ನವದೆಹಲಿ: ಒಂದು ವೇಳೆ ನೀವೂ ಕೂಡ ಲಾಕ್ ಡೌನ್ ಅವಧಿಗೂ ಮುನ್ನವೇ ನಿಮ್ಮ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದರೆ, ನಿಮ್ಮ ಹಣ ಹಿಂಪಡೆಯುವ ಸಮಯ ಇದೀಗ ಬಂದಿದೆ. ಸರ್ಕಾರ ಜಾರಿಗೊಳಿಸಿರುವ ಒಂದು ಹೊಸ ನಿರ್ದೇಶನಗಳ ಅಡಿ ಏರ್ಲೈನ್ಸ್ ಕಂಪನಿಗಳು ತಮ್ಮ ತಮ್ಮ ಗ್ರಾಹಕರಿಗೆ ಯಾವುದೇ ರೀತಿಯ ನೆಪ ಹೇಳುವ ಹಾಗಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರ ಹೊಸ ನಿರ್ದೇಶನಗಳನ್ನು ಜಾರಿಗೊಳಿಸಿದೆ. ಇಲ್ಲಿದೆ ಪ್ರಕ್ರಿಯೆ.


COMMERCIAL BREAK
SCROLL TO CONTINUE READING

ನಾಗರಿಕ ವಿಮಾನಯಾನ ಸಚಿವಾಲಯ ನೀಡಿದೆ ಈ ನಿರ್ದೇಶನ
ಈ ಕುರಿತು ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಗೆ ನಿರ್ದೇಶನಗಳನ್ನು ನೀಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ, ಪ್ರಯಾಣಿಕರ ಹಣವನ್ನು ಶೀಘ್ರವೇ ರಿಫಂಡ್ ಮಾಡಲು ಸೂಚಿಸಿದೆ. ಸಚಿವಾಲಯದ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಕೊರೊನಾ ವೈರಸ್ ಲಾಕ್ ಡೌನ್ ಕಾರಣ ಸಸ್ಪೆಂಡ್ ಮಾಡಲಾಗಿರುವ ಫ್ಲೈಟ್ ಗಳಿಗಾಗಿ ಬೇರೆ ದಿನಾಂಕಗಳಂದು ಟಿಕೆಟ್ ನೀಡುವ ಕ್ರಮ ಉಚಿತವಲ್ಲ ಎಂದು ಅಭಿಪ್ರಾಯಪಟ್ಟಿದೆ ಎನ್ನಲಾಗಿದೆ. ಹೀಗಾಗಿ ಲಾಕ್ ಡೌನ್ ಹಿನ್ನೆಲೆ ರದ್ದುಗೊಳಿಸಲಾಗಿರುವ ಟಿಕೆಟ್ ಹಣವನ್ನು ಶೀಘ್ರವೇ ಮರುಪಾವತಿಸಬೇಕು ಎಂದು ಸೂಚಿಸಲಾಗಿದೆ.


ಯಾವ ಸಂದರ್ಭಗಳಲ್ಲಿ ನಿಮ್ಮ ಹಣ ವಾಪಸ್ ಸಿಗಲಿದೆ ಎಂಬುದನ್ನು ಮೊದಲು ತಿಳಿಯಿರಿ
 1: ಒಂದು ವೇಳೆ ನೀವು ಮೊದಲ ಲಾಕ್ ಡೌನ್ ಅಂದರೆ ಮಾರ್ಚ್ 25ರ ಬಳಿಕೆ ಟಿಕೆಟ್ ಬುಕ್ ಮಾಡಿ, ಹಣಪಾವತಿಸಿದ್ದು, ಯಾತ್ರೆಯ ದಿನಾಂಕ ಮಾರ್ಚ್ 25-ಏಪ್ರಿಲ್ 14 ನಡುವೆ ನಿಗದಿಪಡಿಸಿದ್ದಲ್ಲಿ.. ಅಥವಾ
 2: ಒಂದು ವೇಳೆ ನೇವು ಮೊದಲ ಲಾಕ್ ಡೌನ್ ಅಂದರೆ ಮಾರ್ಚ್ 25ರ ಬಳಿಕ ಫ್ಲೈಟ್ ಟಿಕೆಟ್ ಬುಕ್ ಗಾಗಿ ಹಣ ಸಂದಾಯ ಮಾಡಿದ್ದಲ್ಲೇ ಮತ್ತು ಯಾತ್ರೆಯ ದಿನಾಂಕವನ್ನು ಏಪ್ರಿಲ್ 14 ಬಳಿಕ ಅಂದರೆ ಎರಡನೇ ಲಾಕ್ ಅಂದರೆ, ಮೇ 3ನೇ ತಾರೀಖಿನ ಒಳಗೆ ನಿಗದಿಪಡಿಸಿದ್ದಲ್ಲಿ..


