ನವದೆಹಲಿ: ಒಡಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ರವರ ಹಿರಿಯ ಸಹೋದರಿ ಹಾಗೂ ಲೇಖಕಿ ಗೀತಾ ಮೆಹ್ತಾ ಶನಿವಾರದಂದು ಪದ್ಮಶ್ರೀ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ಪತ್ರಿಕಾ ಹೇಳಿಕೆ ನೀಡಿರುವ ಗೀತಾ ಮೆಹ್ತಾ " ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಅದನ್ನು ನಾನು ಗೌರವಿಸುತ್ತೇನೆ.ಆದರೆ ಅದನ್ನು ಅಷ್ಟೇ ಗೌರವಯುತವಾಗಿ ನಾನು ತಿರಸ್ಕರಿಸುತ್ತೇನೆ.ಇನ್ನೇನು ಸಾರ್ವತ್ರಿಕ ಚುನಾವಣೆ ಇರುವುದರಿಂದ ಪ್ರಶಸ್ತಿ ನೀಡುತ್ತಿರುವ ಅವಧಿಯನ್ನು ತಪ್ಪಾಗಿ ಭಾವಿಸಲಾಗುತ್ತದೆ.ಆದ್ದರಿಂದ ಇದು ನನಗೆ ಮತ್ತು ಸರ್ಕಾರಕ್ಕೆ ಮುಜುಗುರವನ್ನುಂಟು ಮಾಡುತ್ತದೆ" ಎಂದು ಅವರು ಹೇಳಿಕೆ ನೀಡಿದ್ದಾರೆ.


ಗೀತಾ ಮೆಹತಾ ಅವರು ಸಾಹಿತ್ಯ ಮತ್ತು ಶಿಕ್ಷಣ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದರು.ಶುಕ್ರವಾರದಂದು ಗೃಹ ಸಚಿವಾಲಯ ವಿದೇಶೀಯಳು ಎಂದು ಹೇಳಿತ್ತು, ಆದರೆ ಮುಖ್ಯಮಂತ್ರಿ ಕಚೇರಿಯಲ್ಲಿನ ಮೂಲಗಳು ಆಕೆ ಭಾರತೀಯ ನಾಗರಿಕಳು ಎಂದು ಸ್ಪಷ್ಟಪಡಿಸಿದೆ. 


ಗೀತಾ ಮೆಹ್ತಾ ಓಡಿಸ್ಸಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಮೂವರು ಮಕ್ಕಳಲ್ಲಿ ಒಬ್ಬರು. ಪ್ರಮುಖ ಪ್ರಕಾಶಕರಾದ ಸೋನ್ನಿ ಮೆಹ್ತಾ ಅವರನ್ನು ಮದುವೆಯಾಗಿದ್ದಾರೆ.