ಕೋಯಿಕೋಡ್: ಕೇರಳದಲ್ಲಿ ನಿಪಾ ವೈರಸ್ ಒಂದು ಮಾರಣಾಂತಿಕ ರೂಪ ಪಡೆದುಕೊಂಡಿದೆ. ಈ ವೈರಸ್ ಇಲ್ಲಿಯವರೆಗೆ ಸುಮಾರು ಒಂದು ಡಜನ್ ಜನರನ್ನು ಬಲಿತೆಗೆದುಕೊಂಡಿದೆ. ಪೆರಂಬ್ರ ತಾಲೂಕಿನ ಆಸ್ಪತ್ರೆಯಲ್ಲಿ ಮಾರಣಾಂತಿಕ ವೈರಸ್​ ನಿಫಾ ಸೋಂಕಿಗೆ ತುತ್ತಾಗಿದ್ದವರಿಗೆ ಚಿಕಿತ್ಸೆ ನೀಡಿದ್ದ ನರ್ಸ್ ಲಿನಿ ಎಂಬುವರು ಈ ಸೋಂಕು ತಗುಲಿ ಮೃತಪಟ್ಟಿರುವ ಆತಂಕಕಾರಿ ಘಟನೆ ಸೋಮವಾರ ನಡೆದಿದೆ.


COMMERCIAL BREAK
SCROLL TO CONTINUE READING

ಸೋಂಕಿಗೆ ತುತ್ತಾದ ನಂತರ ತಾನು ಬದುಕುವುದಿಲ್ಲ ಎಂದು ಅರಿತಿದ್ದ ಲಿನಿ, ಸಾಯುವುದಕ್ಕೂ ಮೊದಲು ಪತಿಗೆ ಪತ್ರವೊಂದನ್ನು ಬರೆದು ಸಂದೇಶವನ್ನು ರವಾನಿಸಿದ್ದಾರೆ. ‘ನಾನು ನಿನ್ನನ್ನು ಭೇಟಿಯಾಗುತ್ತೇನೆಂದು ನನಗನ್ನಿಸುತ್ತಿಲ್ಲ. ದಯವಿಟ್ಟು ನನ್ನ ಮಕ್ಕಳನ್ನು ನೋಡಿಕೊ. ನಿನ್ನ ಜತೆ ಮಕ್ಕಳನ್ನೂ ಗಲ್ಫ್​ಗೆ ಕರೆದುಕೊಂಡು ಹೋಗು; ನನ್ನ ತಂದೆಯಿದ್ದಂತೆ ಒಬ್ಬನೇ ಇರಬೇಡ, ಪ್ಲೀಸ್’ ಎಂದು ಗಲ್ಫ್​ನಲ್ಲಿದ್ದ ತನ್ನ ಗಂಡನಿಗೆ ಪತ್ರದ ಮೂಲಕ ಕೇಳಿಕೊಂಡಿದ್ದಾರೆ. ಕೇರಳ ಪ್ರವಾಸೋದ್ಯಮ ಸಚಿವ ಕದಕಂ ಪಲ್ಲಿ ಸುರೇಂದ್ರನ್ ಈ ಪತ್ರವನ್ನು ತನ್ನ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ.