ನವದೆಹಲಿ: ಲಾಕ್ ಡೌನ್ ಹಿನ್ನೆಲೆ ದೇಶಾದ್ಯಂತ ಎಲ್ಲ ಶಾಲಾ -ಕಾಲೇಜುಗಳು ಸದ್ಯ ಬಂದ್ ಆಗಿವೆ. ಎಲ್ಲ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಲ್ಲೇ ಇದ್ದುಕೊಂಡು ಆನ್ಲೈನ್ ಶಿಕ್ಷಣ ನಡೆಸುತ್ತಿದ್ದಾರೆ. ಆನ್ಲೈನ್ ಶಿಕ್ಷಣ ಪಡೆಯಲು ಸ್ಮಾರ್ಟ್ ಫೋನ್ ಅಥವಾ ಇಂಟರ್ನೆಟ್ ಇರುವುದು ಅವಶ್ಯಕವಾಗಿದೆ. ಆದರೆ ಇಂದೂ ಕೂಡ ದೇಶಾದ್ಯಂತ ಹಲವು ಕ್ಷೇತ್ರಗಳಿದ್ದು, ಅಲ್ಲಿ ಇಂಟರ್ನೆಟ್ ಸೌಲಭ್ಯ ಸರಿಯಾಗಿಲ್ಲ ಅಥವಾ ಹಲವಾರು ವಿಧ್ಯಾರ್ಥಿಗಳ ಬಳಿ ಸ್ಮಾರ್ಟ್ ಫೋನ್ ಗಳಿಲ್ಲ.


COMMERCIAL BREAK
SCROLL TO CONTINUE READING

ಈ ಸಮಸ್ಯೆಯನ್ನು ಮನಗಂಡ ಸರ್ಕಾರ ದೂರದ ಪ್ರದೇಶಗಳಲ್ಲಿ ವಾಸಿಸುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೊಸ ದಾರಿಯೊಂದನ್ನು ಹುಡುಕಿದೆ.


ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ ಪೋಖರಿಯಾಲ್ ನಿಶಂಕ್, ಲಾಕ್ ಡೌನ್ ಅವಧಿಯಲ್ಲಿ ವಿದ್ಯಾರ್ಥಿಗಳ ವರೆಗೆ ಶಾಲಾ ಶಿಕ್ಷಣವನ್ನು ತಲುಪಿಸಲು, DTH ಸೇವೆ ಒದಗಿಸುವ ಪ್ಲಾಟ್ಫಾರ್ಮ್ ಗಳಾಗಿರುವ ಟಾಟಾ ಸ್ಕೈ, ಏರ್ಟೆಲ್ ಇತ್ಯಾದಿಗಳು 'ಸ್ವಯಂ ಪ್ರಭ'  ಚಾನೆಲ್ ಅನ್ನು ಪ್ರಸಾರಿತಗೊಳಿಸಲು ಒಪ್ಪಂದವೊಂದಕ್ಕೆ ಸಹಿ ಹಾಕಿವೆ.


ಭಾರತದದ ಯಾವುದೇ ಮೂಲೆಯಲ್ಲಿಯೂ ಕೂಡ ಯಾವುದೇ ವಿಧ್ಯಾರ್ಥಿ ತಮ್ಮ DTH ಆಪರೇಟರ್ ಗೆ ಕಾಲ್ ಮಾಡಿ ಈ ಚಾನೆಲ್ ಗಾಗಿ ಬೇಡಿಕೆ ಸಲ್ಲಿಸಬಹುದು. ಇಲ್ಲಿ ವಿಶೇಷ ಎಂದರೆ ಈ ಚಾನೆಲ್ ಗಳಿಗಾಗಿ ಯಾವುದೇ ಪ್ರತ್ಯೇಕ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.


ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಸಚಿವರು, "'ಸ್ವಯಂ ಪ್ರಭ' 32 DTH ಚಾನೆಲ್ ಗಳನ್ನು ಒಳಗೊಂಡ ಒಂದು ಗ್ರೂಪ್ ಆಗಿದ್ದು, ಇದು ಎಲ್ಲಾ ಶಿಕ್ಷಕರಿಗೆ ಎಲ್ಲಾ ವಿಷಯಗಳನ್ನು ಕವರ್ ಮಾಡಲು ಸಿಲೆಬಸ್ ಒದಗಿಸುತ್ತದೆ. ಈ ಸಿಲೆಬಸ್ ಬಾಳಲ್ಲಿ ಕಲಾ, ವಾಣಿಜ್ಯ, ವಿಜ್ಞಾನ, ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ವೈದ್ಯಕೀಯ, ಕೃಷಿ ಇತ್ಯಾದಿ ಸಿಲೆಬಸ್ ಗಳು ಈ ಸೇವೆಯಲ್ಲಿ ಶಾಮೀಲಾಗಿವೆ.


ಇನ್ನೊಂದೆಡೆ 'ಸ್ವಯಂ ಪ್ರಭ' ಸಿಲೆಬಸ್ ಗಳನ್ನು ವಿದ್ಯಾರ್ಥಿಗಳ ವರೆಗೆ ತಲುಪಿಸುವ ಸಲುವಾಗಿ ಆಲ್ ಇಂಡಿಯಾ ರೇಡಿಯೋ ಬಳಕೆಯ ಪ್ರಯತ್ನಗಳನ್ನು ಕೂಡ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ. ಅಷ್ಟೇ ಅಲ್ಲ ಆನ್ಲೈನ್ ಶಿಕ್ಷಣ ಪದ್ಧತಿಗೆ ಹೆಚ್ಚಿನ ಒತ್ತು ನೀಡಲು ತಮ್ಮ ಸಚಿವಾಲಯ 'भारत पढ़े ऑनलाइन' ಎಂಬ ಅಭಿಯಾನವನ್ನು ಕೂಡ ಆರಂಭಿಸಿದೆ ಎಂದು ಹೇಳಿದ್ದಾರೆ.