ಮೇಲಿನ ಈ ಎರಡೂ ಷರತ್ತುಗಳಲ್ಲಿ ಒಂದು ಷರತ್ತು ಕೂಡ ನಿಮಗೆ ಅನ್ವಯಿಸುತ್ತಿದ್ದರೆ ನೀಫು ರೀಫಂಡ್ ಕೇಳಿದ ಮೂರು ವಾರಗಳ ಅವಧಿಯಲ್ಲಿ ನಿಮಗೆ ರಿಫಂಡ್ ಸಿಗಲಿದೆ. ಈ ಕುರಿತು ಹೇಳಿಕೆ ನೀಡಿರುವ ಅಧಿಕಾರಿಯೊಬ್ಬರು DGCA ನಿರ್ದೇಶನಗಳ ಬಳಿಕ ಎಲ್ಲ ಏರ್ಲೈನ್ಸ್ ಕಂಪನಿಗಳಿಗೆ ರಿಫಂಡ್ ನೀಡುವ ಪ್ರಕ್ರಿಯೆ ಆರಂಭಿಸುವ ಅನಿವಾರ್ಯತೆ ಇದೆ ಎಂದಿದ್ದಾರೆ. ಒಂದು ವೇಳೆ ನೀವು ಮೊದಲ ಲಾಕ್ ಡೌನ್ ಅಂದರೆ ಮಾರ್ಚ್ 25 ಅಥವಾ ಅದರ ನಂತರ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದರೆ ಅಥವಾ ಕ್ಯಾನ್ಸಲ್ ಮಾಡಿದ್ದರೆ ನಿಮ್ಮ ಸಂಪೂರ್ಣ ಹಣ ನಿಮಗೆ ವಾಪಸ್ ಸಿಗಲಿದೆ ಎಂದು ಅವರು ಹೇಳಿದ್ದಾರೆ.


ದೇಶಾದ್ಯಂತ ಲಾಕ್ ಡೌನ್ ಘೋಷಣೆ ಹಾಗೂ ಅದರ ನಂತರದ ಅವಧಿಯಲ್ಲಿ ಮುಂದುವರೆಯುತ್ತಿದ್ದಂತೆ ಎಲ್ಲ ಏರ್ಲೈನ್ಸ್ ಕಂಪನಿಗಳು ತಮ್ಮ ಯಾತ್ರಿಗಳಿಗೆ ಟಿಕೆಟ್ ಬುಕ್ ಹಣವನ್ನು ರಿಫಂಡ್ ಮಾಡಲಾಗುವುದಿಲ್ಲ ಎಂದು ಹೇಳಿದ್ದವು. ಹಾಗೂ ನಿಮ್ಮ ಟಿಕೆಟ್ ಬದಲಾಗಿ ಬೇರೆ ಯಾವುದೇ ದಿನಾಂಕದಂದು ನೀವು ಟಿಕೆಟ್ ಬುಕ್ ಮಾಡಬಹುದು ಎಂದು ಹೇಳಿದ್ದವು. ದೇಶಾದ್ಯಂತ ಬಹುತೇಕ ದೇಶೀಯ ವಿಮಾನಯಾನ ಕಂಪನಿಗಳು ತಮ್ಮ ವೆಬ್ ಸೈಟ್ ಮೇಲೆ ಈ ಕುರಿತು ಮಾಹಿತಿ ಪ್ರಕಟಿಸಿದ್ದವು.