ಗೂಗಲ್ ಮ್ಯಾಪ್ ಇನ್ಮುಂದೆ ನೀವು ರಸ್ತೆಯ ಮೂಲಕ ಹಾದುಹೋಗುವಾಗ ರಸ್ತೆಯಲ್ಲಿ ಬರುವ ರೆಸ್ಟೋರೆಂಟ್‌ಗಳ ಬಗ್ಗೆ ಮಾಹಿತಿ ನೀಡುವುದಲ್ಲದೆ, ಹೋಟೆಲ್ ಮೆನುವಿನಲ್ಲಿ ಸಸ್ಯಾಹಾರಿ, ಮಾಂಸಾಹಾರಿ, ಜೈನ್, ವೆಗಾನ್ ಹಾಗೂ ಕಾಂಟಿನೆಂಟಲ್ ಇತ್ಯಾದಿ ಮೆನ್ಯುಗಳಲ್ಲಿ ಯಾವ ಯಾವ ಆಯ್ಕೆಗಳಿವೆ ಎಂಬುದನ್ನು ಸಹ ತಿಳಿಸಲಿದೆ. ನೀವು ಆರಿಸಿರುವ ರೆಸ್ಟೋರೆಂಟ್ ನಲ್ಲಿ ಜನಸಂದಣಿ ಎಷ್ಟಿದೆ ಅಥವಾ ನಿಮಗೆ ಟೇಬಲ್ ಸಿಗಲಿದೆಯೇ ಎಂಬ ಮಾಹಿತಿಯನ್ನೂ ಸಹ ಗೂಗಲ್ ಮ್ಯಾಪ್ ನಿಮಗೆ ತಿಳಿಸಲಿದೆ. ಈ ಮಾಹಿತಿ ಗಳ ಜೊತೆಗೆ ಮುಂದಿನ ಮೆಟ್ರೋ, ಬಸ್ ಅಥವಾ ಸ್ಥಳೀಯ ರೈಲಿನಲ್ಲಿ ಮ್ಯಾಪ್ ಬಳಕೆದಾರರಿಗೆ ಆಸನ ಸಿಗಲಿದೆಯೇ ಅಥವಾ ಇಲ್ಲ ಎಂಬುದನ್ನೂ ಸಹ ನಿಮಗೆ ತಿಳಿಸಲಿದೆ. ಅಷ್ಟೇ ಅಲ್ಲ ಸಂಸ್ಥೆ ಲೈವ್ ವ್ಯೂ ವೈಶಿಷ್ಟ್ಯವನ್ನೂ ಕೂಡ ಪರಿಚಯಿಸಿದೆ. ಆದರೆ, ಕೇವಲ ಸ್ಟ್ರೀಟ್ ವ್ಯೂ ಇರುವ ದೇಶಗಳಲ್ಲಿ ಮಾತ್ರ ಈ ಆಯ್ಕೆ ಲಭ್ಯವಿದೆ. ಈ ಆಯ್ಕೆಯನ್ನು ಇನ್ನೂ ಭಾರತದಲ್ಲಿ ಪರಿಚಯಿಸಲಾಗಿಲ್ಲ.


COMMERCIAL BREAK
SCROLL TO CONTINUE READING

ಫೆ.8ಕ್ಕೆ ಗೂಗಲ್ ಮ್ಯಾಪ್ 15ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ
ಫೆಬ್ರುವರಿ 8ನೇ ತಾರೀಖಿಗೆ ಗೂಗಲ್ ಮ್ಯಾಪ್ ತನ್ನ 15ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದೆ. ಇದಕ್ಕೂ ಮೊದಲು ಗುರುವಾರ ಮಾತನಾಡಿರುವ ಗೂಗಲ್ ಮ್ಯಾಪ್ ನ ಹಿರಿಯ ಉಪಾಧ್ಯಕ್ಷ ಜೇನ್ ಫ್ರಿಡ್ಜ್ ಪ್ಯಾಟ್ರಿಕ್, ವಿಶ್ವಾದ್ಯಂತ ನಿತ್ಯ ಗೂಗಲ್ ಮ್ಯಾಪ್ ಬಳಸಿ ಜನರು ಸರಾಸರಿ 100 ಕೋಟಿ ಕಿಲೋಮೀಟರ್ ಪ್ರವಾಸ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು. ಕಳೆದ ವರ್ಷವಷ್ಟೇ ಗೂಗಲ್ ಮ್ಯಾಪ್ ಬಸ್, ಮೆಟ್ರೋ ಟ್ರೈನ್, ಲೋಕಲ್ ಟ್ರೈನ್ ನಲ್ಲಿ ಜನಸಂದಣಿಯ ಸಾಧ್ಯತೆ ವರ್ತಿಸುವ ವೈಶಿಷ್ಟ್ಯ ಪರಿಚಯಿಸಿದ್ದು, ಇದೂ ಕೂಡ ಯಶಸ್ವಿಯಾಗಿದೆ. ಇನ್ಮುಂದೆ ಮಹಿಳೆಯರಿಗಾಗಿ ಕೋಚ್ ಇದೆಯಾ ಅಥವಾ ಇಲ್ಲ, ಬಸ್ ಕೋಚ್ ಗಳಲ್ಲಿ ಗಾರ್ಡ್, ಮಾರ್ಗದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆಯಾ ಅಥವಾ ಇಲ್ಲ ಇತ್ಯಾದಿ ಮಾಹಿತಿಗಳನ್ನೂ ಸಹ ಗೂಗಲ್ ಮ್ಯಾಪ್ ಇನ್ಮುಂದೆ ನಿಮಗೆ ಮಾಹಿತಿ ನೀಡಲಿದೆ.


