ನವದೆಹಲಿ: ದೇಶದಲ್ಲಿ ಕಾರು ಅಥವಾ ಬೈಕು ಚಾಲನೆ ಮಾಡುವಾಗ, ಹೆಚ್ಚಿನ ಜನರು ನಕಲಿ ದಾಖಲೆಗಳನ್ನು ತೋರಿಸುವುದರ ಮೂಲಕ ಟ್ರಾಫಿಕ್ ಪೊಲೀಸರನ್ನು ತಪ್ಪಿಸಬಹುದು ಎಂದು ತಿಳಿದಿದ್ದಾರೆ. ಸ್ವಲ್ಪ ಮಟ್ಟಿಗೆ ಇದು ನಿಜ ಕೂಡ ಹೌದು. ಏಕೆಂದರೆ ಹೆಚ್ಚಿನ ರಾಜ್ಯಗಳಲ್ಲಿ ಟ್ರಾಫಿಕ್ ಪೊಲೀಸರಿಗೆ ದಾಖಲೆಗಳನ್ನು ತಕ್ಷಣ ಪರಿಶೀಲಿಸುವ ಸೌಲಭ್ಯವಿಲ್ಲ. ಆದರೆ ಇನ್ಮುಂದೆ ಹಾಗೆ ಆಗುವುದಿಲ್ಲ. ಇನ್ಮುಂದೆ ಟ್ರಾಫಿಕ್ ಪೋಲೀಸರ ಬಳಿ ನಿಮ್ಮ ದಾಖಲೆಗಳು ಮೊದಲಿನಿಂದಲೇ ಇರಲಿವೆ.


COMMERCIAL BREAK
SCROLL TO CONTINUE READING

ಇನ್ಮುಂದೆ ಪೊಲೀಸರಿಗೆ ಚಕ್ಮಾ ನೀಡಲು ಸಾಧ್ಯವಿಲ್ಲ
ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ 1989 ಕ್ಕೆ ತಿದ್ದುಪಡಿ ಮಾಡಿದೆ. ಚಾಲನಾ ಪರವಾನಗಿ ಮತ್ತು ಇ-ಚಲನ್ ಸೇರಿದಂತೆ ವಾಹನ ದಾಖಲೆಗಳನ್ನು 2020 ರ ಅಕ್ಟೋಬರ್ 1 ರಿಂದ ಮಾಹಿತಿ ತಂತ್ರಜ್ಞಾನ ಪೋರ್ಟಲ್ ಮೂಲಕ ನಿರ್ವಹಿಸಲಾಗುವುದು ಎಂದು ಸರ್ಕಾರ ಶನಿವಾರ ತಿಳಿಸಿದೆ. ವಾಹನ ದಾಖಲೆಗಳ ಪರಿಶೀಲನೆಯ ಸಮಯದಲ್ಲಿ, ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಮಾನ್ಯವಾಗಿರುವ ವಾಹನಗಳ ದಾಖಲೆಗಳಿಗೆ ಬದಲಾಗಿ ಭೌತಿಕ ದಾಖಲೆಗಳನ್ನು ಬೇಡಿಕೆಯಿಡಲಾಗುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ನಿಮ್ಮ ಲೈಸನ್ಸ್ ಅಪ್ಡೇಟ್ ಮಾಹಿತಿ
ಇದರಿಂದ ನಿಮ್ಮ ಚಾಲನಾ ಪರವಾನಗಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಸಂಚಾರ ಅಧಿಕಾರಿಗಳ ಬಳಿ ಲಭ್ಯವಿರಲಿವೆ ಎಂದು ತಜ್ಞರು ಹೇಳಿದ್ದಾರೆ. ಇದರೊಂದಿಗೆ, ಪರವಾನಗಿ ಪ್ರಾಧಿಕಾರವು ಅನರ್ಹಗೊಳಿಸಿದ ಅಥವಾ ರದ್ದುಪಡಿಸಿದ ಚಾಲನಾ ಪರವಾನಗಿಯ ವಿವರಗಳನ್ನು ಪೋರ್ಟಲ್‌ನಲ್ಲಿ ದಾಖಲಿಸಲಾಗುವುದು ಮತ್ತು ಅದನ್ನು ಕಾಲಕಾಲಕ್ಕೆ ನವೀಕರಿಸಲಾಗುವುದು ಎಂದು ಸರ್ಕಾರ ಹೇಳಿದೆ.


ಮೋಟಾರು ವಾಹನ ನಿಯಮಗಳ ಉತ್ತಮ ಮೇಲ್ವಿಚಾರಣೆ ಮತ್ತು ಅನುಷ್ಠಾನಕ್ಕಾಗಿ 2020 ರ ಅಕ್ಟೋಬರ್ 1 ರಿಂದ ಪೋರ್ಟಲ್ ಮೂಲಕ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒಳಗೊಂಡಂತೆ ಮೋಟಾರು ವಾಹನ ನಿಯಮಗಳು 1989 ರಲ್ಲಿ ಮಾಡಿದ ವಿವಿಧ ತಿದ್ದುಪಡಿಗಳ ಬಗ್ಗೆ ಅಧಿಸೂಚನೆ ಹೊರಡಿಸಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಮತ್ತು ಇ-ಚಲನ್ ಅನ್ನೂ ಕೂಡ ತಂಮೂಲಕವೇ ನಿರ್ವಹಿಸಲಾಗುವುದು ಎಂದು ಸರ್ಕಾರ ಹೇಳಿದೆ.