ಶೀಘ್ರವೇ ಪದೇ-ಪದೇ ನಿಮ್ಮ Aadhaar Card ಫೋಟೋಕಾಪಿ ಮಾಡಿಸುವುದರಿಂದ ಸಿಗಲಿದೆ ನೆಮ್ಮದಿ
ಒಂದು ವೇಳೆ ನೀವೂ ಕೂಡ ಪದೇ ಪದೇ ನಿಮ್ಮ ಆಧಾರ್ ಕಾರ್ಡ್ ನ ಝೆರಾಕ್ಸ್ ಕಾಪಿ ತೆಗೆದು ಕಿರಿಕಿರಿಗೊಂಡಿದ್ದರೆ, ಈ ಸುದ್ದಿ ನಿಮಗೆ ಕೊಂಚ ನೆಮ್ಮದಿ ನೀಡಲಿದೆ. ಕಾರಣ ಇನ್ಮುಂದೆ ನೀವು ನಿಮ್ಮ ಆಧಾರ್ ಕಾರ್ಡ್ ನ ಹಾರ್ಡ್ ಕಾಪಿ ಪಡೆಯುವ ಕೆಲಸ ತಪ್ಪಲಿದೆ.
ನವದೆಹಲಿ:ಒಂದು ವೇಳೆ ನೀವೂ ಕೂಡ ಪದೇ ಪದೇ ನಿಮ್ಮ ಆಧಾರ್ ಕಾರ್ಡ್ ನ ಝೆರಾಕ್ಸ್ ಕಾಪಿ ತೆಗೆದು ಕಿರಿಕಿರಿಗೊಂಡಿದ್ದರೆ, ಈ ಸುದ್ದಿ ನಿಮಗೆ ಕೊಂಚ ನೆಮ್ಮದಿ ನೀಡಲಿದೆ. ಕಾರಣ ಇನ್ಮುಂದೆ ನೀವು ನಿಮ್ಮ ಆಧಾರ್ ಕಾರ್ಡ್ ನ ಹಾರ್ಡ್ ಕಾಪಿ ಪಡೆಯುವ ಕೆಲಸ ತಪ್ಪಲಿದೆ. ಆದರೆ, ಈ ಸೌಲಭ್ಯ ಸದ್ಯ ನಿಮಗೆ ಕೆಲವೇ ಸ್ಥಳಗಳಲ್ಲಿ ಸಿಗಲಿದೆ. ಹೌದು, ಇನ್ಸೂರೆನ್ಸ್, ರಕ್ಷಣಾ ಏಜೆನ್ಸಿ ಹಾಗೂ ಸ್ಟಾಕ್ ಮಾರ್ಕೆಟ್ KYCಗಳಿಗೆ ನೀವು ನಿಮ್ಮ ಆಧಾರ್ ಕಾರ್ಡ್ ನ ಭೌತಿಕ ಕಾಪಿ ಲಗತ್ತಿಸುವ ಅವಶ್ಯಕತೆ ಇಲ್ಲ.
ಕೇವಲ ಆಧಾರ್ ಸಂಖ್ಯೆ ನೀಡಿದರೆ ಸಾಕು
ಇನ್ಮುಂದೆ ಈ ಎಲ್ಲ ಸ್ಥಳಗಳಲ್ಲಿ KYC ಮಾಡಿಸಲು ನೀವು ಆಧಾರ್ ಆಥೆಂಟಿಕೆಶನ್ ಸೇವೆ ಬಳಸುವುದು ಅನಿವಾರ್ಯವಾಗಲಿದೆ. ಅಂದರೆ, ಅಲ್ಲಿ ನೀವು ಕೇವಲ ನಿಮ್ಮ ಆಧಾರ್ ಕಾರ್ಡ್ ನಂಬರ್ ನೀಡಿದರೆ ಮಾತ್ರ ಸಾಕು. ಮುಂದಿನ ತನಿಖೆಯನ್ನು ಕಂಪನಿಗಳ ವತಿಯಿಂದ ನಡೆಯಲಿದೆ. ಕಂಪನಿಗಳ ಈ ತನಿಖೆಗೆ UIDAI ಸಹಕಾರ ನೀಡಲಿದೆ.
