ಕೊಚ್ಚಿ: ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ಜಲಂಧರ್ ಧರ್ಮಕ್ಷೇತ್ರದ ಮಾಜಿ ಬಿಷಪ್ ಫ್ರಾಂಕೋ ಮುಲಕ್ಕಲ್ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ.


COMMERCIAL BREAK
SCROLL TO CONTINUE READING

ಈ ಪ್ರಕರಣದ ಸಂಬಂಧ ಇಂದು ಸುದೀರ್ಘ ವಾದ ಹಾಗೂ ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ರಾಜಾ ವಿಜಯರಾಘವನ್ ಅವರು, ಬಿಷಪ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ. 


ಬಿಷಪ್ ಮುಲ್ಲಕಲ್ ಅವರು 2014 ರಿಂದ 2016ರ ವರೆಗೆ ಅನೇಕ ಬಾರಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ ಅನೈಸರ್ಗಿಕ ಸೆಕ್ಸ್ ನಡೆಸಿದ್ದಾರೆ ಎಂದು 46 ವರ್ಷದ ಬ್ರಹ್ಮಚಾರಿಣಿ ಜಲಂಧರ್​ ಬಿಷಪ್​ ವಿರುದ್ಧ ದೂರು ನೀಡಿದ್ದರು. ಈ ದೂರಿನ ಅನ್ವಯ ಸೆಪ್ಟೆಂಬರ್ 22ರಂದು ಬಿಷಪ್ ರನ್ನು ಬಂಧಿಸಲಾಗಿತ್ತು. ನಂತರ ಸೆ.24 ರಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಒಪ್ಪಿಸಿತ್ತು.