ಇನ್ಮುಂದೆ ಕಿಲೋಮೀಟರ್ ಲೆಕ್ಕದಲ್ಲಿ Vehicle Insurance ಪಾವತಿಸಿ, ಈ ಕಂಪನಿ ನೀಡುತ್ತಿದೆ ಅವಕಾಶ
ಭಾರತಿ ಏಕ್ಸ್ಸಾ ಲೈಫ್ ಇನ್ಸೂರೆನ್ಸ್ ಕಂಪನಿ `ಪೇ ಆಸ್ ಯು ಡ್ರೈವ್` ಹೆಸರಿನ ವಿಶೇಷ ವಾಹನ ವಿಮಾ ಪಾಲಸಿಯನ್ನು ಜಾರಿಗೆ ತಂದಿದೆ.
ನವದೆಹಲಿ: ಭಾರತಿ ಏಕ್ಸ್ಸಾ ಲೈಫ್ ಇನ್ಸೂರೆನ್ಸ್ ಕಂಪನಿ 'ಪೇ ಆಸ್ ಯು ಡ್ರೈವ್' ಹೆಸರಿನ ವಿಶೇಷ ವಾಹನ ವಿಮಾ ಪಾಲಸಿಯನ್ನು ಜಾರಿಗೆ ತಂದಿದೆ. ಈ ವಿಮಾ ಪಾಲಸಿಯಲ್ಲಿ ಕಾರ್ ಮಾಲೀಕರು ತಮ್ಮ ಕಾರು ಕ್ರಮಿಸಿದ ದೂರವನ್ನು ಆಧರಿಸಿ ಪ್ರೀಮಿಯಂ ಪಾವತಿಸಲು ಅವಕಾಶ ನೀಡಲಾಗಿದೆ. ಈ ಪಾಲಸಿಯ ಅಡಿ ಗ್ರಾಹಕರು ತಮ್ಮ ಕಾರು ಒಂದು ವರ್ಷದಲ್ಲಿ ಕ್ರಮಿಸಬೇಕಾಗಿರುವ ಅಂತರವನ್ನು ಮೊದಲೇ ಅನುಮಾನಿಸಿ ಮಾಹಿತಿಯನ್ನು ನೀಡಬೇಕು. ಅದರ ಆಧಾರದ ಮೇಲೆ ಕಂಪ್ಯೂಟರಿಕರಣ ಪ್ರಣಾಳಿಯ ಮೂಲಕ ಪ್ರಿಮಿಯಂ ರಾಶಿಯನ್ನು ನಿರ್ಧರಿಸಲಾಗುತ್ತದೆ.
ವಿಮಾ ಪಾಲಸಿ ಮಾರಾಟಕ್ಕಾಗಿ ಭಾರತಿ ಎಕ್ಸಾ ಜನರಲ್ ಇನ್ಸೂರೆನ್ಸ್ ವಿಮಾ ಪಾಲಸಿ ಮಾರಾಟ ಮಾಡುವ ಆನ್ಲೈನ್ ಪ್ಲಾಟ್ಫಾರ್ಮ್ ಪಾಲಸಿ ಬಜಾರ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ. ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿಕೊಂಡಿರುವ ಕಂಪನಿ, ಪೇ ಆಸ್ ಯು ಡ್ರೈವ್, ವಿಮಾ ಪಾಲಸಿ, ಪ್ರಾಧಿಕಾರದ ಸೈಡ್ ಬಾಕ್ಸ್ ಯೋಜನೆಯಡಿ ಖಾಸಗಿ ಕಾರು ಮಾಲೀಕರಿಗಾಗಿ ಸಿದ್ಧಪಡಿಸಲಾಗಿದೆ ಎಂದು ಹೇಳಿದೆ.
ಕಿ.ಮೀಯ ಒಟ್ಟು ಮೂರು ಸ್ಲಾಬ್ ಗಳನ್ನು ರಚಿಸಲಾಗಿದೆ
ಭಾರತಿ ಎಕ್ಸಾ ಜನರಲ್ ಇನ್ಸೂರೆನ್ಸ್ ತನ್ನ ಗ್ರಾಹಕರ ಅವಶ್ಯಕತೆಗೆ ಅನುಸಾರ 2,500 ಕಿ.ಮೀ, 5,000 ಕಿ.ಮೀ ಹಾಗೂ 7,000 ಕಿಮೀ ಅಂತರಗಳ ಒಟ್ಟು ಮೂರು ಸ್ಲಾಬ್ ಗಳನ್ನು ರಚಿಸಿದೆ. ಈ ಸ್ಲಾಬ್ ಗಳ ಕುರಿತು ಮಾಹಿತಿ ನೀಡಿರುವ ಕಂಪನಿಯ ಪ್ರಧಾನ ನಿರ್ದೇಶಕ ಹಾಗೂ ಮುಖ್ಯ ಕಾರ್ಯಕಾರಿ ಅಧಿಕಾರಿ ಸಂಜೀವ್ ಶ್ರೀನಿವಾಸನ್, ಜನರ ಹೆಚ್ಚೂವರಿ ತಮ್ಮ ವಾಹನವನ್ನು ಮನೆಯಿಂದ ಕೆಲಸ ಮಾಡುವುದರಲ್ಲಿ ಹಾಗೂ ಜೊತೆಗೆ ಕಚೇರಿ ಕೆಲಸಕ್ಕೆ ಹೋಗಲು ಬಳಸುತ್ತಾರೆ. ಇದನ್ನು ಆಧರಿಸಿ ಈ ಪಾಲಸಿಯ ವಿಕಲ್ಪವನ್ನು ಗ್ರಾಹಕರು ಆಯ್ದುಕೊಳ್ಳುವುದು ಉತ್ತಮ ಮತ್ತು ಗ್ರಾಹಕರು ತಮ್ಮ ವಾಹನದ ಪ್ರತಿ ಕಿಲೋಮೀಟರ್ ಚಾಲನೆಗೆ ಅನುಗುಣವಾಗಿ ವಿಮಾ ಪ್ರೀಮಿಯಂ ಅನ್ನು ಪಾವತಿಸಬಹುದು ಎಂದಿದ್ದಾರೆ.