ನವದೆಹಲಿ: ಕನ್ಫರ್ಮ್ ರೇಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಿದ ಮೇಲೆ ನಿಮ್ಮ ಹಣ ಸಾಮಾನ್ಯವಾಗಿ ವಾಪಸ್ ಬರುವುದಿಲ್ಲ. ರೇಲ್ವೆ ವಿಭಾಗ ಕನ್ಫರ್ಮ್ ರೇಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಿದಾಗ ನಿಮ್ಮ ಹಣ ಮರುಪಾವತಿಸುವುದಿಲ್ಲ. ಆದರೆ, ಇನ್ಮುಂದೆ ಟಿಕೆಟ್ ಕ್ಯಾನ್ಸಲ್ ಮಾಡಿದಾಗಲೂ ಕೂಡ ನಿಮ್ಮ ಸಂಪೂರ್ಣ ಹಣ ವಾಪಸ್ ಸಿಗಲಿದೆ. ಈ ಹಣ ವಾಪಸ್ ಪಡೆಯಲು ನಿಮಗೆ ಸಾಕಷ್ಟು ಕಷ್ಟ ಪದಬೇಕಾಗುವ ಅಗತ್ಯ ಕೂಡ ಇಲ್ಲ.


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ ಆರಂಭವಾಗಿದೆ ಈ ಸೇವೆ
ಕನ್ಫರ್ಮ್ ಟಿಕೆಟ್ ಕ್ಯಾನ್ಸಲ್ ಮಾಡಿದಾಗ ಸಂಪೂರ್ಣ ಹಣ ಹಿಂದಿರುಗಿಸುವ ಸೇವೆಯನ್ನು ಬೆಂಗಳೂರಿನ ಒಂದು ಸ್ಟಾರ್ಟ್ ಅಪ್ ಕಂಪನಿ Confirmtkt ಆರಂಭಿಸಿದೆ. ಕಂಪನಿ ತನ್ನ ಸೈಟ್ ನಿಂದ ಟಿಕೆಟ್ ಬುಕ್ ಮಾಡುವ ಗ್ರಾಹಕರಿಗೆ ಈ ಸೇವೆ ನೀಡಲು ಆರಂಭಿಸಿದೆ. ತನ್ನ ಸೈಟ್ ನಲ್ಲಿ ಟಿಕೆಟ್ ಬುಕ್ ಮಾಡಿದ ಗ್ರಾಹಕರಿಗೆ ಫ್ರೀ ಕ್ಯಾನ್ಸಲೇಶನ್ ಆಯ್ಕೆ ಒದಗಿಸಿದ್ದು, ಗ್ರಾಹಕರು ಈ ಆಯ್ಕೆಯನ್ನು ಉಪಯೋಗಿಸಿ ಹಣ ವಾಪಸ್ ಪಡೆಯಬಹುದು. ರೈಲು ಬಿಡುಗಡೆಗೂ ನಾಲ್ಕು ಗಂಟೆ ಮುನ್ನ ಯಾವುದೇ ಗ್ರಾಹಕರು ತಮ್ಮ ಟಿಕೆಟ್ ಕ್ಯಾನ್ಸಲ್ ಮಾಡಿಸಿ ಸಂಪೂರ್ಣ ಹಣ ವಾಪಸ್ ಪಡೆಯಬಹುದು ಎಂದು ಕಂಪನಿ ಹೇಳಿದೆ. ಈ ವಿಧಾನ ಅನುಸರಿಸುವ ಗ್ರಾಹಕರಿಗೆ ಸಂಪೂರ್ಣ ಹಣ ವಾಪಸ್ ಬರಲಿದೆ.


ಚಾರ್ಟ್ ಸಿದ್ಧವಾದ ಬಳಿಕವೂ ಕೂಡ ಹಣ ವಾಪಸ್ ಸಿಗಲಿದೆ
ಈ ಕುರಿತು ಮಾಹಿತಿ ನೀಡಿರುವ ಕಂಪನಿಯ ಅಧಿಕಾರಿಗಳು Confirmtkt ಭಾರತೀಯ ರೈಲಿನಲ್ಲಿ ಸದ್ಯ ಇರುವ ರಿಸರ್ವೇಶನ್ ತಂತ್ರವನ್ನು ಆಧರಿಸಿ ಗ್ರಾಫ್ ಬೇಸ್ಡ್ ತಂತ್ರಜ್ಞಾನ ಬಳಸಲಿದೆ. ಇದರಿಂದ ಯಾವುದೇ ಟ್ರೈನ್ ನಲ್ಲಿ ಖಾಲಿ ಇರುವ ಬರ್ತ್ ಗಳ ಕುರಿತು ಗ್ರಾಹಕರು ಶೀಘ್ರವೇ ಮಾಹಿತಿ ಪಡೆಯಬಹುದಾಗಿದೆ. ಈ ತಂತ್ರದಿಂದ ಟ್ರೈನ್ ಬಿಡುಗಡೆಗೂ ಒಂದು ಗಂಟೆ ಮುನ್ನವೇ ಗ್ರಾಹಕರು ಟಿಕೆಟ್ ಖರೀದಿಸಬಹುದಾಗಿದೆ.


ಸದ್ಯ Confirmtkt ಕಂಪನಿ ಈ ಸೇವೆಯನ್ನು ಕೇವಲ ಬೆಂಗಳೂರಿನಲ್ಲಿ ಮಾತ್ರ ಈ ಸೇವೆಯನ್ನು ಆರಂಭಿಸಿದೆ. ಇದುವರೆಗೆ ಈ ಸೈಟ್ ಮೇಲೆ ಸುಮಾರು 50 ಲಕ್ಷ ಗ್ರಾಹಕರು ಈ ಸೇವೆಯ ಲಾಭ ಪಡೆದುಕೊಂಡಿದ್ದಾರೆ. ಹಿಂದಿ ಸೇರಿದಂತೆ ಸುಮಾರು 7 ಭಾಷೆಗಳಲ್ಲಿ ಈ ಪ್ಲಾಟ್ಫಾರ್ಮ್ ತನ್ನ ಸೇವೆಯನ್ನು ನೀಡುತ್ತಾ ಬಂದಿದೆ ಎಂಬುದು ಇಲ್ಲಿ ಉಲ್ಲೇಖನೀಯ.