ನವದೆಹಲಿ: ಆನ್ಲೈನ್ ಶಾಪಿಂಗ್ ಅಥವಾ ಆನ್ಲೈನ್ ವ್ಯವಹಾರಕ್ಕೆ ಇನ್ನಷ್ಟು ಬಲ ನೀಡಲು ಕೇಂದ್ರ ಸರ್ಕಾರ ಈ ದೊಡ್ಡ ಬದಲಾವಣೆ ಮಾಡಲು ಚಿಂತನೆ ನಡೆಸುತ್ತಿದೆ. ಡಿಜಿಟಲ್ ಪೇಮೆಂಟ್ ಸಿಸ್ಟಮ್ ಅನ್ನು ಹೆಚ್ಚು ಸುರಕ್ಷಿತವಾಗಿಸಲು ಇನ್ಮುಂದೆ OTP ಜೊತೆ ಮುಖ ಹಾಗೂ ಐರಿಸ್ ಗಳೂ ಕೂಡ ಪಾಸ್ವರ್ಡ್ ರೀತಿಯಲ್ಲಿ ಬಳಕೆಯಾಗಲಿವೆ. ಹೆಚ್ಚಾಗುತ್ತಿರುವ ಆನ್ಲೈನ್ ವಂಚನೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಹೆಜ್ಜೆ ಇಟ್ಟಿದೆ. ಶೀಘ್ರದಲ್ಲಿಯೇ ಸರ್ಕಾರ ತನ್ನ ಈ ನಿರ್ಧಾರವನ್ನು ಜಾರಿಗೊಳಿಸಲಿದ್ದು, ಈ ವೈಶಿಷ್ಟ್ಯಗಳಿಂದ ನೀವು ವಂಚನೆಗಳಿಂದ ಪಾರಾಗಬಹುದಾಗಿದೆ.


COMMERCIAL BREAK
SCROLL TO CONTINUE READING

ಡಿಜಿಟಲ್ ಪೇಮೆಂಟ್ ಗಾಗಿ ಮಲ್ಟಿ-ಫ್ಯಾಕ್ಟರ್ ಅಥೆಂಟಿಕೇಶನ್ ಜಾರಿಗೊಳಿಸುವ ಪ್ರಸ್ತಾವನೆಯನ್ನು ಭಾರತ ಸರ್ಕಾರ ಮುಂದಿಟ್ಟಿದ್ದು, ಇವುಗಳಲ್ಲಿ OTP ಜೊತೆಗೆ ಫೆಸಿಯಲ್ ರೆಕಗ್ನಿಷನ್, ಐರಿಸ್ ಸ್ಕ್ಯಾನ್ ಹಾಗೂ ಲೋಕೇಶನ್ ಗಳಂತಹ ವೈಶಿಷ್ಟ್ಯಗಳನ್ನು ಸೇರಿಸಲಾಗುವುದು ಎಂದು ಹೇಳಿದೆ.


ಬಿಸಿನೆಸ್ ಇನ್ಸೈಡರ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಭಾರತ ಸರ್ಕಾರದ ವರದಿಯೊಂದರ ಪ್ರಕಾರ, ಕಳೆದ ಕೆಲ ಸಮಯದಲ್ಲಿ 1.3 ಬಿಲಿಯನ್ UPI ವ್ಯವಹಾರಗಳನ್ನು ನಮೂದಿಸಲಾಗಿದೆ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಈ ಆನ್ಲೈನ್ ವ್ಯವಹಾರಗಳನ್ನು ಸುರಕ್ಷಿತವಾಗಿಸುವುದೂ ಕೂಡ ಇದೀಗ ಅನಿವಾರ್ಯವಾಗಿದೆ. ಡಿಜಿಟಲ್ ಹಣ ಪಾವತಿಯನ್ನು ಸುರಕ್ಷಿತವಾಗಿಸಲು ಈ ವೈಶಿಷ್ಟ್ಯಗಳನ್ನು ಜೋಡಿಸುವುದು ಇದೀಗ ಅವಶ್ಯಕವಾಗಿದೆ ಎನ್ನಲಾಗಿದೆ.


ಯಾವ ಯಾವ ವೈಶಿಷ್ಟ್ಯಗಳು ಸೇರ್ಪಡೆಯಾಗುತ್ತಿವೆ?


  • OTP ಸೇರಿದಂತೆ ಫೆಸಿಯಲ್ ರೆಕಗ್ನಿಷನ್, ಐರಿಸ್, ಲೋಕೇಶನ್ ಇತ್ಯಾದಿ ಜೋಡಣೆಯಾಗುತ್ತಿವೆ.

  • ಎಲ್ಲ ವೈಶಿಷ್ಟ್ಯಗಳ ಅಥೆಂಟಿಕೇಶನ್ ಬಳಿಕ ಮಾತ್ರವೇ ಆನ್ಲೈನ್ ವ್ಯವಹಾರ ಪೂರ್ಣಗೊಳ್ಳಲಿದೆ.

  • ಸದ್ಯ ಇರುವ ಸಿಸ್ಟಮ್ ನಲ್ಲಿ ಎರಡು ಫ್ಯಾಕ್ಟರ್  ಅಥೆಂಟಿಕೇಶನ್ ನ ಬಳಕೆಯಾಗುತ್ತದೆ.

  • ಇವುಗಳಲ್ಲಿ 3D ಪಿನ್ ಹಾಗೂ OTP ಶಾಮೀಲಾಗಿವೆ.