ನವದೆಹಲಿ: ಇಂದು ದೆಹಲಿಯಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮಾಲಿನ್ಯದ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರ ರಾಜಧಾನಿಯಲ್ಲಿ odd-even ಅನ್ನು ಕಾರ್ಯಗತಗೊಳಿಸಬೇಕೇ ಅಥವಾ ಇಲ್ಲವೇ ಎಂಬುದರ ಕುರಿತು ರಾಷ್ಟ್ರೀಯ ಹಸಿರು ನ್ಯಾಯಾಲಯ (ಎನ್ಜಿಟಿ) ನಿರ್ಧಾರ ತೆಗೆದುಕೊಳ್ಳಲಿದೆ. 


COMMERCIAL BREAK
SCROLL TO CONTINUE READING

ವಾಹನಗಳ ಬೆಸ-ಸಮ ವಾಸ್ತವದಲ್ಲಿ ಎಷ್ಟು ಪರಿಣಾಮಕಾರಿ ಎಂಬುದನ್ನು ತಿಳಿಯದೆ ರಾಜಧಾನಿಯಲ್ಲಿ ಅದನ್ನು ಅನ್ವಯಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಶುಕ್ರವಾರ ಎನ್ಜಿಟಿ ತಿಳಿಸಿದೆ. ನವೆಂಬರ್ 13 ರಿಂದ 17 ರವರೆಗೆ ದೆಹಲಿ ಸರ್ಕಾರದ ಬೆಸ-ಸಮ ಯೋಜನೆಯನ್ನು ಅನುಷ್ಠಾನಗೊಳಿಸಿದ ಒಂದು ದಿನದ ನಂತರ ಎನ್ಜಿಟಿ ಈ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ದೆಹಲಿ ಮತ್ತು ಎನ್ಸಿಆರ್ ಪ್ರದೇಶಗಳಲ್ಲಿ ತೀವ್ರ ವಾಯು ಮಾಲಿನ್ಯವನ್ನು ಎದುರಿಸಲು ದೆಹಲಿ ಸರ್ಕಾರವು ಮತ್ತೊಮ್ಮೆ ಈ ವಿಚಿತ್ರ ಯೋಜನೆಯನ್ನು ರೂಪಿಸಿದೆ.


ಶುಕ್ರವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ, ಈ ಬೆಸ-ಸಮ ಯೋಜನೆ ಜಾರಿಯಾಗುವುದು ವಾಸ್ತವದಲ್ಲಿ ಎಷ್ಟು ಪರಿಣಾಮಕಾರಿ ಎಂಬುದನ್ನು ಸರ್ಕಾರ ನ್ಯಾಯಾಲಯಕ್ಕೆ ಮನವರಿಕೆ ಮಾಡುವಂತೆ ಎನ್ಜಿಟಿ ಆದೇಶಿಸಿದೆ. ಎನ್ಜಿಟಿಯ ಅಧ್ಯಕ್ಷರಾದ ಸ್ವತಂತ್ರ ಕುಮಾರ್, ರಾಷ್ಟ್ರೀಯ ಹಸಿರು ನ್ಯಾಯಾಲಯ ಯೋಜನೆಗೆ ವಿರುದ್ಧವಾಗಿಲ್ಲ, ಆದರೆ ಇದು ಎಷ್ಟರಮಟ್ಟಿಗೆ ನ್ಯಾಯ ಸಮ್ಮತವಾಗಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡುವಂತೆ ಕೋರಿದೆ ಎಂದು ತಿಳಿಸಿದರು.


"DPCC (ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ) ಮತ್ತು CPCB ಎಂದು ಕಳೆದ ವರ್ಷ ಈ ಯೋಜನೆಯನ್ನು ಅಳವಡಿಸಿದ್ದಾಗ ಮಾಲಿನ್ಯದ ಮಟ್ಟದಲ್ಲಿ ಯಾವುದೇ ಬದಲಾವಣೆಗಳಾಗಿರಲಿಲ್ಲ. ಇದರಿಂದ ಮಾಲಿನ್ಯಕ್ಕೆ ಸಣ್ಣ ಕಾರುಗಳು ಮುಖ್ಯ ಕಾರಣವಲ್ಲ ಎಂದು ಸ್ಪಷ್ಟವಾಗುತ್ತದೆ ಎಂದು ಅವರು ತಿಳಿಸಿದರು.