ನವದೆಹಲಿ: ರೈಲ್ವೆ ಟ್ರ್ಯಾಕ್ ನಲ್ಲಿ ಕಾರ್ಯ ನಿರ್ವಹಿಸುವ ಟ್ರಾಕ್ ಮೆನ್ ಗಳಿಗೆ ಬೂಟುಗಳು, ಕೈಗವಸುಗಳು, ಮಳೆ ಕೋಟುಗಳು, ಚಳಿಗಾಲದ ಜಾಕೆಟ್ ಗಳನ್ನು ಒಳಗೊಂಡಿರುವ  ಕಿಟ್ ಜೊತೆಗೆ 'ರಕ್ಷಕ್' ವಾಕಿ ಟಾಕಿ ಸಾಧನವನ್ನು ಒದಗಿಸುವತ್ತ ರೈಲ್ವೆ ಹೆಜ್ಜೆ ಇಟ್ಟಿದೆ. 


COMMERCIAL BREAK
SCROLL TO CONTINUE READING

ಈಗಾಗಲೇ  ರೈಲ್ವೆ ಬೋರ್ಡ್, ಕಳೆದ ವಾರ 'ರಕ್ಷಕ್' ಯೋಜನೆಗೆ ತನ್ನ ಅನುಮೋದನೆಯನ್ನು ನೀಡಿದ್ದು - ಈ ಯೋಜನೆಯನ್ನು ಪ್ರಾಯೋಗಿಕವಾಗಿ ಹೆಚ್ಚಿನ ಸಾಂದ್ರತೆ ಇರುವ ಪ್ರದೇಶದಲ್ಲಿ ಟ್ರಾಕ್ ಮ್ಯಾನ್ ಗಳಿಗೆ ಬಳಸಲು ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಸಾಧನವು ಎಲ್ಇಡಿ ಸೂಚನೆಯ ಮೂಲಕ ಎಚ್ಚರಿಕೆಯನ್ನು ನಿಡುವುದಲ್ಲದೆ, ಸಮೀಪಿಸುತ್ತಿರುವ ರೈಲುಗಳ ಬಝರ್ ಮತ್ತು ಕಂಪನಗಳೊಂದಿಗೆ ಟ್ರಾಕ್ ಮ್ಯಾನ್ ಗಳನ್ನು ದೂರವಿರಲು ಸಹಾಯ ಮಾಡುತ್ತದೆ.


ಟ್ರ್ಯಾಕ್ ಮ್ಯಾನ್ ಗಳ  ಕರ್ತವ್ಯದ ಸಮಯದಲ್ಲಿ ಉಂಟಾದ ಅಪಘಾತಗಳ ಸಂಖ್ಯೆಯ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ರಕ್ಷಕ್' ನ ವಾಕಿ- ಟಾಕಿಗೆ ಚಾಲನೆ ನೀಡಲಾಗುತ್ತಿದೆ.ಎಂದು ರೇಲ್ವೆ ಮಂಡಳಿ ತಿಳಿಸಿದೆ.