ಕ್ಯಾಬ್ ನಲ್ಲಿ 1 ಕೋಟಿ ರೂ. ಮೌಲ್ಯದ ಆಭರಣ ಮರೆತಿದ್ದ ಅನಿವಾಸಿ ಭಾರತೀಯ...!
ಮಗಳ ಮದುವೆಗೆಂದು ಯುಕೆಯಿಂದ ಬಂದಿರುವ ಅನಿವಾಸಿ ಭಾರತೀಯ ಅಥವಾ ಎನ್‌ಆರ್‌ಐ ಕ್ಯಾಬ್‌ನಲ್ಲಿ ₹ 1 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ಮರೆತು ಹೋಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ಗುರುವಾರದಂದು ತಿಳಿಸಿದ್ದಾರೆ.
ನೋಯ್ಡಾ: ಮಗಳ ಮದುವೆಗೆಂದು ಯುಕೆಯಿಂದ ಬಂದಿರುವ ಅನಿವಾಸಿ ಭಾರತೀಯ ಅಥವಾ ಎನ್‌ಆರ್‌ಐ ಕ್ಯಾಬ್‌ನಲ್ಲಿ ₹ 1 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ಮರೆತು ಹೋಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ಗುರುವಾರದಂದು ತಿಳಿಸಿದ್ದಾರೆ.
ಈ ಬಗ್ಗೆ ದೂರು ಬಂದ ನಂತರ ಅಲರ್ಟ್ ಆದ ಪೊಲೀಸರು ಪಕ್ಕದ ಗಾಜಿಯಾಬಾದ್ ಜಿಲ್ಲೆಯಲ್ಲಿ ಉಬರ್ ಕ್ಯಾಬ್ ನ್ನು ಪತ್ತೆ ಹಚ್ಚಿದ ನಂತರ ನಾಲ್ಕು ಗಂಟೆಗಳ ನಂತರ ಬ್ಯಾಗ್ ಮತ್ತು ಆಭರಣಗಳನ್ನು ಮರಳಿ ಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಭರಣ ಮರೆತಿದ್ದ ವ್ಯಕ್ತಿಯು ನಿಖಿಲೇಶ್ ಕುಮಾರ್ ಸಿನ್ಹಾ ತನ್ನ ಕುಟುಂಬದೊಂದಿಗೆ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರು ತಮ್ಮ ಮಗಳ ಮದುವೆಗಾಗಿ ಗ್ರೇಟರ್ ನೋಯ್ಡಾಕ್ಕೆ ಬಂದಿದ್ದರು ಎನ್ನಲಾಗಿದೆ.
ಇದನ್ನೂ ಓದಿ : Notice to Roger Binny: ಬಿಸಿಸಿಐ ಮುಖ್ಯಸ್ಥ ರೋಜರ್ ಬಿನ್ನಿಗೆ ನೋಟಿಸ್ ಜಾರಿ: ಇದಕ್ಕೆ ಸೊಸೆ ಮಯಾಂತಿಯೇ ಕಾರಣ!!
ಗೌರ್ ಸಿಟಿ ಪ್ರದೇಶದಲ್ಲಿರುವ ಸರೋವರ್ ಪೋರ್ಟಿಕೋ ಹೋಟೆಲ್‌ಗೆ ತಲುಪಿದಾಗ ಚಿನ್ನಾಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್‌ಗಳಲ್ಲಿ ಒಂದು ನಾಪತ್ತೆಯಾಗಿದ್ದು, ಹೋಟೆಲ್‌ಗೆ ತೆರಳಲು ಅವರು ತೆಗೆದುಕೊಂಡಿದ್ದ ಕ್ಯಾಬ್‌ನಲ್ಲಿ ಅದನ್ನು ಬಿಟ್ಟು ಹೋಗಿರಬಹುದು ಎಂದು ಶಂಕಿಸಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಈ ಕುರಿತಾಗಿ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸ್ಥಳೀಯ ಪೊಲೀಸ್ ಠಾಣೆಯ ಉಸ್ತುವಾರಿ ಅನಿಲ್ ಕುಮಾರ್ ರಾಜ್‌ಪೂತ್ ಕುಟುಂಬವು ಸಂಜೆ 4 ಗಂಟೆ ಸುಮಾರಿಗೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿತು, ಇದಾದ ನಂತರ ಹುಡುಕಾಟದ ಕಾರ್ಯಾಚರಣೆಯನ್ನು ಆರಂಭಿಸಲಾಯಿತು.ಆಗ ನಮಗೆ ಕುಟುಂಬವು ಕ್ಯಾಬ್ ಚಾಲಕನ ಸಂಖ್ಯೆಯನ್ನು ಒದಗಿಸಿದ್ದರಿಂದಾಗಿ ಗುರ್‌ಗಾಂವ್‌ನಲ್ಲಿರುವ ಉಬರ್‌ನ ಕಛೇರಿಯಿಂದ ಅದರ ಲೈವ್ ಸ್ಥಳವನ್ನು ಪತ್ತೆ ಹಚ್ಚಿ ಗಾಜಿಯಾಬಾದ್ ನಲ್ಲಿ ಅದನ್ನು ಪಡೆಯಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : Rahul Dravid-Rohit Sharma Meeting: ದ್ರಾವಿಡ್- ರೋಹಿತ್ ಶರ್ಮಾಗೆ ಬಿಸಿಸಿಐ ಬಿಗ್ ರಿಲೀಫ್! ಸಭೆ ಮುಂದೂಡಿದ ಮಂಡಳಿ
ಸುಮಾರು ನಾಲ್ಕು ಗಂಟೆಗಳ ಹುಡುಕಾಟದ ನಂತರ ಒಂದು ಕೋಟಿ ರೂ ಮೌಲ್ಯದ ಎಲ್ಲಾ ಆಭರಣಗಳು ಬ್ಯಾಗ್ ನಲ್ಲಿ ಸುರಕ್ಷಿತವಾಗಿ ಕಂಡು ಬಂದಿವೆ, ಅದನ್ನು ಶ್ರೀ ಸಿನ್ಹಾ ಅವರಿಗೆ ಹಸ್ತಾನಂತರಿಸಲಾಯಿತು.ಪೊಲೀಸರ ಈ ಕಾರ್ಯಕ್ಕೆ ಕುಟುಂಬವು ಕೃತಜ್ನತೆಯನ್ನು ಸಲ್ಲಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.