ನವದೆಹಲಿ: ರಾಷ್ಟ್ರೀಯ ಮಾದರಿ ಸಮೀಕ್ಷೆ ಹೇಳುವಂತೆ ಕಳೆದ 45 ವರ್ಷಗಳಲ್ಲಿ  ನಿರುದ್ಯೋಗದ ಪ್ರಮಾಣ ಹೆಚ್ಚಳಕೊಂಡಿದೆ ಎನ್ನಲಾಗಿದೆ.2017-18 ರಲ್ಲಿ ನಿರುದ್ಯೋಗದ ಪ್ರಮಾಣ ಶೇ 6.1 ರಷ್ಟು ಎಂದು ಬುಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ರಾಷ್ಟ್ರೀಯ ಸಂಖ್ಯಾಶಾಸ್ತ್ರಿಯ ಆಯೋಗದ ಇಬ್ಬರು ಸದಸ್ಯರು ಸರ್ಕಾರದೊಂದಿಗಿನ ಭಿನ್ನಾಭಿಪ್ರಾಯದ ಕಾರಣದಿಂದಾಗಿ ರಾಜೀನಾಮೆ ನೀಡಿದ್ದರು. ಇದರಲ್ಲಿ ಪ್ರಮುಖವಾಗಿ ವರದಿಯನ್ನು ಪ್ರಕಟಿಸದ ಕಾರಣ ಈ ಸದಸ್ಯರಿಬ್ಬರು ರಾಜೀನಾಮೆ ನೀಡಿದ್ದರು. ಈ ವರದಿ ಇಂದಿಗೂ ಕೂಡ ಪ್ರಕಟವಾಗಿಲ್ಲ.


ಪ್ರಧಾನಿ ನರೇಂದ್ರ ಮೋದಿ ನವಂಬರ್ 2016 ರಂದು ನೋಟು ನಿಷೇಧಿಕರಣವನ್ನು ಜಾರಿಗೆ ತಂದ ನಂತರ ಉದ್ಯೋಗಕ್ಕೆ ಸಂಬಂಧಿಸಿದ ಮೊದಲ ಸಮೀಕ್ಷೆಯಾಗಿದೆ.ಈ ಸಮೀಕ್ಷೆಯನ್ನು  ಜುಲೈ 2017 ರಿಂದ ಜೂನ್ 2018 ರ ನಡುವಿನ ಅವಧಿಯಲ್ಲಿ ಅಂಕಿಅಂಶಗಳನ್ನು ಪರಿಗಣಿಸಲಾಗಿದೆ.


ಬಿಸಿನೆಸ್ ಸ್ಟ್ಯಾಂಡರ್ಡ್ ತಿಳಿಸಿರುವಂತೆ ಈ ವರದಿಯಲ್ಲಿ ನ  ನಿರುದ್ಯೋಗದ ಪ್ರಮಾಣವು 1972 -73 ಅವಧಿಗಿಂತ ಅಧಿಕ ಎಂದು ಎಂದು ಹೇಳಲಾಗಿದೆ.