ಬ್ಯಾಂಕಿನಲ್ಲಿ ಪಾಲನ್ನು ಖರೀದಿಸುತ್ತಿರುವುದು ಇದೇ ಮೊದಲಲ್ಲ. ಈ  ಬ್ಯಾಂಕ್ ಮಾರ್ಚ್‌ನಲ್ಲಿ ಎಚ್‌ಡಿಎಫ್‌ಸಿ ಲಿಮಿಟೆಡ್‌ನಲ್ಲಿ ಹೂಡಿಕೆ ಮಾಡಿ ತನ್ನ ಪಾಲನ್ನು 1% ಕ್ಕೆಹೆಚ್ಚಿಸಿತ್ತು ಮತ್ತು ಇದು ಸಾಕಷ್ಟು ಕೋಲಾಹಲಕ್ಕೆ ಕೂಡ  ಕಾರಣವಾಗಿತ್ತು. ಇದಾದ ಬಳಿಕ ಭಾರತ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಯಾವದೇ ಗಡಿಯಾಚೆಗಿನ ಹೂಡಿಕೆದಾರರು ಭಾರತೀಯ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮೊದಲು ಭಾರತ ಸರ್ಕಾರದ ಅನುಮೋದನೆ ಪಡೆಯಬೇಕು.


COMMERCIAL BREAK
SCROLL TO CONTINUE READING

ICICI ಬ್ಯಾಂಕ್ ನಲ್ಲಿ ಪಾಲು ಖರೀದಿಸಿದ ಚೀನಾ ಬ್ಯಾಂಕ್
ಇತ್ತೀಚೆಗೆ, ಐಸಿಐಸಿಐ ಬ್ಯಾಂಕ್ ಕ್ವಾಲಿಫೈಡ್ ಇನ್ಸ್ಟಿಟ್ಯೂಶನಲ್ ಪ್ಲೇಸ್ಮೆಂಟ್ (QIP) ಮೂಲಕ 15,000 ಕೋಟಿ ರೂ. ಸಂಗ್ರಹಣ ಮಾಡಿತ್ತು. ಇದರಲ್ಲಿ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ, ಮ್ಯೂಚುಯಲ್ ಫಂಡ್ ಮತ್ತು ವಿಮಾ ಕಂಪನಿಗಳು ಸೇರಿದಂತೆ ಒಟ್ಟು 357 ಸಾಂಸ್ಥಿಕ ಹೂಡಿಕೆದಾರರು ಭಾಗವಹಿಸಿದ್ದರು. ಈ ಕ್ಯೂಐಪಿಯಲ್ಲಿ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ 15 ಕೋಟಿ ರೂ. ಹೂಡಿಕೆ ಮಾಡಿತ್ತು. ವರದಿಯೊಂದರ ಪ್ರಕಾರ, ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಐಸಿಐಸಿಐ ಬ್ಯಾಂಕಿನಲ್ಲಿ 0.0006% ಪಾಲನ್ನು ಹೊಂದಿದೆ ಎನ್ನಲಾಗಿದೆ. ಇದು ತುಂಬಾ ಕಡಿಮೆ ಆದರೂ. ಹೊಸ ನಿಯಮಗಳಿಂದಾಗಿ ಈ ಭಾಗವನ್ನು ಇನ್ನು ಮುಂದೆ ಹೆಚ್ಚಿಸಲಾಗುವುದಿಲ್ಲ. ಅಂದರೆ, ಚೀನಾದ ಕಂಪನಿಗಳು ಭಾರತೀಯ ಕಂಪನಿಗಳಲ್ಲಿ ಹೂಡಿಕೆ ಮಾಡಬೇಕಾದರೆ, ಅವರು ಕೇವಲ ಷೇರು ಮಾರುಕಟ್ಟೆಯ ಮೂಲಕ ಹೋಗಬೇಕಾಗುತ್ತದೆ, ಇಲ್ಲದಿದ್ದರೆ ಮೊದಲು ಭಾರತ ಸರ್ಕಾರದ ಅನುಮೋದನೆಯನ್ನು ಪಡೆದುಕೊಳ್ಳಬೇಕು.


ಚೀನಾ ಹೂಡಿಕೆಗಳ ಮೇಲೆ ಕಠಿಣತೆ ಹೆಚ್ಚಿಸಿದ ಭಾರತ
ಲಡಾಖ್ ಗಡಿಯಲ್ಲಿನ ವಿವಾದಕ್ಕೆ ಮುಂಚೆಯೇ, ಭಾರತ ಸರ್ಕಾರವು ಚೀನಾ ಕಂಪನಿಗಳ ಹೂಡಿಕೆಯ ಮೇಲೆ ಕ್ರಮ ಕೈಗೊಳ್ಳಲು ಪ್ರಾರಂಭಿಸಿದೇ. ನಮ್ಮ ಪಾಲುದಾರ ವೆಬ್‌ಸೈಟ್ wion.com ಜೊತೆಗಿನ ಸಂವಾದದಲ್ಲಿ, ಮಾತನಾಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಲವಂತದ ಸ್ವಾಧೀನ (hostile takeovers) ಪ್ರಕ್ರಿಯೇಗಳಿಗೆ  ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ರೂಪಿಸುವುದಾಗಿ ಭರವಸೆ ನೀಡಿದ್ದರು.


ಭಾರತೀಯ ಆರ್ಥಿಕ ವ್ಯವಸ್ಥೆಯಲ್ಲಿ ಚೀನಾ ಪ್ರವೇಶವನ್ನು ತಡೆಯಲು ಭಾರತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಉದಾಹರಣೆಗೆ ಚೀನೀ ಕಂಪನಿಗಳಿಗೆ ಸರ್ಕಾರಿ ಖರೀದಿ ಯೋಜನೆಗಳಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸಲಾಗಿದೆ. ಇ-ಮಾರ್ಕೆಟ್‌ಪ್ಲೇಸ್ ಪೋರ್ಟಲ್‌ಗಳಲ್ಲಿ ಉತ್ಪನ್ನವನ್ನು ಎಲ್ಲಿ ತಯಾರಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡುವುದು ಸರ್ಕಾರ ಕಡ್ಡಾಯಗೊಳಿಸಿದೆ. ಅಲ್ಲದೆ, ಚೀನಾದಿಂದ ಬರುವ ಕಲರ್  ಟಿವಿಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ, ಇದರಿಂದಾಗಿ ದೇಶೀಯ ಉತ್ಪಾದಕರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. ಭಾರತವು ಈಗ ಆಗ್ನೇಯ ಏಷ್ಯಾದಿಂದ ಚೀನಾದ ಸರಕುಗಳನ್ನು ನಿಷೇಧಿಸಲು ಸಿದ್ಧತೆ ನಡೆಸುತ್ತಿದೆ.