ನವದೆಹಲಿ: ಶೀಘ್ರದಲ್ಲಿಯೇ ಸಾಲ ಪೇಡ ಜನರು ಬ್ಯಾಂಕ್ ಅಥವಾ ಇತರೆ ಆರ್ಥಿಕ ಸಂಸ್ಥೆಗಳಿಗೆ ಭೇಟಿ ನೀಡಿ ತಮ್ಮ EMIಗಳನ್ನು ಕಡಿಮೆಗೊಳಿಸಬಹುದಾಗಿದೆ. ಇದರಿಂದ ನಿಮ್ಮ ಸಿಬಿಲ್ ಸ್ಕೋರ್ ಮೇಲೂ ಕೂಡ ಯಾವುದೇ ರೀತಿಯ ಪ್ರನಿನಾಮ ಉಂಟಾಗುವುದಿಲ್ಲ. ಲೋನ್ ಮೊರೆಟೋರಿಯಂಗಾಗಿ ಗ್ರಾಹಕರಿಗೆ ಬ್ಯಾಂಕ್ ಗಳು ಆಗಸ್ಟ್ ವರೆಗೆ ನೆಮ್ಮದಿ ನೀಡಿದ್ದವು . ಆದರೆ, ಇದೀಗ ಸೆಪ್ಟೆಂಬರ್ ನಿಂದ ಮತ್ತೇ EMI ಪಾವತಿಸಬೇಕಾಗಲಿದೆ. ಒಂದು ವೇಳೆ ಪಾವತಿಸದೇ ಹೋದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪ್ರಭಾವ ಉಂಟಾಗಲಿದೆ. ಆದರೆ, ಇದರೊಂದಿಗೆ ಕೇಂದ್ರೀಯ ಬ್ಯಾಂಕ್ ತನ್ನ ಗ್ರಾಹಕರಿಗೆ ನೂತನ ಯೋಜನೆಯೊಂದನ್ನು ಜಾರಿಗೊಳಿಸಿದೆ.


COMMERCIAL BREAK
SCROLL TO CONTINUE READING

ರಿಸರ್ವ್ ಬ್ಯಾಂಕ್ ಕೈಗೊಂಡ ನಿರ್ಣಯ ಇದು
ತನ್ನ ಘೋಷಣೆಯಲ್ಲಿ ರಿಸರ್ವ್ ಬ್ಯಾಂಕ್ ಗ ಗವರ್ನರ್ ಶಕ್ತಿಕಾಂತ್ ದಾಸ್ ಸಾಲ ಸೆಟಲ್ಮೆಂಟ್ ಗಾಗಿ ಹೊಸದೊಂದು ಯೋಜನೆಯ ಕುರಿತು ಉಲ್ಲೇಖಿಸಿದ್ದಾರೆ. ಈ ಯೋಜನೆಯ ಲಾಭ ಪಡೆದು ಗ್ರಾಹನರು ತಮ್ಮ ಸಾಲದ ಸೆಟಲ್ಮೆಂಟ್ ಮಾಡಬಹುದಾಗಿದೆ. ಇದರ ವಿಶೇಷತೆ ಎಂದರೆ ಈ ಯೋಜನೆಯ ಲಾಭ ಪಡೆದು ಗ್ರಾಹಕರು ಡಿಪಾಲ್ಟರ್ ಪಟ್ಟಿಯಿಂದ ಹೊರಬೀಳಬಹುದು. ವಿತ್ತೀಯ ಪರಿಶೀಲನಾ ನೀತಿಯ ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸಾಲ ಪುನರ್ರಚನೆ ಸೌಲಭ್ಯವನ್ನು ಘೋಷಿಸಿದ್ದಾರೆ. ಸಾಲ ಪುನರ್ರಚನೆಯ ಅನುಮೋದನೆ ಪಡೆದ ನಂತರ, ಈಗ ಬ್ಯಾಂಕುಗಳು ತಮ್ಮ ಸಾಲ ಮರುಪಾವತಿ ವೇಳಾಪಟ್ಟಿಯನ್ನು ಮರುಹೊಂದಿಸಬಹುದು. ಇದರ ಅಡಿಯಲ್ಲಿ, ಬ್ಯಾಂಕುಗಳು ಮರುಪಾವತಿ ಅವಧಿಯನ್ನು ಹೆಚ್ಚಿಸಬಹುದು ಅಥವಾ ಪಾವತಿಯಲ್ಲಿ ಪರಿಹಾರವನ್ನು ನೀಡಬಹುದು. ಈ ಪುನರ್ರಚನೆಯಡಿಯಲ್ಲಿ, ಬ್ಯಾಂಕುಗಳು ಇಎಂಐ ಅನ್ನು ಕಡಿಮೆ ಮಾಡಬೇಕೆ? ಸಾಲದ ಅವಧಿಯನ್ನು ಹೆಚ್ಚಿಸಬೇಕೇ? ಅಥವಾ ಬಡ್ಡಿಯನ್ನು ವಿಧಿಸಬೇಕೇ? ಎಂಬುದನ್ನು ನಿರ್ಧರಿಸಲು ಸಾಧ್ಯವಾಗಲಿದೆ.


