ಇಮೇಜ್ ಮೆಸೇಜಿಂಗ್ ಮತ್ತು ಮಲ್ಟಿಮೀಡಿಯಾ ಮೊಬೈಲ್ ಅಪ್ಲಿಕೇಶನ್ ಸ್ನ್ಯಾಪ್ ಚಾಟ್ ತನ್ನ Bitmoji  ಫಂಕ್ಷನ್ ಅನ್ನು ಮತ್ತಷ್ಟು ಆಧುನೀಕರಣ ಗೊಳಿಸಿದ್ದು, ಇದರಿಂದ ಬಳಕೆದಾರರು ಈ ಆಪ್ ಗೆ ಮತ್ತಷ್ಟು ಒಗ್ಗಿಕೊಳ್ಳಲು ಸಾಧ್ಯವಾಗಿದೆ. 


COMMERCIAL BREAK
SCROLL TO CONTINUE READING

ಮಾಧ್ಯಮ ವರದಿಗಳ ಪ್ರಕಾರ, ಬಿಟ್ಮೊಜಿ(Bitmoji) ಡಿಲಕ್ಸ್ ಎಂಬ ಶೀರ್ಷಿಕೆಯಡಿಯಲ್ಲಿ, ವಿವಿಧ ರೂಪ, ಲಾವಣ್ಯ, ಕೇಶವಿನ್ಯಾಸ, ಕಣ್ಣು ಮತ್ತು ಕೂದಲಿನ ಬಣ್ಣಗಳು, ಮುಖ ಲಕ್ಷಣ ಮೊದಲಾದವುಗಳನ್ನು ಬಳಕೆದಾರರು ತಮ್ಮ ಇಚ್ಚೆಯಂತೆ ರೂಪಾಂತರಗೊಳಿಸಿಕೊಳ್ಳಲು ಅವಕಾಶ ನೀಡಿದೆ. 


Bitmoji Deluxe ನಲ್ಲಿ, ಒಬ್ಬ ಬಳಕೆದಾರನು ಸೆಲ್ಫಿ ಕ್ಲಿಕ್ ಮಾಡಿಕೊಂಡು, ಆ ಫೋಟೋಗೆ ಹೊಸ ರೂಪ ನೀಡಿ ವಿನ್ಯಾಸಗೊಳಿಸಿಕೊಳ್ಳಬಹುದು. ಈ ಆಪ್ಶನ್ ನಲ್ಲಿ ನಿರ್ದಿಷ್ಟ ಲಕ್ಷಣವನ್ನು ಅಂದರೆ, ಹುಬ್ಬಿನ ಆಕಾರ, ಕೇಶ ಶೈಲಿ ಮೊದಲಾದವುಗಳನ್ನು ಆಯ್ಕೆಮಾಡಿದರೆ ಸಾಕು, ಈ ಅಪ್ಲಿಕೇಶನ್ ನೇರವಾಗಿ ಬಿಲ್ಡರ್ನಲ್ಲಿ ಬಳಕೆದಾರರ ಹೊಸ ರೂಪವನ್ನು ಪ್ರಿವ್ಯೂ ಮಾಡುತ್ತದೆ. ನೀವೇನಾದರೂ ಪ್ರಸ್ತುತ ರೂಪಕ್ಕೆ  ಆದ್ಯತೆ ನೀಡಿದರೆ, Bitmoji ಕ್ಲಾಸಿಕ್ ಮತ್ತು Bitstrip styleಗಳು ಲಭ್ಯವಾಗುತ್ತವೆ. 


Bitmoji Deluxe ವೈಶಿಷ್ಟ್ಯವು ಲೈವ್ ಆಗಿದ್ದರೆ, ಬಳಕೆದಾರರು ಬಿಟ್ಮೊಜಿ ಅಪ್ಲಿಕೇಶನ್ನಲ್ಲಿ ಸೆಟ್ಟಿಂಗ್ಗಳ ಮೂಲಕ ಉಪಕರಣವನ್ನು ಪ್ರವೇಶಿಸಬಹುದು ಮತ್ತು "change avatar style" ಅನ್ನು ಟ್ಯಾಪ್ ಮಾಡಬಹುದು. ಅದೇ ರೀತಿ "edit Bitmoji" ಅನ್ನು ಟ್ಯಾಪ್ ಮಾಡುವ ಮೂಲಕ ಸ್ನಾಪ್ಚಾಟ್ನಲ್ಲಿಯೂ ಮಾಡಬಹುದು. ಇದು ಬಿಟ್ಮೊಜಿ ಅಪ್ಲಿಕೇಶನ್ಗೆ ಮರುನಿರ್ದೇಶಿಸುತ್ತದೆಯಲ್ಲದೆ, ಅಲ್ಲಿ ಹೊಸ ಫೀಚರ್ ಅನ್ನು ಫ್ಲಾಶ್ ಮಾಡಬಹುದು.


ಪ್ರಸ್ತುತ ಬಿಟ್ಮೊಜಿ ವೈಶಿಷ್ಟ್ಯವು ಬಳಕೆದಾರರು ತಮ್ಮ ಕೂದಲನ್ನು, ಕಣ್ಣು, ಮೂಗು, ಬಟ್ಟೆ ಮತ್ತು ಇತರ ಮೂಲ ಲಕ್ಷಣಗಳನ್ನು ಬದಲಾಯಿಸಲು ಒಂದು ಮೂಲ ಅವತಾರ್ ಬಿಲ್ಡರ್ ಗೆ ಮಾತ್ರ ಅವಕಾಶ ನೀಡಿತ್ತು. ಆದರೀಗ ಹೋದ ಅಪ್ ಡೇಟ್ ನಿಂದಾಗಿ ಮೇಕಪ್ ಮತ್ತು ಕಿವಿಯೋಲೆಗಳು ಮುಂತಾದ ಭಾಗಗಳು ಸೇರಿದಂತೆ ಇನ್ನಷ್ಟು ಹೊಸ ಫೀಚರ್ಗಳನ್ನೂ ನೀಡಿದೆ. ಈ ಅಪ್ ಡೇಟ್ ಇಂದಿನಿಂದಲೇ ಎಲ್ಲಾ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ದೊರೆಯಲಿದೆ.