ಇನ್ಮುಂದೆ ಗೂಗಲ್ ಮ್ಯಾಪ್ ನಲ್ಲಿ 3ರ ಬದಲಿಗೆ 5 ಟ್ಯಾಬ್ ಗಳಿರಲಿವೆ
ಈ ಕುರಿತು ಮಾಹಿತಿ ನೀಡಿರುವ ಸಂಸ್ಥೆಯ ಮತ್ತೋರ್ವ ಉಪಾಧ್ಯಕ್ಷ ಡೆನ್ ಗ್ಲಾಸ್ಗೋ, ವಿಶ್ವದ ಸುಮಾರು 220 ದೇಶಗಳಲ್ಲಿನ ಜನರು ಗೂಗಲ್ ಮ್ಯಾಪ್ ಬಳಸುತ್ತಿದ್ದಾರೆ ಎಂಬ ಮಾಹಿತಿ ನೀಡಿದ್ದರು. ಈ ಆಪ್ 14 ವೈಶಿಷ್ಟ್ಯಗಳು ಭಾರತದಲ್ಲಿ ಮೊದಲು ಬಿಡುಗಡೆಗೊಳಿಸಲಾಗಿದೆ ಅಥವಾ ಭಾರತದ ಬಳಿಕ ಇತರೆ ದೇಶಗಳಲ್ಲಿ ನಂತರ ಪರಿಚಯಿಸಲಾಗಿದೆ. ಗೂಗಲ್ ಮ್ಯಾಪ್ ನ ಅಡಿ ಭಾಗದಲ್ಲಿ ಇಂದಿನಿಂದ ಸೇವ್ದ್, ಕಾಂಟ್ರಿಬ್ಯೂಟ್ ಹಾಗೂ ಅಪ್ಡೇಟ್ ಟ್ಯಾಬ್ ಗಳೂ ಕೂಡ ಇರಲಿವೆ. ಎಕ್ಸ್ಪ್ಲೋರ್ ಹಾಗೂ ಕಮ್ಯೂಟ್ ಟ್ಯಾಬ್ ಗಳು ಮೊದಲೇ ಪರಿಚಯಿಸಲಾಗಿದೆ. ಸೇವ್ದ್ ಟ್ಯಾಬ್ ನಲ್ಲಿ ನಿಮ್ಮ ಯಾತ್ರೆಯ ಮಾಹಿತಿ ಇರಲಿದೆ. ಕಾಂಟ್ರಿಬ್ಯೂಟ್ ಟ್ಯಾಬ್ ಬಳಸಿ ಬಳಕೆದಾರರು ತಾವು ಭೇಟಿ ನೀಡಿರುವ ಸ್ಥಳದ ಫೋಟೋ ಮತ್ತು ಮಾಹಿತಿ ಜೋಡಿಸಬಹುದಾಗಿದೆ. ಅಪ್ಡೇಟ್ ನಲ್ಲಿ ರಿವ್ಯೂ ಹಾಗೂ ಕಂಟೆಂಟ್ ಇರಲಿದೆ. ಮೊದಲಿಗಿಂತಲೂ ಈಗ ಬಳಕೆದಾರರು ಕ್ಲಿಷ್ಟಕರ ಪ್ರಶ್ನೆಗಳನ್ನು ಕೇಳುತ್ತಿದ್ದು, ಅವರಿಗಾಗಿ ರಿವ್ಯೂ ಹಾಗೂ ಕಂಟೆಂಟ್ ಟ್ಯಾಬ್ ನೀಡುವುದು ಅನಿವಾರ್ಯವಾಗಿತ್ತು ಎಂದು ಗೂಗಲ್ ಹೇಳಿಕೊಂಡಿದೆ.