ಹಣಕಾಸು ಸಚಿವಾಲಯ ನೀಡಿದೆ ಈ ಅನುಮತಿ
ಪಿವೆನ್ಶನ್ ಆಫ್ ಮನಿ ಲ್ಯಾಂಡ್ರಿಂಗ್ ಆಕ್ಟ್ ಅಡಿ ಕೇಂದ್ರ ಹಣಕಾಸು ಸಚಿವಾಲಯ ಈ ಅನುಮತಿ ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ಹಣಕಾಸು ಇಲಾಖೆಯ ಕಾರ್ಯದರ್ಶಿ ಅಜಯ್ ಭೂಶನ್ ಪಾಂಡೆ, ಮೇಲೆ ನಮೂದಿಸಲಾಗಿರುವ ಸಂಸ್ಥೆಗಳಿಗೆ ಆಧಾರ್ ಆಥೆಂಟಿಕೆಶನ್ ಸೇವೆ ಬಳಸಲು ಈಗಾಗಲೇ ಎರಡು ನೋಟಿಫಿಕೆಶನ್ ಗಳನ್ನು ಜಾರಿಗೊಳಿಸಲಾಗಿದ್ದು, ಆಧಾರ್ ಕಾಯ್ದೆಯ ಅಡಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ
ಈ ಕುರಿತು ಹೇಳಿದೆ ನೀಡಿರುವ ಸರ್ಕಾರ, ಈ ನಿರ್ಣಯದ ಬಳಿಕ ಗ್ರಾಹಕರ ವೈಯಕ್ತಿಕ ಮಾಹಿತಿಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ ಈ ಕೆಲಸವನ್ನು ರಿಯಲ್ ಟೈಮ್ ನಲ್ಲಿ ನಡೆಸಲೂ ಕೂಡ ಯೋಜನೆ ರೂಪಿಸಲಾಗಿದೆ. ಇದರಿಂದ ಇದೀಗ ಸಣ್ಣ ಗ್ರಾಹಕರು ಅತಿ ಸುಲಭಾವಾಗಿ ತಮ್ಮ ಆಧಾರ್ ವೆರಿಫಿಕೆಶನ್ ಮಾಡಿಸಬಹುದಾಗಿದೆ.
ಯಾವ ಸಂಸ್ಥೆಗಳಲ್ಲಿ ನಿಮ್ಮ ಆಧಾರ್ ಝೆರಾಕ್ಸ್ ಕಾಪಿ ಅಥವಾ ಭೌತಿಕ ಕಾಪಿ ನೀಡುವ ಅವಶ್ಯಕತೆ ಇಲ್ಲ
- Bombay Stock Exchange Limited
- National Securities Depository Limited
- Central Depository Services (India) Limited
- CDSL Ventures Limited
- NSDL Database Management Limited
- NSE Data and Analytics Limited
- CAMS Investor Services Private Limited
- Computer Age Management Services Private Limited
- Link Intime India Pvt. Ltd.
- Bajaj Allianz Life Insurance Company Limited
- Bharti AXA Life Insurance Company Limited
- Exide Life Insurance Company Limited
- HDFC Life Insurance Company Limited
- ICICI Prudential Life Insurance Company Limited
- India First Life Insurance Company Limited
- Max Life Insurance Company Limited
- PNB Metlife India Insurance Company Limited
- SBI Life Insurance Company Limited
- Future Generali India Life Insurance Company Limited
- Reliance Nippon Life Insurance Company Limited
- Aegon Life Insurance Company Limited
- Shriram Life Insurance Company Limited
- Aditya Birla Sun Life Insurance Company Limited
- Pramerica Life Insurance Limited
- Kotak Mahindra Life Insurance Company Limited
- Star Union Dai-ichi Life Insurance Company Limited
- IDBI Federal Life Insurance Company Limited
- Edelweiss Tokio Life Insurance Company Limited
- Canara HSBC Oriental Bank of Commerce Life Insurance Company Limited
- Kotak Mahindra General Insurance Company Limited
- Future General India Insurance Company Limited
- Acko General Insurance Limited
- Royal Sundaram General Insurance Company Limited
- SBI General Insurance Company Limited
- HDFC Ergo General Insurance Company Limited
- Apollo Munich Health Insurance Company Limited
- Manipal Cigna Health Insurance Company Limited
- Religare Health Insurance Company Limited