ನವದೆಹಲಿ: ನೀವು ರಸ್ತೆ ಮೂಲಕ ಬೇರೆ ನಗರಕ್ಕೆ ಹೋಗಬೇಕೆಂದು ಯೋಚಿಸುತ್ತಿದ್ದರೆ ಈ ಸುದ್ದಿಯನ್ನು ಓದಿ. ಇಂದಿನಿಂದ ಹೆದ್ದಾರಿಯಲ್ಲಿ ಪ್ರಯಾಣ ಮಾಡುವುದು ದುಬಾರಿಯಾಗಲಿದೆ. ಹೆದ್ದಾರಿ ಟೋಲ್ ತೆರಿಗೆಯಲ್ಲಿನ ಎಲ್ಲಾ ವಿನಾಯಿತಿ ಮತ್ತು ರಿಯಾಯಿತಿಗಳನ್ನು ರದ್ದುಪಡಿಸಲಾಗುತ್ತಿದೆ. ನೀವು ಯಾವುದೇ ರಿಯಾಯಿತಿ ಬಯಸಿದರೆ ಈಗ ಅದಕ್ಕಾಗಿ ಕೆಲಸ ಮಾಡುವ ಅವಶ್ಯಕತೆಯಿದೆ.


ನಿಮ್ಮ FASTag ಮಾಹಿತಿ ತಿಳಿಯಲು ಈ ಒಂದು ಕೆಲಸ ಸಾಕು!


COMMERCIAL BREAK
SCROLL TO CONTINUE READING

ಫಾಸ್ಟ್ಯಾಗ್ ಮಾತ್ರ ರಿಯಾಯಿತಿಯನ್ನು ಪಡೆಯುತ್ತದೆ:
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ದೇಶದ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಹಿಂತಿರುಗುವ ಪ್ರಯಾಣ ರಿಯಾಯಿತಿ ಅಥವಾ ಇನ್ನಿತರ ವಿನಾಯಿತಿಗಳಿಗಾಗಿ 'ಫಾಸ್ಟ್ಯಾಗ್' ಅನ್ನು ಕಡ್ಡಾಯಗೊಳಿಸಿದೆ. ಈ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆಯ ಪ್ರಕಾರ 24 ಗಂಟೆಗಳ ಒಳಗೆ ಹಿಂತಿರುಗುವ ಪ್ರಯಾಣದ ವಿನಾಯಿತಿ ಅಥವಾ ಯಾವುದೇ ಸ್ಥಳೀಯ ವಿನಾಯಿತಿ ಪಡೆಯುವ ಯಾವುದೇ ಚಾಲಕರು ತಮ್ಮ ವಾಹನದ ಮೇಲೆ ಮಾನ್ಯ 'ಫಾಸ್ಟ್ಯಾಗ್' ವಿಧಿಸುವುದು ಕಡ್ಡಾಯವಾಗಿರುತ್ತದೆ.


ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವುದು ಇದರ ಉದ್ದೇಶ:
ರಾಷ್ಟ್ರೀಯ ಹೆದ್ದಾರಿಗಳ (National highways) ಶುಲ್ಕ ಪ್ಲಾಜಾಗಳಲ್ಲಿ ಡಿಜಿಟಲ್ ಪಾವತಿಯ ಬಳಕೆಯನ್ನು ಉತ್ತೇಜಿಸುವ ಮತ್ತೊಂದು ಪ್ರಮುಖ ಹೆಜ್ಜೆ ಇದು. ಅಂತಹ ರಿಯಾಯಿತಿ ಪಡೆಯಲು ಪೂರ್ವ-ಪಾವತಿಸಿದ ವಿಧಾನಗಳು, ಸ್ಮಾರ್ಟ್ ಕಾರ್ಡ್ ಅಥವಾ 'ಫಾಸ್ಟ್ಯಾಗ್' (FASTag) ಇತ್ಯಾದಿಗಳ ಮೂಲಕ ಮಾತ್ರ ಶುಲ್ಕವನ್ನು ಪಾವತಿಸಲಾಗುತ್ತದೆ. ಹೊಸ ತಿದ್ದುಪಡಿಯು 24 ಗಂಟೆಗಳ ಒಳಗೆ ಮರಳುವ ಪ್ರಯಾಣಕ್ಕೆ ವಿನಾಯಿತಿ ಲಭ್ಯವಿರುವ ಸಂದರ್ಭಗಳಲ್ಲಿ, ಹಿಂದಿನ ರಶೀದಿ ಅಥವಾ ಮಾಹಿತಿಯ ಅಗತ್ಯವಿಲ್ಲ ಮತ್ತು ಆ ವ್ಯಕ್ತಿಗೆ ಸ್ವಯಂಚಾಲಿತವಾಗಿ ವಿನಾಯಿತಿ ಸಿಗುತ್ತದೆ.


ಉಚಿತವಾಗಿ ಸಿಗಲಿದೆ FASTag: ಎಲ್ಲಿ? ಹೇಗೆಂದು ತಿಳಿಯಿರಿ


ಹಿಂತಿರುಗುವ ಪ್ರಯಾಣವನ್ನು 24 ಗಂಟೆಗಳ ಒಳಗೆ ಪೂರ್ಣಗೊಳಿಸಬೇಕು ಮತ್ತು ಸಂಬಂಧಪಟ್ಟ ವಾಹನಕ್ಕೆ ಮಾನ್ಯ 'ಫಾಸ್ಟ್ಯಾಗ್' ಅನ್ನು ಲಗತ್ತಿಸಿರಬೇಕು.