ಕೊರೊನಾ ಕಾಲದಲ್ಲಿ RBI ಗ್ರಾಹಕರಿಗೆ ಲೋನ್ ಮೊರೆಟೋರಿಯಂ ಸೌಕರ್ಯ ನೀಡಿತ್ತು
ಈ ನೂತನ ಸ್ಕೀಮ್ ಗೂ ಮೊದಲು ಭಾರತೀಯ ರಿಸರ್ವ್ ಬ್ಯಾಂಕ್ ಲಾಕ್ ಡೌನ್ ಹಿನ್ನೆಲೆ 3 ತಿಂಗಳ ಅವಧಿಗಾಗಿ ಲೋನ್ ಮೊರೆಟೋರಿಯಂ ಘೋಷಣೆ ಮಾಡಿತ್ತು. ಆದೆ, ಮೇ 22 ಈ ಅವಧಿಯನ್ನು ಮತ್ತೆ ಮೂರು ತಿಂಗಳಿಗಾಗಿ ವಿಸ್ತರಿಸಲಾಯಿತು. ಕೇಂದ್ರೀಯ ಬ್ಯಾಂಕ್ ನ ಈ ನಿರ್ಣಯದಿಂದ ಸಾಲ ಪಡೆದ ಗ್ರಾಹಕರಿಗೆ ಒಟ್ಟು 6 ತಿಂಗಳ ಅವಧಿಗೆ EMI ಪಾವತಿಸುವುದರಿಂದ ನೆಮ್ಮದಿ ಸಿಕ್ಕಿತ್ತು. ಆದರೆ, ಇದೀಗ ಮೊರೆಟೋರಿಯಂ ಲೋನ್ ಅವಧಿ ಆಗಸ್ಟ್ 31ಕ್ಕೆ ಮುಕ್ತಾಯಗೊಳ್ಳುತ್ತಿದೆ.


ಆದರೆ ಈ ಪುನರ್ರಚನೆಯು 2019 ರ ಜೂನ್ 7 ರಂದು ರಿಸರ್ವ್ ಬ್ಯಾಂಕ್ ಹೊರಡಿಸಿದ ಮಿತವ್ಯಯದ ವಿನ್ಯಾಸ ಚೌಕಟ್ಟಿನ (Frugal design framework)ಅನುಸಾರ ನಡೆಯಲಿದೆ ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಕರೋನಾ ವೈರಸ್ ಪೀಡಿತ ಕೈಗಾರಿಕೆಗಳಿಗೆ ಸಹಾಯ ಮಾಡಲು ಸಾಲಗಳನ್ನು ಪುನರ್ರಚಿಸುವ ಅಗತ್ಯತೆಯ ಬಗ್ಗೆ ಸರ್ಕಾರವು ರಿಸರ್ವ್ ಬ್ಯಾಂಕಿನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಈ ಹಿಂದೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದು ಇಲ್ಲಿ ಉಲ್ಲೇಖನೀಯ.