Marriage Fraud: ಏಳು ರಾಜ್ಯಗಳಲ್ಲಿ 14 ಮಹಿಳೆಯರ ಜೊತೆಗೆ ವಿವಾಹ, ನಂತರ ದುಡ್ಡು ತಗೊಂಡು ಪರಾರಿಯಾಗುತ್ತಿದ್ದ ಬ್ಲಫ್ ಮಾಸ್ಟರ್
Marriage Fraud - ಆರೋಪಿಯು 1982ರಲ್ಲಿ ಮೊದಲ ಮದುವೆಯಾಗಿದ್ದು, 2002ರಲ್ಲಿ ಎರಡನೇ ಮದುವೆಯಾಗಿದ್ದಾನೆ. ಈ ಎರಡೂ ಮದುವೆಯಿಂದ ಅವನಿಗೆ ಐವರು ಮಕ್ಕಳಿದ್ದಾರೆ.
ನವದೆಹಲಿ: ಮದುವೆಯಾಗುವ ನೆಪದಲ್ಲಿ ಮ್ಯಾಟ್ರಿಮೋನಿಯಲ್ ಸೈಟ್ (Matrimonial Site) ನಲ್ಲಿ ಹುಡುಗಿಯರನ್ನು ಮದುವೆಯಾಗಿ ಹಣದೊಂದಿಗೆ ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದುವರೆಗೆ 7 ರಾಜ್ಯಗಳಲ್ಲಿ 14 ಹುಡುಗಿಯರನ್ನುಆತ ಮದುವೆಯಾಗಿದ್ದಾನೆ. ಒಡಿಶಾದ ಕೇಂದ್ರಪಾಡಾ (Kendrapada) ಜಿಲ್ಲೆಯ ಪಟ್ಕುರಾ ಪೊಲೀಸ್ ಠಾಣೆ (Patkura) ವ್ಯಾಪ್ತಿಯ ಗ್ರಾಮದ ನಿವಾಸಿ 60 ವರ್ಷದ ವ್ಯಕ್ತಿ, ಆರೋಪಿತ ಪತ್ನಿಯರನ್ನು ಬಿಟ್ಟು ಹೋಗುವ ಮೊದಲು ಈ ಮಹಿಳೆಯರಿಂದ ಹಣವನ್ನು ಪಡೆದಿದ್ದಾನೆ. ಆದರೆ, ಬಂಧಿತ ವ್ಯಕ್ತಿ ಆರೋಪವನ್ನು ನಿರಾಕರಿಸಿದ್ದಾನೆ. ಆರೋಪಿಯು 1982ರಲ್ಲಿ ಮೊದಲ ಮದುವೆಯಾಗಿದ್ದು (Marriage Bluf Master), 2002ರಲ್ಲಿ ಎರಡನೇ ಮದುವೆಯಾಗಿದ್ದು, ಈ ಎರಡೂ ವಿವಾಹಗಳಿಂದ ಆತನಿಗೆ ಐವರು ಮಕ್ಕಳಿದ್ದಾರೆ ಎಂದು ಭುವನೇಶ್ವರ ಉಪ ಪೊಲೀಸ್ ಆಯುಕ್ತ (Bhubaneshwar Deputy Police Commissioner) ಉಮಾಶಂಕರ್ ದಾಸ್ (Umashankar Das) ತಿಳಿಸಿದ್ದಾರೆ.
ಇದನ್ನೂ ಓದಿ-Viral Video: ಹೆಂಡತಿಗೆ ಬಸ್ ಹತ್ತಿಸಲು ಗಂಡ ಏನು ಮಾಡಿದ್ದಾನೆ ನೋಡಿ..!
ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ದಾಸ್, ವ್ಯಕ್ತಿ 2002 ರಿಂದ 2020 ರವರೆಗೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳ ಮೂಲಕ ಇತರ ಮಹಿಳೆಯರೊಂದಿಗೆ ಸ್ನೇಹ ಬೆಳೆಸಿದ್ದಾನೆ ಮತ್ತು ಮೊದಲ ಹೆಂಡತಿಯರಿಗೆ ಯಾವುದೇ ಮಾಹಿತಿ ನೀಡದೆ ಆತ ಈ ಮಹಿಳೆಯರನ್ನು ವಿವಾಹವಾಗಿದ್ದಾನೆ ಎಂದು ಹೇಳಿದ್ದಾರೆ. ಆತ ದೆಹಲಿಯಲ್ಲಿ ಶಾಲಾ ಶಿಕ್ಷಕಿಯಾಗಿರುವ ತನ್ನ ಕೊನೆಯ ಪತ್ನಿಯೊಂದಿಗೆ ಒಡಿಶಾದ (Odisha) ರಾಜಧಾನಿ ಭುವನೇಶ್ವರದಲ್ಲಿ (Bhubaneshwar) ವಾಸಿಸುತ್ತಿದ್ದಾನೆ. ಆದರೆ ಪತ್ನಿಗೆ ಆತನ ಹಿಂದಿನ ಮದುವೆಗಳ ಬಗ್ಗೆ ಮಾಹಿತಿ ದೊರೆತಿದ್ದು ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ-Mandi Community: ಇಲ್ಲಿ ತಂದೆಯೇ ತನ್ನ ಒಡಹುಟ್ಟಿದ ಮಗಳಿಗೆ ವರನಾಗುತ್ತಾನೆ!
ಆ ಬಳಿಕ ಪೊಲೀಸರು ಆತನನ್ನು ಬಾಡಿಗೆ ಮನೆಯಿಂದ ಬಂಧಿಸಿದ್ದಾರೆ. ಡೆಪ್ಯುಟಿ ಕಮಿಷನರ್ ಆಫ್ ಪೋಲಿಸ್ ಪ್ರಕಾರ, ಆರೋಪಿಗಳು ಮಧ್ಯವಯಸ್ಕ ಒಂಟಿ ಮಹಿಳೆಯರಿಗೆ ಬಲೆ ಬೀಸುತ್ತಿದ್ದ ಅದರಲ್ಲೂ ವಿಶೇಷವಾಗಿ ವಿಚ್ಛೇದಿತರನ್ನ ತನ್ನ ಬಲೆಗೆ ಬೀಳಿಸುತ್ತಿದ್ದ. ಈ ಮಹಿಳೆಯರು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ಸಂಗಾತಿಗಳನ್ನು ಹುಡುಕುತ್ತಿದ್ದರು. ಪೊಲೀಸರ ಪ್ರಕಾರ, ಆರೋಪಿ ಅವರನ್ನು ಬಿಟ್ಟು ಹೋಗುವ ಮೊದಲು ಹಣವನ್ನು ತೆಗೆದುಕೊಳ್ಳುತ್ತಿದ್ದ ಎನ್ನಲಾಗಿದೆ. ಆರೋಪಿ ಬಳಿಯಿಂದ 11 ಎಟಿಎಂ ಕಾರ್ಡ್‌ಗಳು, ನಾಲ್ಕು ಆಧಾರ್ ಕಾರ್ಡ್‌ಗಳು ಮತ್ತು ಇತರ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ-Mia Khalifa: ವಾರ್ನಿಂಗ್ ಕೊಟ್ಟ ಮಿಯಾ ಖಲೀಫಾ, ಫೋಟೋ ಶೇರ್ ಮಾಡಿ ಹೇಳಿದ್ದೇನು ಗೊತ್ತಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.